Namma Metro ಸಿಹಿ ಸುದ್ದಿ: ಮತ್ತೊಂದು ಮಾರ್ಗ ನಿರ್ಮಾಣ ಕೆಲಸ ಬಹುತೇಕ ಪೂರ್ಣ: 2026ಕ್ಕೆ ರೈಲು ಸಂಚಾರ!
ಬೆಂಗಳೂರು ಫೆಬ್ರವರಿ 18: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಾಲಿ ಹೊಸ ಮಾರ್ಗ ತೆರೆಯುವುದು ಯಾವಾಗ ಎಂದು ಕೇಳುತ್ತಿದ್ದ ಜನರಿಗೆ BMRCL ಗುಡ್ ನ್ಯೂಸ್ ನೀಡಿದೆ. ಕಾಳೇನ ಅಗ್ರಹಾರದಿಂದ-ನಾಗವಾರ ವರೆಗೆ 21 ಕಿಲೋ ಮೀಟರ್ ಮಾರ್ಗದ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈ ಮೂಲಕ ಮೆಟ್ರೋ ಹಳದಿ ಮಾರ್ಗದ ಬಳಿಕ, ಪಿಂಕ್ ಲೈನ್ ಶೀಘ್ರವೇ ಕಾರ್ಯಾಚರಣೆ ಆರಂಭಿಸಲಿದೆ. ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
21 ಕಿಲೋ ಮೀಟರ್ ಮಾರ್ಗದಲ್ಲಿ ಸುಮಾರು 13.8 ಕಿಮೀ ಸುರಂಗ ಮಾರ್ಗವಿದೆ. ಎರಡು ಹಂತಗಳಲ್ಲಿ ಒಟ್ಟು 09 ಟಿಬಿಎಂ (ಟನಲ್ ಬೋರಿಂಗ್ ಮಷಿನ್) ಬಳಸಿ ಸುರಂಗ ಕೊರೆಯಲಾಗುತ್ತಿತ್ತು. ಈ ಸುರಂಗ ಕೊರೆತದ ಕೆಲಸವು ಶೇಕಡಾ 95ರಷ್ಟು ಪೂರ್ಣಗೊಂಡಿದೆ ಎಂದು ಮಾಧ್ಯಮದವರ ಮುಂದೆ ಬೆಂಗಳೂರು ಮೆಟ್ರೋ ರೈಲು ನಿಮಗದ (BMRCL) ಅಧಿಕಾರಿಗಳು ತಿಳಿಸಿದರು.

ಸಿವಿಲ್ ಕಾಮಗಾರಿ ಬಹುತೇಕ ಪೂಣ್ಗೊಂಡಿದೆ. ಈಗಾಗಲೇ ಹಳದಿ ಜೋಡಣೆ, ಸಿಗ್ನಲಿಂಗ್ ವ್ಯವಸ್ಥೆ, ವಿದ್ಯುತ್ ಸಂಪರ್ಕ ಕಲ್ಪಿಸುವುದು, ವಿದ್ಯುತ್, ಸುರಂಗ ವಾತಾಯನ ವ್ಯವಸ್ಥೆ, ಹವಾನಿಯಂತ್ರಣ ಮುಂತಾದವರುಗಳ ಜೋಡಣೆ ಕಾರ್ಯ ನಡೆಸಲಾಗುತ್ತಿದೆ. ಇದು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಹೀಗಾಗಿ ನಮ್ಮ ಮೆಟ್ರೋ ಗುಲಾಬಿ ಮಾರ್ಗವು 2026 ರಲ್ಲಿ ಸಾರ್ವಜನಿಕ ಸೇವೆ ಲಭ್ಯವಾಗಲಿದೆ.
ಈ ಗುಲಾಬಿ ಮಾರ್ಗವು ಇತರ ಮಾರ್ಗದಲ್ಲಿ ಓಡಾಡುವ ಮೆಟ್ರೋ ಬೋಗಿಗಳಿಗಿಂತಲ ಹೆಚ್ಚು ಬೋಗಿಗಳನ್ನು ಹೊಂದಿರಲಿದೆ.

2020ರ ಆಗಸ್ಟ್ 22 ರಂದು ಕಂಟೋನ್ಮೆಂಟ್ ಭೂಗತ ನಿಲ್ದಾಣದಲ್ಲಿ ಟಿಬಿಎಂ (ಸುರಂಗ ಬೋರಿಂಗ್ ಯಂತ್ರ) ನಿಯೋಜಿಸಿತ್ತು. ಅಂದಿನಿಂದ ಕೆಲಸ ಆರಂಭವಾಗಿತ್ತು. ಈ ಟಿಬಿಎಂಟಿಗಳು ಒಟ್ಟ 13 ಕಿಲೋ ಮೀಟರ್ ಸುರಂಗ ಕೊರೆಯುವಲ್ಲಿ ಯಶಸ್ವಿಯಾಗಿವೆ.
ಎಂಜಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಇಂಟರ್‌ಚೇಂಜ್ ಸೌಲಭ್ಯ
ಒಟ್ಟು ಎರಡು ಫೇಸ್‌ಗಳಲ್ಲಿ ಸುರಂಗ ಕೊರೆಯಲಾಗುತ್ತಿತ್ತು. ಇನ್ನೂ ಮೆಜೆಸ್ಟಿಕ್‌ನಂತೆ ಈ ಪಿಂಕ್ ಮಾರ್ಗದಲ್ಲಿ ಇಂಟರ್‌ಚೇಂಜ್ ನಿಲ್ದಾಣ ಬರಲಿದೆ. ನೇರಳೆ ಮಾರ್ಗವನ್ನು ಎಂಜಿ ರಸ್ತೆಯಲ್ಲಿ ಈ ಪಿಂಕ್ ಮಾರ್ಗವು ಸಂಧಿಸುತ್ತದೆ. ಹೀಗಾಗಿ ಎಂಜಿ ರಸ್ತೆಯ ನಿಲ್ದಾಣವನ್ನು ಇಂಟರ್‌ಚೇಂಜ್ ನಿಲ್ದಾಣವಾಗಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸುರಂಗ ಕಾರ್ಯ: ವಿದೇಶಿ ಸುರಂಗ ಸಿಬ್ಬಂದಿ ಮಾರ್ಗದರ್ಶನ
ಎರಡು ಹಂತಗಳಲ್ಲಿ ಸುರಂಗ ಮಾರ್ಗ ನಿರ್ಮಿಸಲಾಯಿತು. ಮೊದಲ ಹಂತದಲ್ಲಿ ನಡೆದಿದ್ದ ತಪ್ಪುಗಳಿಂದ ಪಾಠ ಕಲಿಯಲಾಗಿದೆ. ಸುರಂಗಗಳನ್ನು ವೇಗವಾಗಿ ರೈಲು ಓಡಲು ಆಗುವಂತೆ ಅಗತ್ಯ ಸೌಲಭ್ಯ ಒಳಗೊಂಡಿದೆ. ಇದರ ಮೇಲ್ವಿಚಾರಣೆಯನ್ನು ಜರ್ಮನಿ ಮತ್ತು ಜಪಾನ್ ಸಿಬ್ಬಂದಿ ಕರೆಸಲಾಗಿತ್ತು. ಥೈಲ್ಯಾಂಡ್‌ನಿಂದ 50-ಕ್ಕೂ ಹೆಚ್ಚು ಸುರಂಗ ಸಿಬ್ಬಂದಿ ಬೆಂಗಳೂರಿಗೆ ಬಂದಿದ್ದರು. ಹಂತ 2 ರಲ್ಲಿ, ಮೇಲ್ವಿಚಾರಣಾ ಕಾರ್ಯಗಳನ್ನು ಸಂಪೂರ್ಣವಾಗಿ ಬಿಎಂಆರ್‌ಸಿಎಲ್ ಸಿಬ್ಬಂದಿ ಮಾಡಿದ್ದಾರೆ. ಅದಕ್ಕಾಗಿ ಅಗತ್ಯ ತರಬೇತಿ ಸಹ ಪಡೆಯಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದರು.
200 ಮೀಟರ್ ಉದ್ದದ ನಿಲ್ದಾಣಗಳು
ಹಾಲಿ ಇರುವ ಭೂಗತ ಮೆಟ್ರೋ ನಿಲ್ದಾಣಗಳಿಗಿಂತ ಪಿಂಕ್ ಲೈನ್ ಮೆಟ್ರೋ ನಿಲ್ದಾಣಗಳು ಭಿನ್ನ ಮತ್ತು ವಿಶೇಷತೆಯಿಂದ ಕೂಡಿರಲಿವೆ. ಇಲ್ಲಿನ ನಿಲ್ದಾಣಗಳು ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್‌ಡಿ) ವ್ಯವಸ್ಥೆ ಹೊಂದಿರುತ್ತದೆ. ಭೂಗತ ಮಾರ್ಗವು ಗರಿಷ್ಠ 80 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸಲು ವಿನ್ಯಾಸಗೊಳಿಸಲಾಗಿದೆ. ನಿಲ್ದಾಣಗಳು ತಲಾ 200 ಮೀ ಉದ್ದ, ವಿಶಾಲವಾಗಿ ನಿರ್ಮಿಸಲಾಗಿದೆ.












Click it and Unblock the Notifications