Namma Metro: ಕಾರ್ಮಿಕನಿಗೆ ಪ್ರವೇಶ ನಕಾರದ ವಿಡಿಯೋ: ಸಿಬ್ಬಂದಿ ನಡೆ ಸಮರ್ಥಿಸಿಕೊಂಡ BMRCL

ಬೆಂಗಳೂರು, ಏಪ್ರಿಲ್ 11: ಬೆಂಗಳೂರು ನಮ್ಮ ಮೆಟ್ರೋ ಪಾಸಿಟಿವ್ ಜೊತೆಗೆ ನೆಗಟಿವ್ ವಿಚಾರಗಳಿಂದಲೂ ಆಗಾಗ ಸುದ್ದಿಯಲ್ಲಿರುತ್ತದೆ. ಮೊನ್ನೆಯಷ್ಟೇ ಕಾರ್ಮಿಕನ ಬಟ್ಟೆ ಆಧಾರಿಸಿ ಆತನನ್ನು ಮೆಟ್ರೋ ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಕಾರ್ಮಿಕನ ಕತೆಯೇ ಬೇರೆ ಇದೆ ಎಂದು BMRCL ತನ್ನ ನಡೆ ಸಮರ್ಥಿಸಿಕೊಂಡಿದೆ.

ಬೆಂಗಳೂರಿನ ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಬರುವ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಏಪ್ರಿಲ್ 07ರಂದು ಕಾರ್ಮಿಕನೊಬ್ಬ ಶುಭ್ರ ಬಟ್ಟೆ ಹಾಕಿಲ್ಲವೆಂದು ಹೇಳಿ ತಪಾಸಣೆ ವೇಳೆ ಸಿಬ್ಬಂದಿ ಆತನನ್ನು ಒಳಗೆ ಬಿಟ್ಟಿರಲಿಲ್ಲ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಆಕ್ರೋಶ ಹೊರ ಹಾಕಿದ್ದರು.

Namma Metro Staff Denied to Labour Entry Viral Video BMRCL Clarified the What Happen Here

ಈ ಘಟನೆಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ದ ಅಧಿಕಾರಿಗಳು, ಮೆಟ್ರೋ ಸಿಬ್ಬಂದಿ ಒಳಗೆ ಬಿಡದ ವ್ಯಕ್ತಿಯ ಬಟ್ಟೆ ಕುರಿತು ನಮಗೆ ತಕರಾರು ಇಲ್ಲ. ಆತ ಮಧ್ಯಪಾನ ಮಾಡಿದ್ದ. ಇದು ತಪಾಸಣೆ ವೇಳೆ ತಿಳಿದು ಬಂದಿತ್ತು ಎಂದು ತಿಳಿಸಿದೆ.

BMRCL ಸ್ಪಷ್ಟನೆ ಏನು?

ಈ ಕುರಿತು ನಮ್ಮ ಮೆಟ್ರೋ ಪ್ರಕಟಣೆ ಹೊರಡಿಸಿದ್ದ, ಅದರಲ್ಲಿ ''ಏ.7ರಂದು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 7.34ರ ಸುಮಾರಿಗೆ ಭದ್ರತಾ ತಪಾಸಣೆಯಲ್ಲಿ ವ್ಯಕ್ತಿಯೊಬ್ಬರಿಂದ ಮದ್ಯಪಾನದ ವಾಸನೆ ಗಮನಿಸಿ ಸೂಕ್ತ ವಿಚಾರಣೆ ನಡೆಸಲಾಗಿ, ವ್ಯಕ್ತಿ ಈ ಮೊದಲೇ ಮದ್ಯಪಾನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.

ಭದ್ರತಾ ಸಿಬ್ಬಂದಿಯು ವ್ಯಕ್ತಿಯ ಸ್ಥಿತಿಯನ್ನು ಮೌಲ್ಯಮಾಪನ ಮಾಡಿ ವ್ಯಕ್ತಿಯ ಸ್ಥಿತಿಯನ್ನು ದೃಢೀಕರಿಸಿ ಇತರ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಸಲು ಅವಕಾಶ ಮಾಡಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವಂತೆ ಸಮಸ್ಯೆ ವ್ಯಕ್ತಿಯ ಉಡುಪಿನ ಬಗ್ಗೆ ಸಂಬಂಧವಿರುವುದಿಲ್ಲ'' ಎಂದು BMRCL ತಿಳಿಸಿದೆ.

Namma Metro Staff Denied to Labour Entry Viral Video BMRCL Clarified the What Happen Here

ರೈತನಂತೆ ಈ ವ್ಯಕ್ತಿಯ ಘಟನೆಯ ವಿಡಿಯೋ

ಈ ಹಿಂದೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ರೈತರೊಬ್ಬರು ಪ್ರವೇಶಿಸಲು ಮುಂದಾದಾಗ, ಅವರನ್ನು ಬಟ್ಟೆ ವಿಚಾರವಾಗಿ ತಡೆಯಲಾಗಿತ್ತು. ಕೊಳಕಾದ ಬಟ್ಟೆ ಧರಿಸಿದ್ದರು ಎಂದು ರೈತರೊಬ್ಬರನ್ನು ಒಳ ಬಿಡದ ಮೆಟ್ರೋ ಸಿಬ್ಬಂದಿ ವಿರುದ್ಧ ಅಲ್ಲಿಯೇ ಇದ್ದ ಸಹ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದರು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರು ನಮ್ಮ ಮೆಟ್ರೋ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದವು. ಈ ಕಾರ್ಮಿಕನ ವಿಚಾರದಲ್ಲೂ ಹಾಗೇ ಆಗಿರಬೇಕು ಎಂದು ವಿಡಿಯೋದಿಂದ ನಂಬಲಾಗಿತ್ತು. ಆದರೆ ಇದಕ್ಕೆ ನಮ್ಮ ಮೆಟ್ರೋ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+