Namma Metro Orange Line Update: ಮೆಟ್ರೋ 3ನೇ ಹಂತದ ಯೋಜನೆಗೆ 11000 ಮರಗಳಿಗೆ ಕೊಡಲಿ: ಹೊಸ DPR
ಬೆಂಗಳೂರು, ಡಿಸೆಂಬರ್ 12: ಬೆಂಗಳೂರು ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಪಾಲಿಗೆ ಮಹತ್ವದ ಯೋಜನೆಯಾಗಿರುವ ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ಭವಿಷ್ಯದಲ್ಲಿ ಲಕ್ಷಾಂತರ ಜನ ಪ್ರಯಾಣಿಕರಿಗೆ ಸೇವೆ ಒದಗಿಸಲಿರುವ ಈ ಯೋಜನೆಗಾಗಿ ಸಾವಿರಾರು ಮರಳಿಗೆ ಕೊಡಲಿ ಹಾಕಬೇಕಾದ ಸ್ಥಿತಿ ಎದುರಾಗಿದೆ. ಯೋಜನೆಯು ಒಟ್ಟು ಮೂರು ಎತ್ತರಿಸಿದ ಕಾರಿಡಾರ್‌ನಲ್ಲಿ ನಿಮಾರ್ಣಗೊಳ್ಳಲಿದೆ ಎಂದು ಈಗಾಗಲೇ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಹೃದಯಭಾಗದಿಂದ ಅಂದರೆ ಮಾಗಡಿ ರಸ್ತೆ, ಜೆಪಿನಗರ 4ನೇ ಹಂತ ಹಾಗೂ ಹೊರ ವರ್ತುಲ ರಸ್ತೆಗೆ (ORR) ಸಂಪರ್ಕ ಕಲ್ಪಿಸುವ ಉದ್ದೇಶದ ಹೊಂದಿದ್ದು, ಇದರಲ್ಲಿ ಎರಡು ಎತ್ತರಿಸಿದ ಮಾರ್ಗಗಳು 44.65 km ಉದ್ದ ಇರಲಿವೆ. ಈ ಕಾಮಗಾರಿಗಾಗಿ ಒಟ್ಟು 11,000ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲು ಇಲ್ಲವೇ ಹಲವು ಮರ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು 'ಡೆಎಚ್' ವರದಿ ಮಾಡಿದೆ.

ನಮ್ಮ ಮೆಟ್ರೋಗೆ 3ನೇ ಹಂತದ ಯೋಜನೆ ಸಿದ್ಧವಾದ ಹೊಸ ಸಮಗ್ರ ಯೋಜನಾ ವರದಿ (ಡಿಪಿಆರ್) ಪ್ರಕಾರ, ಸಾವಿರಾರು ಮರಗಳಿಗೆ ಕತ್ತರಿಸುವ ಇಲ್ಲವೇ ಸ್ಥಳಾಂತರದ ಅಗತ್ಯ ಇದೆ ಎಂದು ತಿಳಿಸಿದೆ. ಈ ಯೋಜನೆಯನ್ನು ನಮ್ಮ 'ಮೆಟ್ರೋ ಕಿತ್ತಲೆ ಮಾರ್ಗ; (Namma metro orange line) ಎಂದು ಕರೆಯುತ್ತಾರೆ.
ಹೊಸ ಡಿಪಿಎಆರ್ ಪ್ರಕಾರ, ಎರಡು ಎತ್ತರಿಸಿದ 44.65 ಕಿಮೀ ಉದ್ದದ ಕಾರಿಡಾರ್‌ಗಳ ನಿರ್ಮಾಣಕ್ಕಾಗಿ ಇಷ್ಟು ಮರಗಳಿಗೆ ಕೊಡಲಿ ಹಾಕಬೇಕಿದೆ ಎಂದು ತಿಳಿಸಿದೆ.
ನಮ್ಮ ಮೆಟ್ರೋ ಕೇಂದ್ರದಿಂದ ಅನುಮೋದನೆ ಪಡೆಯಲು ಈಗಾಗಲೇ ಸಾಕಷ್ಟು ಸಲ ಡಿಪಿಆರ್‌ನಲ್ಲಿ ಬದಲಾವಣೆ ಮಾಡಿತ್ತು. ಕೊನೆಗೂ ಕೇಂದ್ರದಿಂದ ಆಗಸ್ಟ್ ತಿಂಗಳಲ್ಲಿ ಅನುಮೋದನೆ ಪಡೆದುಕೊಂಡಿತ್ತು. ಆದರೆ ಕರ್ನಾಟಕ ಸರ್ಕಾರದ ಸೂಚನೆಯಂತೆ ಹೊಸ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಫ್ಲಓವರ್ ನಿರ್ಮಿಸಬೇಕಾದ ಸವಾಲು ಎದುರಾಯಿತು. ಇದು ನಮ್ಮ ಮೆಟ್ರೋ ಹೊಸ ಯೋಜೆನ ಕಾರ್ಯಾರಂಭದ ವಿಳಂಬಕ್ಕೆ ಕಾರಣವಾಯಿತು.
ಇದೀಗ ಯೋಜನೆ ಆರಂಭಿಸಲು ಕೈಗೊಂಡ ಸಮೀಕ್ಷೆ, ಸಿದ್ದಪಡಿಸಿದ ಹೊಸ ಡಿಪಿಆರ್ ವರದಿಯಲ್ಲಿ ಉಲ್ಲೇಖಿಸಿರುವಂತೆ ಈ ಎರಡು ಕಾರಿಡಾರ್‌ಗಳ ನಿರ್ಮಾಣಕ್ಕೆ ಮರಗಳನ್ನು ಕತ್ತರಿಸುವುದು ಅಥವಾ ಸ್ಥಳಾಂತರ ಅಗತ್ಯವಿದೆ ಎಂದು BMRCL ತಿಳಿಸಿದೆ.
ಕಾಮಗಾರಿ ಪೂರ್ಣದ ಗಡುವು: 222.2 ಕಿಮೀ. ಮೆಟ್ರೋ ಜಾಲ
ನಮ್ಮ ಮೆಟ್ರೋ ಈ ಆರೆಂಜ್ ಲೈನ್ ಭವಿಷ್ಯದಲ್ಲಿ ಒಟ್ಟು ಬರೋಬ್ಬರಿ 7.85 ಲಕ್ಷ ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆಯಾಗಲಿದೆ. ನಿತ್ಯ ಲಕ್ಷಾಂತರ ಜನರಿಗೆ ಸೇವೆ ಒದಗಿಸುವ ಮಹತ್ವದ ಯೋಜನೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಈ ಯೋಜನೆಯನ್ನು 2029 ರಲ್ಲಿ ಪೂರ್ಣಗೊಳಿಲು ಗಡುವು ನೀಡಲಾಗಿದೆ. ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯಿಂದ ಮೆಟ್ರೋ ಜಾಲ 222.2 ಕಿಲೋ ಮೀಟರ್ ಜಾಲಕ್ಕೆ ವಿಸ್ತರಣೆ ಆದಂತಾಗುತ್ತದೆ.
ಈ ಯೋಜನೆಯಲ್ಲಿ ಸರ್ಕಾರದ ಸೂಚನೆಯಂತೆ ಮೆಟ್ರೋ ಲೈನ್ ಜೊತೆ ಜೊತೆಗೆ ಡಬಲ್ ಡೆಕ್ಕರ್ ನಿರ್ಮಿಸಿದರೆ ಪ್ರತಿ ಕಿಲೋಮೀಟರ್‌ಗೆ ರೂ.120 ಕೋಟಿ ಬೇಕಾಗುತ್ತಿದೆ. ಎರಡು ಎತ್ತರಿಸಿದ (44.65 ಕಿಮೀ) ಕಾರಿಡಾರ್‌ನಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಿಸಲು ಸದ್ಯದ ಮಾಹಿತಿ ಪ್ರಕಾರ 5,358 ಕೋಟಿ ರೂ. ಬೇಕಾಗಬಹುದು ಎಂದು ಪರಿಷ್ಕೃತ ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದು ಒಂದು ರೀತಿಯ ಸವಾಲಾಗಿದೆ. ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಬೇಕಿದೆ.












Click it and Unblock the Notifications