Bengaluru Metro: ಮೆಟ್ರೋ ಟಿಕೆಟ್ ದರ 45% ಏರಿಕೆ ಆದೇಶ ಯಾವಾಗ?

ಬೆಂಗಳೂರು, ಜನವರಿ 20: ಬೆಂಗಳೂರು ನಮ್ಮ ಮೆಟ್ರೋ ನಿಗಮವು (BMRCL) ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲು ನಿರ್ಧರಿಸಿದೆ. ಶೇಕಡಾ 40-45ರಷ್ಟು ಪ್ರಯಾಣ ದರ ಹೆಚ್ಚಳ ಘೋಷಿಸಲು ಮುಂದಾಗಿತ್ತು. ಆದರೆ ಪ್ರಯಾಣಿಕರ ಆಕ್ರೋಶ, ವಿರೋಧ ಬೆನ್ನಲ್ಲೆ ಶನಿವಾರ ನಿರ್ಧಾರ ಪ್ರಕಟಿಸಿಲ್ಲ ಎನ್ನಲಾಗಿದೆ. ಇನ್ನೊಂದು ವಾರದಲ್ಲಿ ಹೊಸ ದರ ನಿಗದಿ ಮಾಡಿ ಆದೇಶಿಸುವ ಸಾಧ್ಯತೆ ಇದೆ. ಈ ಮಧ್ಯೆ ಮೆಟ್ರೋ ಟಿಕೆಟ್ ಏರಿಕೆ ನಿರ್ಧಾರ ಮರುಪರಿಷ್ಕರಣೆ ಮಾಡುವ ಸಂಭವವು ಇದೆ ಎನ್ನಲಾಗುತ್ತಿದೆ.

ಸಮಿತಿಯಿಂದ ವರದಿ ಸ್ವಕರಿಸಿ ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಜನರ ಅಭಿಪ್ರಾಯ ಕೇಳಿದ್ದ BMRCL ಇನ್ನೇನು ದರ ಏರಿಕೆ ಜಾರಿಗೊಳಿಸಿತು ಎನ್ನಷ್ಟರದಲ್ಲಿ ನಿರ್ಧಾರವನ್ನು ತಡೆ ಹಿಡಿದಿದೆ. ಜನರಿಂದ ವ್ಯಾಪಕ ಟೀಕೆಗಳು, ಆಕ್ರೋಶಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ನಿರ್ಧಾರಕ್ಕೆ ತಡೆ ಬಿದ್ದಿರಬಹುದು. ಉದ್ದೇಶಿತ ದರ ಏರಿಕೆಯನ್ನು ಪುನಃ ಪರಿಶೀಲಿಸಲು ಮನಸ್ಸು ಮಾಡಿದೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.

Namma Metro Ticket Price 45 Percent Increase May be Announced in Next Week

ಮುಂದಿನ ವಾರವೇ ದರ ಏರಿಕೆ ಆದೇಶ ಪ್ರಕಟ?

ಬೆಂಗಳೂರು ನಮ್ಮ ಮೆಟ್ರೋ ಆಡಳಿತ ಮಂಡಳಿಯಿಂದ ಮುಂದಿನ ವಾರವೇ ಹೊಸದಾಗಿ ಪರಿಷ್ಕೃತಗೊಂಡ ಮೆಟ್ರೋ ಪ್ರಯಾಣ ದರವು ಜಾರಿಗೆ ಬರಬಹುದು. ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಪ್ರಕಟವಾಗಬಹುದ ಎಂದು TNIE ವರದಿ ಮಾಡಿದೆ.

ದರ ಏರಿಕೆಗೆ BMRCL ಸಮರ್ಥನೆ

ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ಎದುರಿಸಿದ ಬಿಎಂಆರ್‌ಸಿಎಲ್ ಮಹಿಳೆಯರಿಗೆ ಮೀಸಲಾದ ಬೋಗಿಗಳು, ಸಮಯಕ್ಕೆ ಸರಿಯಾದ ಸೇವೆ, ಸ್ವಚ್ಛವಾದ ಶೌಚಾಲಯ ನಿರ್ವಹಣೆ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಸೇವೆ ಸೇರಿದಂತೆ ನಿರ್ವಹಣೆ ವೆಚ್ಚದ ಸಲುವಾಗಿ ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ.

ಶೇಕಡಾ 40 ಅದಕ್ಕಿಂತಲೂ ಹೆಚ್ಚಿನ ದರ ಏರಿಕೆಯಿಂದ ನಮಗೆಲ್ಲ (ಪ್ರಯಾಣಿಕರಿಗೆ) ತೊಂದರೆ ಆಗುತ್ತದೆ. ಅದೆಷ್ಟೋ ಬಾರಿ ನಾವು ಮೆಟ್ರೋದಲ್ಲಿ ನಿಂತುಕೊಂಡೆ ಪ್ರಯಾಣಿಸುತ್ತೇವೆ. ಕೂರಲು ಆಸನ ಸಿಗುವುದಿಲ್ಲ. ಪ್ರಯಾಣಿಕರ ದಟ್ಟಣೆ ಇರುತ್ತದೆ. ರಸ್ತೆ ಸಂಚಾರ ತೊಂದರೆ ಆದರೆ, ಮೆಟ್ರೋದಲ್ಲಿ ನಿಂತು ಪ್ರಯಾಣ ಮಾಡುವುದು ಮತ್ತೊಂದು ರೀತಿಯ ಕಿರಿ ಕಿರಿ ಎಂದು ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದರ ಏರಿಕೆಗೆ ಆಕ್ಷೇಪ ಎತ್ತಿದ್ದಾರೆ.

ಯೋಜನೆ ನಿಲ್ಲಿಸಿ, ಸಾರಿಗೆ ನಿರ್ವಹಣೆ ಮಾಡಿ

ಸರ್ಕಾರ ಸರ್ಕಾರವು ತನ್ನ ಸಾರ್ವಜನಿಕ ಸಾರಿಗೆ ಸೇವೆ ಸುಧಾರಣೆ ಅಸಾಧ್ಯವಾದಲ್ಲಿ ಮೆಟ್ರೋ ದರ ಏರಿಕೆ ಹೇಗೆ ಸಾಧ್ಯವಾಗುತ್ತದೆ ಎಂದು ಮಹಿಳಾ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಬೆಂಗಳೂರು ಮೆಟ್ರೋ ದರ ಏರಿಕೆ ಆಗಿದ್ದಲ್ಲಿ, ಇದು ನೆರೆಯ ಚೆನ್ನೈ, ಹೈದರಾಬಾದ್, ದಹಲಿ ಮೆಟ್ರೋ ಪ್ರಯಾಣ ದರಕ್ಕಿಂತಲೂ ದುಬಾರಿಯಾಗುತ್ತದೆ.

ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿದ್ದರೂ ನಿರ್ವಹಣೆ ವೆಚ್ಚಕ್ಕೆ ಸರಿದೂಗಿಸಲು ದರ ಏರಿಕೆ ಎಂಬ ಹೇಳಿಕೆಗಳು ಸಮಂಜಸವಲ್ಲ. ಅಷ್ಟಿದ್ದರೆ ಉಚಿತ ಶಕ್ತಿ ಯೋಜನೆ ಸರ್ಕಾರಿ ನಿಲ್ಲಿಸಿ, ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೆಲವು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಇವರಷ್ಟೇ ಅಲ್ಲ ನೌಕರರ ಸಂಘಗಳು, ಸಂಘಟನೆಗಳು ಪ್ರಯಾಣಿಕರ ಮೇಲೆ ದರ ಏರಿಕೆ ಬರೆ ಹಾಕುವ ಬದಲು, ಪಾರ್ಕಿಂಗ್, ಜಾಹೀರಾತು, ವಾಣಿಜ್ಯ ಮಳಿಗೆ ಬಾಡಿಗೆಗಳಿಂದ ಆದಾಯ ಹೆಚ್ಚಳಕ್ಕೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+