Namma Metro: ಗುಲಾಬಿ ಮಾರ್ಗದ ಸುರಂಗ ಕಾರ್ಯ ಶೇ.90ರಷ್ಟು ಪೂರ್ಣ: ಇನ್ನೆಷ್ಟು ಕೆಲಸ ಬಾಕಿ..?

ಬೆಂಗಳೂರು, ಡಿಸೆಂಬರ್‌ 15: ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿಗಳು ಎಲ್ಲಡೆ ಭರದಿಂದ ಸಾಗುತ್ತಿದೆ. ಗುಲಾಬಿ ಮಾರ್ಗದ ಕಾರ್ಯಗಳು ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಸುರಂಗ ಕಾಮಗಾರಿ ಈಗಾಗಲೇ ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ. ಸುರಂಗ ಮಾರ್ಗದ 21 ಕಿಲೋ ಮೀಟರ್‌ಗಳಲ್ಲಿ 19 ಕಿಲೋ ಮೀಟರ್‌ ಸುರಂಗ ಮಾರ್ಗ ಪೂರ್ಣಗೊಂಡಿದೆ.

ನಮ್ಮ ಮೆಟ್ರೋ ಗುಲಾಬಿ ಮಾರ್ಗವು ಬೆಂಗಳೂರಿನ ದಕ್ಷಿಣದಲ್ಲಿರುವ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಳೇನ ಅಗ್ರಹಾರದಿಂದ ಉತ್ತರ ಭಾಗದಲ್ಲಿರುವ ನಾಗವಾರಕ್ಕೆ ಸಂಪರ್ಕಿಸುವ ಅತ್ಯಂತ ದೊಡ್ಡ ಹಾಗೂ ಕಾಮಗಾರಿಯಲ್ಲಿ ಅತ್ಯಂತ ಸವಾಲಾಗಿರುವ ಮಾರ್ಗವಾಗಿದೆ.

Namma Metro Pink Line Tunnel Work 90% Completed

ಈ ಗುಲಾಬಿ ಮಾರ್ಗವು ದೇಶದಲ್ಲೇ ಅತಿ ದೊಡ್ಡದಾದ ಮೆಟ್ರೋ ಸುರಂಗ ಮಾರ್ಗವಾಗಿದೆ. ಒಟ್ಟು 21 ಕಿಲೋ ಮೀಟರ್‌ ಉದ್ದದ ಮಾರ್ಗ ಇದಾಗಿದ್ದು, ಒಟ್ಟು ಹದಿನೆಂಟು ನಿಲ್ದಾಣಗಳನ್ನು ಹೊಂದಿರಲಿದೆ. ಒಟ್ಟು 11,500 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಈಗಾಗಲೇ ಶೇಕಡಾ 90ರಷ್ಟು ಕಾರ್ಯ ಪೂರ್ಣಗೊಂಡಿದೆ.

ಗುಲಾಬಿ ಮಾರ್ಗದ ಡೇರಿ ಸರ್ಕಲ್‌ನಿಂದ ನಾಗವಾರದವರೆಗಿನ 13.9 ಕಿಲೋ ಮೀಟರ್‌ ಉದ್ದದ ಮಾರ್ಗದಲ್ಲಿ ಒಟ್ಟು ಒಂಬತ್ತು ಸುರಂಗ ಕೊರೆಯುವ ಯಂತ್ರಗಳನ್ನು ಕಾಮಗಾರಿಗೆ ಇಳಿಸಲಾಗಿದ್ದು, ಈಗಾಗಲೇ 7 ಯಂತ್ರಗಳು ಕೆಲಸ ಪೂರ್ಣಗೊಳಿಸಿ ಹೊರಬಂದಿವೆ. 7 ಕೊರೆಯುವ ಯಂತ್ರಗಳು 18,832.30 ಮೀಟರ್‌ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದೆ. ಇನ್ನು ಭದ್ರಾ ಒಂದು ಮತ್ತು ತುಂಗಾ ಒಂದು, ಒಟ್ಟು ಎರಡು ಯಂತ್ರಗಳ ಕೆಲಸ ಬಾಕಿ ಉಳಿದಿದ್ದು, ಸುಮಾರು ಎರಡು ಸಾವಿರ ನೂರು ಮೀಟರ್‌ ಉದ್ದದ ಸುರಂಗ ಕೊರೆಯುವ ಕೆಲಸ ಬಾಕಿ ಇದೆ.

ಈ ಯೋಜನೆ ಅಂಗವಾಗಿ ಜುಲೈ 2020ರಲ್ಲಿ ನಮ್ಮ ಮೆಟ್ರೋ ಕಂಟೋನ್ಮೆಂಟ್‌ನಿಂದ ಶಿವಾಜಿನಗರಕ್ಕೆ ಮೊದಲ ಕೊರೆಯುವ ಯಂತ್ರವನ್ನು ಬಳಸಲಾಗಿದ್ದು, ನಂತರ ಅದರ ಯಶಸ್ಸಿನ ಮೇರೆಗೆ ಉಳಿದ ಯಂತ್ರಗಳನ್ನು ಹಂತಹಂತವಾಗಿ ಬಳಸಲಾಯಿತು. ಇತ್ತೀಚಿಗೆ ಒಂದು ಯಂತ್ರವು ವೆಂಕಟೇಶಪುರದಿಂದ ಕೆಜಿ ಹಳ್ಳಿಯ ಅರೇಬಿಕ್‌ ಕಾಲೇಜು ಬಳಿ ಹೊರಬಂದಿದೆ. ಇನ್ನು ನಾಗಾವರದ ವರೆಗಿನ ಒಂದು ಕಿಲೋ ಮೀಟರ್‌ ಸುರಂಗ ಮಾರ್ಗ ಕೊರೆಯುವ ಕಾರ್ಯ ಕೂಡ ಆರಂಭಗೊಂಡಿದೆ.

Namma Metro Pink Line Tunnel Work 90% Completed

ಒಂದು ಕೊರೆಯುವ ಯಂತ್ರವು ಪ್ರತಿ ದಿನ ಸರಾಸರಿ ಎರಡರಿಂದ ಮೂರು ಕಿಲೋ ಮೀಟರ್‌ ಕೊರೆಯುತ್ತದೆ. ಮಣ್ಣಿನಂತಹ ಪ್ರದೇಶದಲ್ಲಿ ಒಂದು ದಿನಕ್ಕೆ ಆರರಿಂದ ಎಂಟು ಮೀಟರ್‌ ಕೊರೆಯುತ್ತದೆ. ಒಂದು ವೇಳೆ ಕಲ್ಲಿನಂತಹ ಮಾರ್ಗ ಸಿಕ್ಕರೆ ಒಂದು ಮೀಟರ್‌ ಮಾತ್ರ ಕೊರೆಯುತ್ತದೆ. ಸದ್ಯ ಏಳು ಯಂತ್ರಗಳು ಯಶಸ್ವಿಯಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಮಾರ್ಗವು 2024ರ ಮೇನಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ತಿಳಿಸಿದ್ದಾರೆ.

ಇನ್ನು ಈಗಷ್ಟೇ ಸುರಂಗ ಮಾರ್ಗ ಕೊರೆಯುವ ಕೆಲಸಗಳು ಅಂತಿಮ ಹಂತಕ್ಕೆ ಬರುತ್ತಿದ್ದು, ಟ್ರ್ಯಾಕ್‌ ಅಳವಡಿಕೆ, ಅವುಗಳಿಗೆ ವಿದ್ಯುತ್‌ ಸಂಪರ್ಕ, ಜೊತೆಗೆ ಸಿಗ್ನಲ್‌ ನಿರ್ಮಾಣ ಹಾಗೂ ಸುರಕ್ಷತಾ ಕ್ರಮದ ಪರಿಶೀಲನೆ ಸೇರಿದಂತೆ ಎಲ್ಲಾ ಕಾರ್ಯಗಳು ಮುಗಿದು ಮೆಟ್ರೋ ರೈಲು ಓಡಾಟಕ್ಕೆ ಇನ್ನೂ ಎರಡರಿಂದ ಎರಡೂವರೆ ವರ್ಷ ಸಮಯ ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+