Namma Metro Update: ಹಲವು ಮೆಟ್ರೋ ನಿಲ್ದಾಣಗಳಲ್ಲಿ PSD ವ್ಯವಸ್ಥೆ ಜಾರಿ, ಅಪ್ಡೇಟ್ ಮಾಹಿತಿ
ಬೆಂಗಳೂರು, ಜನವರಿ 15: ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ರೈಲು ಹಳಿಗೆ ಪ್ರಯಾಣಿಕರು ಇಳಿದ ಘಟನೆ ಬೆನ್ನಲ್ಲಿಯೇ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆ ದೃಷ್ಟಿಯಿಂದ PSD ವ್ಯವಸ್ಥೆ ಅಳವಡಿಸಬೇಕು ಎಂಬ ಕೂಗು ಕೇಳಿ ಬರುತ್ತದೆ. ಇದಕ್ಕೆ ಸ್ಪಂದಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಟೆಂಡರ್ ಕರೆದು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಮೆಟ್ರೋ ಹಂತ-2ದ ಎರಡು ಮಾರ್ಗದಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ. ಯಾವ ಲೈನ್?, ನಿಲ್ದಾಣಗಳು ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ಮೆಟ್ರೋ ಎರಡನೇ ಹಂತದ ವ್ಯಾಪ್ತಿಯ ನೀಲಿ ಮಾರ್ಗ (Namma metro blue line) ಮತ್ತು ಗುಲಾಬಿ ಮಾರ್ಗ (Namma metro pink line) ಪಿಂಕ್ ಲೈನ್‌ನ ಭೂಗತ ಕಾರಿಡಾರ್ ನಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಣಾಯಕ ವ್ಯವಸ್ಥೆ ಅಳವಡಿಕೆಗೆ ಬಿಎಂಆರ್‌ಸಿಎಲ್ ಬಿಡ್ ಕರೆದಿತ್ತು.
ಇದರಲ್ಲಿ ಪಾಲ್ಗೊಂಡಿದ್ದ ಅಲ್‌ಸ್ಟೋಮ್ ಟ್ರಾನ್ಸ್‌ಪೋರ್ಟ್ ಇಂಡಿಯಾ ಕಡಿಮೆ ಬಿಡ್‌ದಾರನಾಗಿ ಹೊರ ಹೊಮ್ಮಿದೆ ಮತ್ತು ಗುತ್ತಿಗೆಯನ್ನು ನೀಡುವ ಸಾಧ್ಯತೆ ಇದೆ. ಕಳೆದ ವರ್ಷ 2023 ರ ಮಾರ್ಚ್ ನಲ್ಲಿ ಒಂದು ಟೆಂಡರ್ ನಲ್ಲಿ ಅಲ್‌ಸ್ಟೋಮ್ ರೂ 857 ಕೋಟಿಯ ಬಿಡ್ ಪಡೆದು, ನಂತರ ಅದರ ಅವಧಿ/ಗಡುವನ್ನು ವಿಸ್ತರಿಸಿಕೊಂಡಿತು ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಂಕ್ ಲೈನ್‌ನ ಇಷ್ಟು ನಿಲ್ದಾಣಗಳಲ್ಲಿ ಪಿಎಸ್‌ಡಿ ವ್ಯವಸ್ಥೆ
ಸದ್ಯ ಭರದಿಂದ ಸಾಗುತ್ತಿರುವ ನಗರದ ಡೈರಿ ಸರ್ಕಲ್-ನಾಗವಾರದವರೆಗೆ 13.89 ಕಿಮೀವರೆಗಿನ ಮೆಟ್ರೋ ಪಿಂಕ್ ಲೈನ್‌ನಲ್ಲಿ ಭೂಗತದಲ್ಲಿ ಒಟ್ಟು 12 ನಿಲ್ದಾಣಗಳು ಬರುತ್ತವೆ. ಪಿಂಕ್ ಲೈನ್‌ನಲ್ಲಿ (ರೀಚ್-6, ಕಾಳೇನ ಅಗ್ರಹಾರದಿಂದ ನಾಗವಾರ) ಭೂಗತ ಕಾರಿಡಾರ್ ನಿಲ್ದಾಣದಲ್ಲಿ 2.15 ಮೀಟರ್ ಎತ್ತರದ ಪ್ಲಾಟ್‌ಫಾಮ್ ಸ್ಕೀನ್ ಡೋರ್ (ಪಿಎಸ್‌ಡಿ) ಅಳವಡಿಸಲಾಗುವುದು.

ನೀಲಿ ಮಾರ್ಗದ ಈ ನಿಲ್ದಾಣಗಳಲ್ಲಿ ಪಿಎಸ್‌ಡಿ
ಇನ್ನೂ ತಾರವಕೆರೆ ಮತ್ತು ಕಾಳೇನ ಅಗ್ರಹಾರ ನಡುವಿನ ಆರು ಎತ್ತರದ ನಿಲ್ದಾಣಗಳಲ್ಲಿ 1.5-ಮೀಟರ್ ಎತ್ತರದ ಪ್ಲಾಟ್‌ಫಾಮ್ ಸ್ಕೀನ್ ಡೋರ್ ಅಳವಡಿಸಲಾಗುವುದು. ಸೆಂಟ್ರಲ್ ಸಿಲ್ಕ್ ಬೋರ್ಡ್ ಟು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗಿನ ನೀಲಿ ಮಾರ್ಗ (Blue line) 17 ಎಲಿವೇಟೆಡ್ ನಿಲ್ದಾಣಗಳಲ್ಲಿ ಈ ನೂತನ ಪಿಎಸ್‌ಡಿ ವ್ಯವಸ್ಥೆ ಜಾರಿಗೆ ಬರಲಿದೆ. ಇದರಲ್ಲಿ ಭೂಗತ ನಿಲ್ದಾಣವು ಇರಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಯಾಣಿಕರ ರಕ್ಷಣೆ ಹೊರತಾಗಿಯು ಒಪ್ಪಂದವು ಸಂವಹನ ಆಧಾರಿತ ರೈಲು ನಿಯಂತ್ರಣ ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗಳ ಸ್ಥಾಪನೆಯನ್ನು ಒಳಗೊಂಡಿರುತ್ತದೆ.
ಇನ್ನೂ ರೈಲು ಹಳಿಗೆ ಜನರು ಇಳಿಯುವ ಪ್ರಕರಣ ಮೇಲಿಂದ ಮೇಲೆ ಕಂಡು ಬಂದ ಹಿನ್ನೆಲೆಯಲ್ಲಿ ಅತ್ಯಧಿಕ ಜನರು ಇಳಿಯುವ ಮತ್ತು ಹತ್ತುವ ಜಂಕ್ಷನ್ ಆಗಿರುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಈ ಪಿಎಸ್‌ಡಿ ಅಳವಡಿಕೆಗೆ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.
ಸಿಬಿಟಿಸಿ ತಂತ್ರಜ್ಞಾನ ಅಳವಡಿಕೆ
ಈ ಮೆಜೆಸ್ಟಿಕ್ ಸೇರಿದಂತೆ ಈ ಪಿಎಸ್‌ಡಿ ವ್ಯವಸ್ಥೆಯು ಪಿಂಕ್ ಲೈನ್ ಮತ್ತು ನೀಲಿ ಮಾರ್ಗದಲ್ಲಿ ಬರಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರವೇ ಇದರ ಅಳವಡಿಕೆ ಕಾರ್ಯ ಆರಂಭವಾಗಲಿದೆ.
ಇದರೊಂದಿಗೆ ರೈಲು ನಿಲ್ದಾಣಗಳಲ್ಲಿ ಸಿಬಿಟಿಸಿ ತಂತ್ರಜ್ಞಾಣ ಅಳವಡಿಕೆ ಮುಂದಾಗಿದ್ದು, ಇದು ಅತ್ಯಾಧುನಿಕ ಸಿಗ್ನಲ್ ವ್ಯವಸ್ಥೆ ನೀಡಲಿದೆ. ರೈಲು ಸಂಚಾರದ ನಿಖರ ಮಾಹಿತಿ ಒದಗಿಸಲಿದೆ. ಈಗಿನದ್ದಕ್ಕಿಂತ ಹೆಚ್ಚು ಸ್ಪಷ್ಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೆಳಲಾಗುತ್ತಿದೆ.
ಒಂದೇ ಸಮಯದಲ್ಲಿ ಎರಡು ಮಾರ್ಗಗಳಲ್ಲಿ ಪಿಎಸ್‌ಡಿ ಅಳವಡಿಕೆ ಜೊತೆಗೆ ಹೊಸ ತಂತ್ರಜ್ಞಾನ ಅಳವಡಿಕೆಗೂ ಬಿಎಂಆರ್‌ಸಿಎಲ್ ಯೋಚನೆಯು ಪ್ರಯಾಣಿಕರಿಗೆ ನಮ್ಮ ಮೆಟ್ರೋ ನೀಡುವ ರಕ್ಷಣಾತ್ಮಕ ಕ್ರಮಗಳ ಆದ್ಯತೆ ಬಗ್ಗೆ ಎತ್ತಿತೋರಿಸುತ್ತದೆ.












Click it and Unblock the Notifications