Namma Metro QR code: ಇತರ ಡಿಜಿಟಲ್ ಸೇವೆಗೆ ವಿಸ್ತರಣೆ, ಹೊಸ ಅಪ್ಲಿಕೇಷನ್‌ಗೆ ಸಿದ್ಧತೆ: ಅಪ್ಡೇಟ್ ಗಮನಿಸಿ
ಬೆಂಗಳೂರು, ಫೆಬ್ರವರಿ 04: ಬೃಹತ್ ಜಾಲ ಸೃಷ್ಟಿಸಿಕೊಳ್ಳುತ್ತಿರುವ ನಮ್ಮ ಮೆಟ್ರೋ (namma metro) ಸಿಲಿಕಾನ್ ಸಿಟಿ ಬೆಂಗಳೂರಿನ ಅಚ್ಚುಮೆಚ್ಚಿನ ಸಾರಿಗೆಯಾಗಿದೆ. ಸುರಕ್ಷಿತ ಮತ್ತು ವೇಗದ ಸಾರಿಗೆ ನೀಡುತ್ತಿರುವ ಬಿಎಂಆರ್‌ಸಿಎಲ್ ಇದೀಗ ಹೆಚ್ಚುವರಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳಲು ಯೋಜಿಸಿದೆ.
ಹೌದು, ನಮ್ಮ ಮೆಟ್ರೋ ಜಾಲ ವ್ಯಾಪ್ತಿಯಲ್ಲಿ ಕ್ಯೂಆರ್ ಕೋಡ್ ಅಸ್ತಿತ್ವದಲ್ಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನಷ್ಟು ಡಿಜಿಟಿಲ್ ಸೇವೆಗೆ ವಿಸ್ತರಣೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ವರದಿ ಆಗಿದೆ.

ಸುರಕ್ಷತೆ ಜತೆಗೆ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ನಮ್ಮ ಮೆಟ್ರೋ ಉಳಿಸುತ್ತದೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಮೆಟ್ರೋವನ್ನು ಅವಲಂಬಿಸಿದ್ದಾರೆ. BMRCL ಈಗ ಹೆಚ್ಚಿನ ಡಿಜಿಟಲ್ ವ್ಯವಸ್ಥೆಗಳಲ್ಲಿ ಒಂದಾಗಿರುವ ತನ್ನ ಕ್ಯೂಆರ್ ಕೋಡ್ ವ್ಯವಸ್ಥೆ ಅನ್ನು ಸಾರ್ವತ್ರಿಕ ವೇದಿಕೆಗೆ ತರಲು ನಿರ್ಧರಿಸಿದೆ. ಹೊಸ ಅಪ್ಲಿಕೇಶನ್ ಲೋಕಾರ್ಪಣೆಗೂ ಸಿದ್ಧತೆ ನಡೆಸಿದೆ.
ವಿವಿಧ ಡಿಜಿಟಲ್ ಸೇವೆಗೆ ವಿಸ್ತರಣೆ
ಸದ್ಯ ನಮ್ಮ ಮೆಟ್ರೋದಲ್ಲಿ ಈಗಾಗಲೇ ಕ್ಯೂಆರ್ ಕೋಡ್ ವ್ಯವಸ್ಥೆ ಇದೆ. ಆದರೆ ಅಸ್ತಿತ್ವದಲ್ಲಿರುವ QR ಕೋಡ್ ಎಲ್ಲಾ ಅಪ್ಲಿಕೇಶನ್‌ಗಳಿಗೆ ಹೊಂದಿಕೆ ಆಗುವುದಿಲ್ಲ. ಬದಲಾಗಿ ಕೆಲವು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗಳ ಜತೆ ಮಾತ್ರವೇ ಬಳಕೆ ಆಗುತ್ತಿದೆ.
QR ಕೋಡ್ ಅಪ್ಲಿಕೇಶನ್ ಸೌಲಭ್ಯಗಳು Paytm, WhatsApp ಮತ್ತು Yatra ಅಪ್ಲಿಕೇಶನ್‌ಗಳಲ್ಲಿ ಮಾತ್ರ ಲಭ್ಯವಿದೆ. ಈ ಕಾರಣದಿಂದ ಟಿಕೆಟ್, ಟೋಕನ್ ರಹಿತ ಚಾಲನೆಗೆ ಅವಕಾಶ ನೀಡುವ ಈ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ವಿಸ್ತರಣೆ ಮಾಡಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತೀರ್ಮಾನಿಸಿರುವ ಬಗ್ಗೆ ನಮ್ಮ ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕ' ಅಧಿಕಾರಿ ಯಶವಂತ ಚವ್ಹಾಣ್ ಮಾಹಿತಿ ನೀಡಿದ್ದಾರೆ.

'ಭಾರತ್ ಬಿಲ್ ಪೇ ಸಿಸ್ಟಂ' ಮಾದರಿ ಆಪ್
'ಭಾರತ್ ಬಿಲ್ ಪೇ ಸಿಸ್ಟಂ' ಮಾದರಿಯ ಆ್ಯಪ್ ವಿನ್ಯಾಸಕ್ಕೆ ನಮ್ಮ ಮೆಟ್ರೋ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಮೆಟ್ರೋ ಪ್ರಯಾಣಿಕರು ಈ ಆ್ಯಪ್ ಮೂಲಕ ಮೆಟ್ರೋ ಟಿಕೆಟ್‌ಗಳನ್ನು ಖರೀದಿಸುವುದು ಮಾತ್ರವಲ್ಲದೆ ತಮ್ಮ ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಬಹುದು.
ಅಲ್ಲದೇ ಈ ಆ್ಯಪ್ ಮೂಲಕ ಆಟೋರಿಕ್ಷಾ ಮತ್ತು ಕ್ಯಾಬ್‌ಗಳನ್ನು ಬುಕ್ ಮಾಡಬಹುದು. ಮೆಟ್ರೋ ವೇಳಾಪಟ್ಟಿಗಳ ಮಾಹಿತಿಯನ್ನು ವೀಕ್ಷಿಸುವುದರ ಹೊರತಾಗಿ ಆನ್‌ಲೈನ್ ಪಾವತಿಯನ್ನು ಸಹ ಮಾಡಲು ಇದರಲ್ಲಿ ಅವಕಾಶ ಇದೆ.
ಕ್ಯೂಆರ್ ಕೋಡ್ ವ್ಯವಸ್ಥೆ ಆರಂಭವಾದ ಬಳಿಕ, ಸ್ವಲ್ಪ ದಿನಗಳಲ್ಲಿಯೇ ಒಂದೇ ಕ್ಯೂಆರ್ ಕೋಡ್ ಅನ್ನು ಆರು ಮಂದಿ ಬಳಸಿ ಓಡಾಡುವಂತೆ ವ್ಯವಸ್ಥೆ, ತರಲಾಯಿತು. ವಿಶೇಷ ಸಂದರ್ಭಗಳಲ್ಲಿ ಪೇಪರ್ ಟಿಕೆಟ್ ನೀಡಲಾಗುತ್ತಿದೆ. ನಮ್ಮ ಮೆಟ್ರೋ ಜಾರಿಗೆ ತರುವ ಯೋಜನೆ, ವ್ಯವಸ್ಥೆಗಳಿಗೆ ಭರಪೂರ ಸ್ಪಂದನೆ ವ್ಯಕ್ತವಾಗುತ್ತಿದೆ. ಇದೀಗ ಮೆಟ್ರೋ ಕ್ಯೂಆರ್ ಪ್ರತ್ಯೇಕ ಆಪ್ ತರಲು ತಯಾರಿ ನಡೆದಿದೆ.
ಆದಷ್ಟು ಶೀಘ್ರವೇ ಕ್ಯೂಆರ್ ಕೋಡ್ ಆಪ್ ಮತ್ತು ಇತರ ಡಿಜಿಟಲ್ ವೇದಿಕೆಗಳಲ್ಲಿ ನಮ್ಮ ಮೆಟ್ರೋ ಕ್ಯೂಆರ್ ಕೋಡ್ ಬಳಕೆ ಮಾಡಬಹುದಾಗಿದೆ.











Click it and Unblock the Notifications