ಭಾನುವಾರ ತಡವಾಗಿ ಸಂಚಾರ ನಡೆಸಲಿದೆ ನಮ್ಮ ಮೆಟ್ರೋ
ಬೆಂಗಳೂರು, ಸೆ.14 : ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವಿನ ನಮ್ಮ ಮಟ್ರೋ ರೈಲು ಪ್ರತಿ ಭಾನುವಾರ ಎರಡು ಗಂಟೆ ತಡವಾಗಿ ಸಂಚಾರ ನಡೆಸಲಿದೆ. ಸೆ.13ರಿಂದ ಈ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬಂದಿದೆ.
ಪ್ರತಿನಿತ್ಯ ನಮ್ಮ ಮೆಟ್ರೋ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯ ತನಕ ಕಾರ್ಯನಿರ್ವಹಣೆ ಮಾಡುತ್ತದೆ. ಆದರೆ, ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ರೀಚ್ -1ರ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಭಾನುವಾರ ರೈಲು ಎರಡು ಗಂಟೆ ತಡವಾಗಿ ಸಂಚಾರ ನಡೆಸಲಿದೆ. [ಮೆಟ್ರೋ ಸುರಂಗ ಮಾರ್ಗದಲ್ಲಿ ಸಂಚರಿಸಲು ಸಿದ್ಧರಾಗಿ]

ಬೆಳಗ್ಗೆ 8ರಿಂದ ರಾತ್ರಿ 10 ಗಂಟೆಯ ತನಕ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಈ ವೇಳಾಪಟ್ಟಿ ಭಾನುವಾರಕ್ಕೆ ಮಾತ್ರ ಸೀಮಿತವಾಗಿದ್ದು ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ಮಾರ್ಗಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.[ನಮ್ಮ ಮೆಟ್ರೋ ದರ ಪಟ್ಟಿ]
ನೂತನ ವಿಮಾನ ಸೇವೆ : ಬೆಂಗಳೂರು ಮತ್ತು ಹೈದರಾಬಾದ್ ನಡುವೆ ನೂತನ ವಿಮಾನ ಸೇವೆ ಆರಂಭವಾಗಿದೆ. ಟ್ರುಜೆಟ್ ಪ್ರತಿದಿನ ಬೆಂಗಳೂರು ಮತ್ತು ಹೈದ್ರಾಬಾದ್ ನಡುವೆ ಸಂಚಾರವನ್ನು ಆರಂಭಿಸಿದೆ. ['ನಮ್ಮ ಮೆಟ್ರೋ ಬೇಗ ಕಟ್ರೋಗೆ' 3 ವರ್ಷ]
ಸದ್ಯ, ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಪ್ರತಿದಿನ ಒಂದು ಬಾರಿ ವಿಮಾನ ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿಮಂಗಳೂರು, ಹುಬ್ಬಳ್ಳಿಗೂ ಸೇವೆ ವಿಸ್ತರಣೆ ಮಾಡಲು ಟ್ರು ಜೆಟ್ ನಿರ್ಧರಿಸಿದೆ. ದರ ಮತ್ತು ವೇಳಾಪಟ್ಟಿಗಾಗಿ www.trujet.com ವೆಬ್ ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications