Namma metro: ಜನದಟ್ಟಣೆಯಿಂದ ಸದ್ದಾಗುತ್ತಿರುವ ನೇರಳೆ ಮಾರ್ಗ, ಈ ನಿಲ್ದಾಣದಲ್ಲಿ ಜನಜಂಗುಳಿ, ಫೋಟೊ
ಬೆಂಗಳೂರು, ಡಿಸೆಂಬರ್ 10: ಚಲ್ಲಘಟ್ಟದಿಂದ-ವೈಟ್‌ಫಿಲ್ಡ್ ವರೆಗೆ ಬೆಂಗಳೂರು ನಮ್ಮ ಮೆಟ್ರೋದ ನೇರಳೆ ಮಾರ್ಗ ಸಂಪೂರ್ಣವಾಗಿ ತೆರೆದ ಬಳಿಕ ಈ ಮಾರ್ಗದಲ್ಲಿ ಒಂದಲ್ಲ ಒಂದು ಕಡೆ ಅಪಾರ ದಟ್ಟಣೆ ಕಂಡು ಬರುತ್ತಿದೆ. ಶನಿವಾರ ಸಂಜೆ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಹಿಡಿದಂತೆ ಜನ ನಿಂತಿದ್ದು ಕಂಡು ಬಂತು.
ಒಟ್ಟು ಸುಮಾರು ನಲವತ್ತು ಕಿಲೋ ಮೀಟರ್ ಉದ್ದದ ನೇರಳೆ ಮಾರ್ಗವು ತಿಂಗಳುಗಳ ಹಿಂದಷ್ಟೇ ವಾಣಿಜ್ಯ ಸಂಚಾರ ಆರಂಭಿಸಿದೆ. ಇದು ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಿದ ಮೊದಲ ಮಾರ್ಗವಾಗಿದೆ. ಹೀಗಾಗಿ ನಗರಕ್ಕೆ ಬರುವ ಜನರ ವೈಟ್‌ಫಿಲ್ಡ್‌ಗೆ ಈ ನೇರಳೆ ಮಾರ್ಗ ಮೆಟ್ರೋ ಅಸರಿಯೇ ಪ್ರಯಾಣ ಮಾಡುವುದು ಹೆಚ್ಚಾಗಿದೆ.

ಶನಿವಾರ ಸಹ ವಿವಿಧ ಕಡೆಗಳಿಂದ ಬಂದ ಜನರು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ (SV Road Metro station) ಗೆ ಧಾವಿಸಿದ್ದಾರೆ. ಈ ವೇಳೆ ಅವರೆಲ್ಲೂ ವೈಟ್‌ಫಿಲ್ಡ್ ಕಡೆಗೆ ತೆರಳುವ ಮೆಟ್ರೋ ರೈಲಿಗೆ ಕಾಯುತ್ತಿದ್ದರು. ಇಡಿ ಪ್ಲಾಟ್‌ಫಾರ್ಮ್ ಹಿಡಿಸದಂತೆ ಜನರು ತುಂಬಿಕೊಂಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.
ನಿಲ್ದಾಣದ ಜನಜಂಗುಳಿ ಫೋಟೋ ವೈರಲ್
ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಡಿಪೋ ಆಗಿರುವುದರಿಂದ ಅಲ್ಲಿ ಜನರಿಗೆ ಪ್ಲಾಟ್‌ಫಾರ್ಮ ಹಿಡಿಯುವುದು ಕಷ್ಟವಾಗುವ ಹಿನ್ನೆಲೆಯಲ್ಲಿ ಪ್ರಯಾಣಿರು ಎಸ್‌ವಿ ರಸ್ತೆ ನಿಲ್ದಾಣದಲ್ಲಿಯೇ ತುಂಬಿಕೊಂಡಿದ್ದರು. ಈ ನಿಲ್ದಾಣದಲ್ಲಿ ವೈಟ್‌ಫಿಲ್ಡ್ ಕಡೆಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದರು. ಹೀಗಾಗಿ ಒಂದು ಕಡೆಯ ಪ್ಲಾರ್ಟ್ ಫಾರ್ಮ್ ನಲ್ಲಿ ಜನಜಂಗುಳಿ ಶನಿವಾರ ಕಂಡು ಬಂದಿದೆ. ಈ ಕುರಿತು ಫೋಟೊಗಳು ವೈರಲ್ ಆಗಿವೆ.
ಈ ಪೋಟೋ ಕುರಿತು ನೆಟ್ಟಿಗರು ಅವಲೋಕನ ಜೊತೆಗೆ ಇಷ್ಟು ಪ್ರಮಾಣದ ಜನ ದಟ್ಟಣೆಗೆ ಕಾರಣವನ್ನು ಕಂಡು ಕೊಂಡಿದ್ದಾರೆ. ನೇರಳೆ ಮಾರ್ಗದಲ್ಲಿ ಇತ್ತೀಚೆಗೆ ಹೀಗೆ ಜನ ದಟ್ಟಣೆ ಕಂಡು ಬರುತ್ತಿದೆ. ಸಾಮಾನ್ಯವಾಗಿ ವೈಟ್‌ಫಿಲ್ಡ್, ಎಂಜಿ, ರಸ್ತೆ,ಕೆಆರ್ ಪುರಂ, ಇಂದಿರಾ ನಗರ, ಮೆಜೆಸ್ಟಿಕ್ ಕಡೆಗೆ ಹೆಚ್ಚು ಜನರು ಓಡಾಡುತ್ತಾರೆ. ಹೀಗಾಗಿ ಕೆಲವೊಮ್ಮೆ ದಿಢೀರನೇ ಜನ ಜಂಗುಳಿ ಕಂಡು ಬರುತ್ತಿದೆ.

ಮೂರು ನಿಮಿಷಕ್ಕೆ ಒಂದು ರೈಲು ಸಂಚಾರ
ಸಾಮಾನ್ಯವಾಗಿ ವೈಟ್‌ಫಿಲ್ಡ್ ನಿಂದ ಮೈಸೂರು ರಸ್ತೆವರೆಗೆ ಜನರು ಹೆಚ್ಚಿರುತ್ತಾರೆ. ಮೆಜೆಸ್ಟಿಕ್ ಜಂಕ್ಷನ್ ಆಗಿದ್ದರಿಂದ ಹಸಿರು ಮಾರ್ಗದ ಪ್ರಯಾಣಿಕ ನೇರಳೆ ಮಾರ್ಗದಲ್ಲಿ ರೂಟ್ ಬದಲಿಸುತ್ತಾರೆ. ಪೀಕ್ ಸಮಯದಲ್ಲಿ ನಮ್ಮ ಮೆಟ್ರೋ ಪ್ರತಿ ಮೂರು ನಿಮಿಷಗಳಿಗೆ ಒಂದಂರಂತೆ ಮೆಟ್ರೋ ಓಡಿಸುತ್ತಾರೆ. ಹೀಗಿದ್ದರು ಶನಿವಾರ ಸಂಜೆ ಎಸ್‌ವಿ ರಸ್ತೆಯಲ್ಲಿ ದಟ್ಟಣೆ ಕಂಡು ಬಂದಿದೆ.
ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ನೇರಳೆ ಮಾರ್ಗದ ಮೆಟ್ರೋ ಬಳಕೆದಾರರ ಸಂಖ್ಯೆ ಬಹುಬೇಗನೆ ಹೆಚ್ಚಾಗಿದೆ. ಆದ್ದರಿಂದ ಬೋಗಿ ಹೆಚ್ಚಿಸಬೇಕು. ರೈಲುಗಳ ಆವರ್ತನ ಬೇಗ ಹೆಚ್ಚಿಸಬೇಕು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವು ಹೆಚ್ಚಾಗುತ್ತಿದೆ. ಸದ್ಯ ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ಸುಮಾರು 57 ರೈಲುಗಳನ್ನು ಓಡಿಸುತ್ತದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ರೈಲುಗಳು ನೇರಳೆ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂಬುದು ವಿಶೇಷ.












Click it and Unblock the Notifications