ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro: 2 ಮೆಟ್ರೋ ನಿಲ್ದಾಣಗಳಲ್ಲಿ ಇನ್ಮುಂದೆ ಪ್ರಿಪೇಯ್ಡ್ ಆಟೋ ಸೇವೆ ಲಭ್ಯ

|
Google Oneindia Kannada News

ಬೆಂಗಳೂರು, ಜನವರಿ 04: ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಗರದ ಎರಡು ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ಆಟೋ ಕೌಂಟರ್‌ಗಳನ್ನು ಸ್ಥಾಪಿಸಿದೆ.

ಬೆಂಗಳೂರು ನಗರ ಪೊಲೀಸರ ಸಹಕಾರ ಪಡೆದಿರುವ ಬಿಎಂಆರ್‌ಸಿಎಲ್, ಪ್ರಾಯೋಗಿಕವಾಗಿ ನಾಲ್ಕು ಮೆಟ್ರೋ ನಿಲ್ದಾಣಗಳ ಪೈಕಿ ಮಹಾತ್ಮ ಗಾಂಧಿ (ಎಂ.ಜಿ) ರಸ್ತೆ ಹಾಗೂ ಕಬ್ಬನ್ ಪಾರ್ಕ್‌ ಮೆಟ್ರೋ ನಿಲ್ದಾಣಗಳಲ್ಲಿ ಕೌಂಟರ್ ಸ್ಥಾಪಿಸಿದೆ. ಈ ಕೌಂಟರ್‌ಗಳನ್ನು ಬುಧವಾರ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಉದ್ಘಾಟಿಸಿದರು. ಇನ್ನುಮುಂದೆ ಮೆಟ್ರೊ ಪ್ರಯಾಣಿಕರು ನಿಲ್ದಾಣದಿಂದ ಮನೆಗೆ ತೆರಳಲು ಹೆಚ್ಚು ಸಮಯ, ಅಧಿಕ ಹಣ ನೀಡಬೇಕಿಲ್ಲ ಎನ್ನಲಾಗಿದೆ.

2024ರಲ್ಲಿ 2ನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣ: ಮಾಹಿತಿ, ಮಾರ್ಗ, ನಿಲ್ದಾಣಗಳು2024ರಲ್ಲಿ 2ನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣ: ಮಾಹಿತಿ, ಮಾರ್ಗ, ನಿಲ್ದಾಣಗಳು

ಊರುಗಳಿಗೆ ತೆರಳುವಾಗ, ದಿನನಿತ್ಯ ಕೆಲಸ ಕಾರ್ಯಗಳಿಗೆ ಹೋಗುವವರು, ಮೆಟ್ರೋ ನಿಲ್ದಾಣದಿಂದ ತಮ್ಮ ವಾಸದ ಸ್ಥಳಗಳಿಗೆ ಹೋಗಲು ಆಟೋ, ಇಲ್ಲವೇ ಬಿಎಂಟಿಸಿ ಬಸ್ ಸೇವೆ ಅಗತ್ಯವಾಗಿದೆ. ಅದರೆ ಸರಿಯಾದ ಸಮಯಕ್ಕೆ ಬಸ್ ಸೇವೆಗಳು ಲಭ್ಯವಿರುವುದಿಲ್ಲ. ಇನ್ನೂ ಆಟೋ ಚಾಲಕರು ಮನಬಂದ ದರ ಪಡೆಯುತ್ತಾರೆ. ಕೆಲವರು ಕರೆದ ಕಡೆಗಳಲ್ಲಿ ಬರುವುದಿಲ್ಲ. ಈ ಸಂಬಂಧ ಈಗಾಗಲೇ ಸಾಕಷ್ಟು ದೂರುಗಳು ಕೇಳಿ ಬಂದಿವೆ.

Namma Metro: Prepaid Auto Service Available In 2 Metro Station Form Toady Jan. 03

ಈ ಎಲ್ಲ ಕಾರಣಗಳಿಂದ ವಾಹನ, ಜನದಟ್ಟಣೆ ಹೆಚ್ಚಿರುವ ಬೆಂಗಳೂರಿನಲ್ಲಿ ಧಾವಂತದಲ್ಲಿ ಮನೆ ತಲುಪುವುದೇ ಕಷ್ಟವಾಗಿತ್ತು. ಈ ಸಂಕಷ್ಟ ದೂರ ಮಾಡಲು ಬೆಂಗಳೂರು ನಗರ ಪೊಲೀಸರು ಹಾಗೂ ಬಿಎಂಆರ್‌ಸಿಎಲ್‌ ಪೂರ್ವ ನಿಗದಿತ ಆಟೋ ಸೇವಾ ಕೌಂಟರ್‌ಗನ್ನು ತೆರಯಲಾಗಿದೆ. ಆರಂಭಿಕವಾಗಿ ಎರಡು ಸ್ಥಳಗಳಲ್ಲಿ ಮಾತ್ರ ಆರಂಭವಾಗಿದೆ. ಬೆಳಗ್ಗೆ 5ಗಂಟೆಯಿಂದ ಮಧ್ಯರಾತ್ರಿವರೆಗೆ ಈ ಆಟೋ ಸೇವೆ ಲಭ್ಯವಿರಲಿದೆ ಎಂದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಈ ಕೌಂಟರ್‌ಗಳು ಮೆಜೆಸ್ಟಿಕ್, ಕೆ.ಆರ್‌ ಮಾರುಕಟ್ಟೆ, ಹಸಿರು ಮಾರ್ಗದ ಕೊನೆಯ ನಿಲ್ದಾಣ ನಾಗಸಂದ್ರ ಸೇರಿದಂತೆ ವಿವಿಧೆಡೆ ವಿಸ್ತರಿಸುವ ಗುರಿ ಇದೆ.

English summary
Namma Metro: Bengaluru Metro Rail Corporation Limited (BMRCL) and Bengaluru Traffic Police (BTP) inaugurated prepaid auto service in 2 metro station on wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X