Namma Metro: ಮೆಟ್ರೋ ಮಾಸಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ಬೆಂಗಳೂರು, ಡಿಸೆಂಬರ್ 03: ಬೆಂಗಳೂರು ಮೆಟ್ರೋ ಜಾಲವು ಕ್ರಮೇಣ ವಿಸ್ತರಣೆ ಆಗುತ್ತಿದೆ. ಹಾಲಿ 76 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಕಾರ್ಯಾಚರಣೆ ನಡೆಸುತ್ತಿದೆ. ಇತ್ತೀಚೆಗೆ ನಮ್ಮ ಮೆಟ್ರೋ ಮಾಸಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಇದರಿಂದ ನಿಗಮಕ್ಕೆ ಬರುತ್ತಿದ್ದ ಆದಾಯದಲ್ಲಿ ಕೂಡ ಹೆಚ್ಚಳವಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಹೇಳುವ ಪ್ರಕಾರ, ಕಳೆದ ಅಕ್ಟೋಬರ್ ತಿಂಗಳಲ್ಲಿ 2.38 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಇದರಿಂದ 61 ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ಗಳಿಕೆ ಆಗಿದೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

Namma Metro Ridership Increased up to 2 38 Crore in Last October 2024

ನಮ್ಮ ಮೆಟ್ರೋದಲ್ಲಿ ಅದೇ ಅಕ್ಟೋಬರ್ ತಿಂಗಳಲ್ಲಿ ಒಂದು ದಿನ ಗರಿಷ್ಠ ಜನರು ಸಂಚಾರ ಮಾಡಿದ್ದಾರೆ. ಅಕ್ಟೊಬರ್ 14ರಂದು 8.79 ಲಕ್ಷ ಮಂದಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದು, ಇದು ಒಂದು ದಿನದ ಗರಿಷ್ಠ ದಾಖಲೆಯಾಗಿದೆ. ಅಷ್ಟು ಮಂದಿ ಪ್ರಯಾಣಿಕರಿಂದ ಅಂದು ಒಂದೇ ದಿನ 2.40 ಕೋಟಿ ರೂಪಾಯಿಗೂ ಅಧಿಕ ಆದಾಯ ನಿಗಮಕ್ಕೆ ಬಂದಿದೆ.

ಅಕ್ಟೋಬರ್ ತಿಂಗಳಲ್ಲಿ ಪ್ರಯಾಣ ಮಾಡಿದ ಒಟ್ಟು 2.38 ಕೋಟಿ ಪ್ರಯಾಣಿಕರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್ ಕಾರ್ಡ್ (46%) ಬಳಕೆ ಮಾಡಿದ್ದಾರೆ. ಟೋಕನ್ ಬಳಕೆದಾರರು ಶೇಕಡಾ 29% ರಷ್ಟಿದೆ. ಇನ್ನೂ ಕ್ಯೂಆರ್‌ ಕೋಡ್ ಬಳಸಿ ಟಿಕೆಟ್ ಖರೀದಿಸಿ 23.68 % ಮಂದಿ ಪ್ರಯಾಣ ಮಾಡಿದ್ದಾರೆಂದು ವರದಿ ಆಗಿದೆ.

ಒಂದೇ ದಿನ 9.17 ಲಕ್ಷ ಮಂದಿ ಸಂಚಾರ, ದಾಖಲೆ

ಈ ಹಿಂದೆ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ 4 ಲಕ್ಷ, ನಂತರದ ದಿನಗಳಲ್ಲಿ 6 ಲಕ್ಷಕ್ಕೆ ಏರಿತು. ಸದ್ಯ 8 ಲಕ್ಷಕ್ಕೂ ಹೆಚ್ಚು ಜನರು ನಿತ್ಯ ಮೆಟ್ರೋದಲ್ಲಿ ಓಡಾಡುತ್ತಾರೆ. ಇದೇ ವರ್ಷ ಆಗಸ್ಟ್ 14ರಂದು ಬರೋಬ್ಬರಿ 9.17 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದರು. ಈ ಮೂಲಕ ಬಿಎಂಆರ್‌ಸಿಎಲ್ ಹೊಸ ದಾಖಲೆ ಸೃಷ್ಟಿಸಿತ್ತು.

ನಮ್ಮ ಮೆಟ್ರೋ ಚಲಘಟ್ಟ-ವೈಟ್‌ಫಿಲ್ಡ್ ವರೆಗಿನ ನೇರಳೆ ಮಾರ್ಗವನ್ನು ಸಂಪೂರ್ಣವಾಗಿ ತೆರೆದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಾಗುತ್ತಾ ಬಂತು. ಕೆಲವು ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಂದರೆ, ಬೆಂಗಳೂರಲ್ಲಿ ಐಪಿಎಲ್, ಇತರ ಕ್ರಿಕೇಟ್ ಪಂದ್ಯವಳಿ, ಫಲಪುಷ್ಪ ಪ್ರದರ್ಶನ ಸೇರಿದಂತೆ ಇನ್ನಿತರ ಕಾರ್ಯಕ್ರಮ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹಚ್ಚಿರುತ್ತದೆ.

ಮೆಟ್ರೋ ಹಳದಿ ಮಾರ್ಗ ಶೀಘ್ರವೇ ಮುಕ್ತ

ಆಗ ಪೇಪರ್ ಟಿಕೆಟ್ ಸೌಲಭ್ಯ ಕಲ್ಪಿಸಲಾಗುತ್ತದೆ. ಇತ್ತೀಚೆಗೆ ಮಾದಾವರ-ನಾಗಸಂದ್ರವರೆಗೆ ಮೆಟ್ರೋ ವಿಸ್ತರಣೆ ಹಸಿರು ಮಾರ್ಗ ತೆರೆಯಲಾಯಿತು. ಮುಂದಿನ ವರ್ಷ ಆರಂಭದಲ್ಲಿಯೇ ಮೆಟ್ರೋ ಹಳದಿ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+