Namma Metro: ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ಮೇನ್‌ಲೈನ್ ಟೆಸ್ಟಿಂಗ್ ಮಾರ್ಚ್‌ನಲ್ಲಿ ಸಾಧ್ಯತೆ

ಬೆಂಗಳೂರು, ಫೆಬ್ರವರಿ 08: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಲಿರುವ ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ರೈಲಿನ ಚೈನೀಸ್ ನಿರ್ಮಿತ ಮೂಲ ಮಾದರಿಯು ಚೆನ್ನೈ ಬಂದರಿಗೆ ಆಗಮಿಸಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ಈ ಮೆಟ್ರೋ ರೈಲು ಫೆಬ್ರವರಿ ಮಧ್ಯದ ವೇಳೆಗೆ ಹೆಬ್ಬಗೋಡಿ ಮೆಟ್ರೋ ರೈಲು ಡಿಪೋಗೆ ಶೀಘ್ರದಲ್ಲೇ ಬರಲಿದೆ.

ಈ ಚಾಲಕ ರಹಿತ ಮೆಟ್ರೋ ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲಿದೆ. ಫೆಬ್ರವರಿ 18 ರೊಳಗೆ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ. ಈ ರೈಲನ್ನು ಚೀನಾ ಮೂಲದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ತಯಾರಿಸಿದರೆ, ಉಳಿದ ಕೋಚ್‌ಗಳನ್ನು ಮೇಕ್-ಇನ್-ಇಂಡಿಯಾ ಯೋಜನೆಯ ಭಾಗವಾಗಿ ಅದರ ದೇಶೀಯ ಪಾಲುದಾರ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್‌ನೊಂದಿಗೆ ತಯಾರಿಸಲಾಗುತ್ತದೆ.

Namma Metros Yellow Line Driverless Train To Undergo Mainline Testing likely in March

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ 216 ಬೋಗಿಗಳನ್ನು ಪೂರೈಸಲು 2019 ರಲ್ಲಿ ಚೀನಾದ ಸಂಸ್ಥೆಯು 1,578 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, ಡಿಪೋ ಮಟ್ಟದಲ್ಲಿ ಸರಣಿ ಪರೀಕ್ಷೆಗಳಿಗೆ ಒಳಗಾದ ನಂತರ ಮಾರ್ಚ್ ವೇಳೆಗೆ ಈ ಚಾಲಕ ರಹಿತ ಮೇನ್‌ಲೈನ್ ಟೆಸ್ಟಿಂಗ್‌ಗೆ ಸಿದ್ಧವಾಗಲಿದೆ.

"ಇ ಮೂಲಮಾದರಿಯು ಡಿಪೋದಲ್ಲಿ ಸಿಗ್ನಲಿಂಗ್ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಇತರ ವಿಷಯಗಳ ಜೊತೆಗೆ ಚೀನೀ ಎಂಜಿನಿಯರ್‌ಗಳ ಮೇಲ್ವಿಚಾರಣೆಯಲ್ಲಿ ಬೇಸಿಕ್ ಟೆಸ್ಟ್‌ಗಳಿಗೆ ಒಳಗಾಗುತ್ತದೆ. ಫೆಬ್ರವರಿ ಅಂತ್ಯದ ವೇಳೆಗೆ ಅಥವಾ ಮಾರ್ಚ್ ಆರಂಭದಲ್ಲಿ, ನಾವು ಮೇನ್‌ಲೈನ್ ಟೆಸ್ಟಿಂಗ್‌ಗಾಗಿ ಸಿದ್ಧ ಮಾಡುತ್ತೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೇನ್‌ಲೈನ್ ಟೆಸ್ಟಿಂಗ್ ರಿಸಲ್ಟ್‌ಗಳನ್ನು ಪರಿಶೀಲನೆಗಾಗಿ ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರಿಗೆ ಸಲ್ಲಿಸಲಾಗುವುದು. ಎಲ್ಲೋ ಟ್ರಾಕ್ ಕಾರ್ಯಗತಗೊಳಿಸುವ ಮೊದಲು ಸಂಪೂರ್ಣ ಪ್ರಕ್ರಿಯೆಯು ಕನಿಷ್ಠ ನಾಲ್ಕರಿಂದ ಐದು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ" ಎಂದು ಬಿಎಂಆರ್‌ಸಿಎಲ್ ವಕ್ತಾರರು ತಿಳಿಸಿದ್ದಾರೆ.

Namma Metros Yellow Line Driverless Train To Undergo Mainline Testing likely in March

ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ (ರೀಚ್ 5) ಸಂಪರ್ಕ ಕಲ್ಪಿಸುವ 18.82 ಕಿಮೀ ಉದ್ದದ ಮೆಟ್ರೊ ಮಾರ್ಗವನ್ನು 5,744 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಮೆಟ್ರೋ ವಿಸ್ತರಣೆಯು ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಐಟಿ ಹಬ್‌ಗೆ ಸಂಪರ್ಕ ಹೆಚ್ಚಿಸುವ ಮತ್ತು ಹೊಸೂರು ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+