Namma Metro Pink Line: 18 ನಿಲ್ದಾಣ ಹೊಂದಿರುವ ನಾಗವಾರ-ಕಾಳೇನ ಅಗ್ರಹಾರದ ಲೈನ್ ವಿಶೇಷತೆ?, ಯಾವಾಗ ಕೆಲಸ ಪೂರ್ಣ ತಿಳಿಯಿರಿ
ಬೆಂಗಳೂರು, ಜೂನ್ 26: ಬೆಂಗಳೂರು ನಮ್ಮ ಮೆಟ್ರೋ ಮಾರ್ಗಗಳಲ್ಲಿ ಮತ್ತೊಂದು ಮಾರ್ಗವು ಅತ್ಯಧಿಕ ಪ್ರದೇಶಗಳ ಜನರಿಗೆ ಆಸರೆಯಾಗಲಿದೆ. ಸುಮಾರು 18 ನಿಲ್ದಾಣಗಳನ್ನು ಹೊಂದಿರುವ ಬೃಹತ್ ಮೆಟ್ರೋ ಮಾರ್ಗವು ಮುಂದಿನ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಸದ್ಯ ಕಾಮಗಾರಿಯು ಭರದಿಂದ ಸಾಗುತ್ತಿದೆ. ಕೆಲವು ಕಾರಣಗಳಿಂದ ಈ ಮಾರ್ಗ ವಿಶೇಷತೆಗಳನ್ನು ಪಡೆದುಕೊಂಡಿದೆ.
'ನಾಗವಾರ ಮತ್ತು ಕಾಳೇನ ಅಗ್ರಹಾರ' ವರೆಗೆ ನಮ್ಮ ಮೆಟ್ರೋದ 'ಪಿಂಕ್ ಲೈನ್' ಮಾರ್ಗವು ನಿರ್ಮಾಣ ಹಂತದಲ್ಲಿ, ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು 2024ರ ಡಿಸೆಂಬರ್‌ಗೆ ಗುಡುವು ನೀಡಲಾಗಿದೆ. ನಿಗದಿಯಂತೆ ಅಂದುಕೊಂಡಂತಾದರೆ 2025ರ ಜನವರಿಗೆ ಹೊಸ ಮಾರ್ಗ ಪ್ರಯಾಣಿಕರಿಗೆ ಮುಕ್ತಗೊಳ್ಳುವ ಸಾಧ್ಯತೆ ಇದೆ.

ಈ 'ಪಿಂಕ್‌ಲೈನ್' 21.25 ಕಿಲೋ ಮೀಟರ್ ಉದ್ದದ ಸುರಂಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನಿತರ ಸಿವಿಲ್ ಕೆಲಸಗಳು ನಡೆಯುತ್ತಿವೆ. ಪಿಂಕ್ ಲೈನ್ 13.92 ಕಿಲೋ ಮೀಟರ್ ಭೂಗತ ಮಾರ್ಗ ಹೊಂದಿದ್ದರೆ, 6.98 ಕಿಲೋ ಮೀಟರ್ ಎತ್ತರದಲ್ಲಿದೆ. ಒಟ್ಟು 18 ಮೆಟ್ರೋ ನಿಲ್ದಾಣಗಳ 12 ಭೂಗತ ನಿಲ್ದಾಣಗಳು ಮತ್ತು 6 ಎತ್ತರದ ನಿಲ್ದಾಣಗಳನ್ನು ಹೊಂದಿದೆ.
ಈ ಮಾರ್ಗದ ವಿಶೇಷತೆ ಏನು?
ಬೆಂಗಳೂರು ನಮ್ಮ ಮೆಟ್ರೋ ಮಾರ್ಗಗಳಲ್ಲಿಯೇ ಈ ಪಿಂಕ್ ಲೈನ್ ನೆಟ್‌ವರ್ಕ್ ಮಹತ್ವದಿಂದ ಕೂಡಿದೆ. ಅನೇಕ ಪ್ರದೇಶಗಳನ್ನು, ಒಂದೆಡೆಯಿಂದ ಮತ್ತೊಂದೆಡೆ ಸಂಪರ್ಕಿಸುತ್ತದೆ. ಕಾಳೇನ ಅಗ್ರಹಾರ ನಿಲ್ದಾಣದಿಂದ (ಹಿಂದೆ ಹೆಸರಿಸಲಾಗಿತ್ತು ಗೊಟ್ಟಿಗೆರೆ) ದಕ್ಷಿಣದಲ್ಲಿ ಬನ್ನೇರುಘಟ್ಟ ರಸ್ತೆಯಿಂದ ಉತ್ತರದಲ್ಲಿ ಹೊರವರ್ತುಲ ರಸ್ತೆಯಲ್ಲಿರುವ ನಾಗವಾರ ನಿಲ್ದಾಣವರೆಗೆ ಚಾಚಿಕೊಂಡಿದೆ.
ಈ ನಾಗವಾರ ಮತ್ತು ಕಾಳೇನ ಅಗ್ರಹಾರವರೆಗೆ ನಡುವೆ ಸುಗಮ ಸಾರಿಗೆ ಸಂಪರ್ಕ ಸ್ಥಳಗಳು ಆರ್ಥಿಕ ಭವಿಷ್ಯವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಈ ಭಾಗದ ಜನರಿಗೆ ದೈನಂದಿನ ಸಾರಿಗೆ ನೆರವಿನ ಜೊತೆಗೆ ಸಂಚಾರ ದಟ್ಟಣೆಗೆ, ಇಲ್ಲಿನ ಅಭಿವೃದ್ಧಿಗೆ ಕಾರಣವಾಗಲಿದೆ.
ಬನ್ನೇರುಘಟ್ಟ ರಸ್ತೆ ಹಾದು ಹೋದ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚು ವಾಣಿಜ್ಯ ಚಟುವಟಿಕೆಗಳು ನಡೆಯುತ್ತವೆ. ಅಲ್ಲದೇ ಇಲ್ಲಿ ಹಲವು ಐಟಿ ಕಂಪನಿಗಳು ಸೇರಿದಂತೆ ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು ಮತ್ತು ಮುಖ್ಯವಾಗಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಜನಪ್ರಿಯ ಪ್ರವಾಸಿ ತಾಣವಾಗಿದೆ. ಜನವಸತಿ ವಸತಿ ಪ್ರದೇಶವು ಇದಾಗಿದೆ.
ಇನ್ನೂ ಇದೇ ಭಾಗದಲ್ಲಿ ಎತ್ತರದ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ, ಗೇಟೆಡ್ ಸಮುದಾಯಗಳು ಹಾಗೂ ಸ್ವತಂತ್ರ ಮನೆಗಳ ಸಂಖ್ಯೆ ಅಧಿಕವಾಗಿವೆ. ಇನ್ನೂ ಹೊರ ವರ್ತುಲ ರಸ್ತೆ ರಸ್ತೆ ಪ್ರದೇಶವು ಪ್ರಮುಖ ಬೆಳವಣಿಗೆಯ ಕೇಂದ್ರವಾಗಿದೆ ಬೆಂಗಳೂರಿನಲ್ಲಿ. ಇದು ಪ್ರಮುಖ ಉದ್ಯೋಗ ಕೇಂದ್ರವಾಗಿದೆ. ಇದೆಲ್ಲದ್ದಕ್ಕೂ ಮೆಟ್ರೋ ಸಾರಿಗೆ ಪೂಕರವಾಗಿ ಸೇವೆ ನೀಡಲಿದೆ. ಈ ಕಾರಣದಿಂದಲೇ ಈ ಮೆಟ್ರೋ 'ಪಿಂಕ್ ಲೈನ್' ಮಹತ್ವ ಹೊಂದಿದೆ.
ಮೆಟ್ರೋ 'ಪಿಂಕ್ ಲೈನ್' ವ್ಯಾಪ್ತಿಯ 12 ನಿಲ್ದಾಣಗಳು
1. ಕಾಳೇನ ಅಗ್ರಹಾರ
2. ಹುಳಿಮಾವು
3. ಜಯದೇವ ಆಸ್ಪತ್ರೆ
4. ತಾವರೆಕೆರೆ
5. ಡೈರಿ ಸರ್ಕಲ್
6. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು
7. ಜಯಪ್ರಕಾಶ ನಗರ 4ನೇ ಹಂತ
8. ಲಕ್ಕಸಂದ್ರ
9. ಲ್ಯಾಂಗ್‌ಫೋರ್ಡ್ ಟೌನ್
10. ವೆಂಕಟೇಶಪುರ
11. ಕಾಡುಗೊಂಡನಹಳ್ಳಿ
12. ನಾಗವಾರ
13. ರಾಷ್ಟ್ರೀಯ ಮಿಲಿಟರಿ ಶಾಲೆ
14. ಮಹಾತ್ಮ ಗಾಂಧಿ ರಸ್ತೆ
15. ಕುಂಬಾರಿಕೆ ಪಟ್ಟಣ
16. ಟ್ಯಾನರಿ ರಸ್ತೆ
17. ಶಿವಾಜಿನಗರ
18. ಕಂಟೋನ್ಮೆಂಟ್ ರೈಲು ನಿಲ್ದಾಣ
ಪರ್ಪಲ್ ಲೈನ್ ಜತೆ ಸಮಾಗಮ
ಈ ಪಿಂಕ್ ಲೈನ್ ಹಾಲಿ ಬೈಯಪ್ಪನಹಳ್ಳಿ- ಕೇಂಗೇರಿ ಮಾರ್ಗದ ಪರ್ಪಲ್ ಲೈನ್‌ಗೆ ಎಂಜಿ ರಸ್ತೆಯಲ್ಲಿ ಸಮಾಗಮವಾಗುತ್ತದೆ. ಇನ್ನು (ಯೆಲ್ಲೋ) ಹಳದಿ ಲೈನ್‌ಗೆ ಜಯದೇವ ಆಸ್ಪತ್ರೆ ಬಳಿ ಹಾಗೂ ನಾಗವಾರದಲ್ಲಿ ನೀಲಿ (ಬ್ಲೂ) ನೀಲಿ ಲೈನ್ ಜತೆ ಸಂಪರ್ಕ ಸಾಧಿಸುತ್ತದೆ.
ಸದ್ಯ ಪರ್ಪಲ್ ಲೈನ್ ಐಟಿ ಕಾರಿಡಾರ್ ಆಗಿರುವ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಪಿಂಕ್ ಲೈನ್ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಆಕರ್ಷಿಸುವುದರ ಜೊತೆಗೆ ಮೆಟ್ರೋ ಜಾಲದ ಸಂಪರ್ಕ ಕೊಂಡಿಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.













Click it and Unblock the Notifications