Namma Metro 3rd Phase: ಈ ಭಾಗದ ಲಕ್ಷಾಂತರ ಪ್ರಯಾಣಿಕರಿಗೆ ಸುಗಮ ಸಾರಿಗೆ, ರಿಯಲ್ ಎಸ್ಟೇಟ್‌ಗೆ ಬೂಸ್ಟ್

ಬೆಂಗಳೂರು, ಜುಲೈ 24: ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಬೆಂಗಳೂರಿಗೆ ನಿರ್ಣಾಯಕ ಕೊಡುಗೆ ನೀಡುತ್ತದೆ. ಐಟಿ ಕಾರಿಡಾರ್‌ಗೆ ಮಾತ್ರವಲ್ಲದೇ, ನಗರದ ಹೊರ ವರ್ತುಲ ರಸ್ತೆಯ (ORR) ಲಕ್ಷಾಂತರ ಪ್ರಯಾಣೀಕರಿಗೆ ಅನುಕೂಲ ಒದಗಿಸುತ್ತದೆ. ಎರಡು ಎತ್ತರಿಸಿದ ಮಾರ್ಗಗಳು ಈ ಯೋಜನೆಯಲ್ಲಿ ಬರಲಿವೆ. ಸಂಚಾರ ದಟ್ಟಣೆಗೆ ಹೆಚ್ಚಿರುವ ORR ಮಾರ್ಗದಲ್ಲಿ ಸಂಚಾರ ಕೊಂಚ ಸುಗಮನವಾಗಲಿದೆ. ಈ ಮಾರ್ಗದಲ್ಲಿ ರಿಯಲ್ ಎಸ್ಟೇಟ್‌ಗೂ ಉತ್ತೇಜನ ಸಿಗಲಿದೆ. ಭೂಮಿಗೆ ಬಂಗಾರದ ಬೆಲೆ ಬರಲಿದೆ.. ಈ ಮಾರ್ಗ, ನಿಲ್ದಾಣಗಳು, ಅಂದಾಜು ವೆಚ್ಚ, ಸಂಪರ್ಕದ ವಿವರ ಇಲ್ಲಿದೆ.

ನಮ್ಮ ಮೆಟ್ರೋ ಹಂತ 3 ನಗರದ ಪಶ್ಚಿಮದಿಂದ ಹೊರ ವರ್ತುಲ ರಸ್ತೆಯನ್ನು ಸಂಪರ್ಕ ಸಾಧಿಸುತ್ತದೆ. ಪೀಕ್ ಸಮಯದಲ್ಲಿ ORR ರಸ್ತೆಯಲ್ಲಿ ಶೇಷವಾಗಿ ಪೀಕ್ ಅವರ್ ದಟ್ಟಣೆ ಹೆಚ್ಚಿರುತ್ತದೆ. ಈ ಭಾಗವು ಒಳಗೊಂಡಂತೆ ಎರಡು ಮೆಟ್ರೋ ಲೈನ್ ನಿರ್ಮಾಣವಾಗಲಿವೆ. ಒಟ್ಟು 44.65 ಕಿ.ಮೀ ಉದ್ದದ ಯೋಜನೆ ಇದಾಗಿದ್ದು, 31 ನಿಲ್ದಾಣಗಳು ತಲೆ ಎತ್ತರಲಿವೆ. ಜನ ಸಂಚಾರ, ದಟ್ಟನೆ ನೋಡಿಕೊಂಡೆ ಈ ಮಾರ್ಗ ನಿರ್ಮಾಣ ಕೈಗೆತ್ತಿಕೊಳ್ಳಳಾಗಿದೆ. ಅದರಲ್ಲಿ ಒಂದಕ್ಕೆ 'ಆರೆಂಜ್ ಲೈನ್' ಎಂದು ಕರೆಯಲಾಗುತ್ತದೆ. ಈ ಯೋಜನೆ ಪೂರ್ಣಗೊಂಡರೆ ನಗರದಲ್ಲಿ ಮೆಟ್ರೋ ಜಾಲ 220.20 ಕಿ.ಮೀ.ವಿಸ್ತರಣೆ ಆಗುತ್ತದೆ ಎಂದು BMRCL ಈ ಹಿಂದೆಯೇ ಹೇಳಿತ್ತು.

Namma Metro Phase 3 Boost for Bengaluru ORR-44 65 KM Connectivity and Real Estate Sector

ಡಿಪಿಆರ್ ಪ್ರಕಾರ, ಆರೆಂಜ್ ಲೈನ್ ಮೆಟ್ರೋ ಕಾರಿಡಾರ್ ಜೆಪಿ ನಗರ 4 ನೇ ಹಂತ-ಕೆಂಪಾಪುರದವರೆಗೆ ಸ್ಥಾಪನೆ ಆಗಲಿದ್ದು, ಹೊರ ವರ್ತುಲ ರಸ್ತೆ ಪಶ್ಚಿಮದ ಉದ್ದಕ್ಕೂ ಚಲಿಸುತ್ತದೆ. 32 ಕಿಲೋ ಮೀಟರ್ ಉದ್ದದ ಈ ಮಾರ್ಗದಲ್ಲಿ ಬರೋಬ್ಬರಿ 22 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಅದೇ ರೀತಿ ಕಾರಿಡಾರ್ 2 ಹೊಸಹಳ್ಳಿ-ಕಡಬಗೆರೆವರೆಗೆ ಮಾಗಡಿ ರಸ್ತೆಯ ಉದ್ದಕ್ಕೂ ಈ ಲೈನ್ ಬರಲಿದ್ದು, 12.5 ಕಿ.ಮೀ ಉದ್ದವಿದ್ದು 9 ನಿಲ್ದಾಣಗಳು ಈ ಮಾರ್ಗದಲ್ಲಿ ತಲೆ ಎತ್ತಲಿವೆ. ಈ ಮಾರ್ಗಗಳಿಗಾಗಿ ಸುಮಾರು 15,600 ಕೋಟಿ ರೂ. ವ್ಯಯಿಸಲಾಗುತ್ತದೆ.

ಮೆಟ್ರೋ 3ನೇ ಹಂತದ ಯೋಜನೆ, ಸಂಪರ್ಕ ಮಾರ್ಗ

ಈ ಯೋಜನೆಯಡಿ ಹೊರ ವರ್ತುಲ ರಸ್ತೆ, ತುಮಕೂರು ರಸ್ತೆಯ ಉತ್ಪಾದನಾ ಘಟಕ, ಕೈಗಾರಿಕೆಗಳು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಕಾಲೇಜುಗಳು, ವಿಶ್ವವಿದ್ಯಾಲಯಗಳು, ನಗರದ ದಕ್ಷಿಣ ಭಾಗಗಳು ಹಾಗೂ ಇತರ ಭಾಗಗಳಿಗೆ ಸಂಪರ್ಕ ಸಾಧಿಸಿದಂತಾಗುತ್ತದೆ. ಇದರಿಂದ ನಿತ್ಯ ಲಕ್ಷಾಂತರ ಪ್ರಯಾಣಿಕರಿಗೆ ಸುಗಮ ಸಾರಿಗೆ ಲಭ್ಯವಾಗುತ್ತದೆ. ಸಂಚಾರ ದಟ್ಟಣೆ ಕಿರಿಕಿರಿ ತಪ್ಪುತ್ತದೆ.

Namma Metro Phase 3 Boost for Bengaluru ORR-44 65 KM Connectivity and Real Estate Sector

ಬಹುಮಾದರಿ ಸಾರಿಗೆ ಹೊಂದಿರಲಿದೆ

ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗಳಲ್ಲಿ 10 ಪ್ರಮುಖ ಸ್ಥಳಗಳಲ್ಲಿ ಬಹುಮಾದರಿ ಸಾರಿಗೆ ಏಕೀಕರಣಗೊಳ್ಳಲಿದೆ. ಅಂದರೆ ಮೆಟ್ರೋ ನಿಲ್ದಾಣ, ಬಿಎಂಟಿಸಿ ನಿಲ್ದಾಣ, ರೈಲು ನಿಲ್ದಾಣಗಳು, ಉಪನಗರ ರೈಲು ನಿಲ್ದಾಣಗಳಿಗೂ ಸಂಪರ್ಕ ಸಾಧಿಸುತ್ತದೆ. ಇಲ್ಲಿ ಪ್ರಯಾಣಿಕ ಸ್ನೇಹಿ ಪಿಕ್-ಅಪ್ ಮತ್ತು ಡ್ರಾಪ್, ವಾಹನ ನಿಲುಗಡೆ ವ್ಯವಸ್ಥೆ, ಪಾದಾಚಾರಿ ಮಾರ್ಗ ಎಲ್ಲವು ಇರಲಿದೆ. ಫೀಡರ್ ಬಸ್ ಸೇವೆ ಲಭ್ಯ ಇರಲಿವೆ. ಸದ್ಯ ಈ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಬರೋಬ್ಬರಿ 11000 ಮರಗಳಿಗೆ ಕತ್ತರಿ ಹಾಕುವ ಚಿಂತನೆ ಇದೆ. ಹೀಗಾಗಿ ಅವುಗಳಲ್ಲಿ ಎಷ್ಟು ಸ್ಥಳಾಂತರಿಸಬೇಕು, ಕತ್ತರಿಸಬೇಕು ಎಂಬ ನಿರ್ಧಾರವನ್ನು ಸಮಾಲೋಚಿಸಿ ಕೈಗೊಳ್ಳಲಾಗುತ್ತಿದೆ.

ರಿಯಲ್‌ ಎಸ್ಟೇಟ್‌ಗೆ ಬೂಸ್ಟ್

ಈ ಮೆಟ್ರೋ ಯೋಜನೆ ಆದ ಬಳಿಕ ಹೊರ ವರ್ತುಲ ರಸ್ತೆ ಜೆಪಿನಗರ, ಕಡುಬಗೆರೆ, ಮಾಗಡಿ ರಸ್ತೆ ಹಾಗೂ ಕಾಲೇಜು, ವಿಶ್ವವಿದ್ಯಾಲಯಗಳು ಇರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರಲಿದೆ. ಮನೆ ಬಾಡಿಗೆ ದರ ಜೊತೆಗೆ, ಆಸ್ತಿ ಮೌಲ್ಯಗಳು ಚದರ ಮೀಟರ್ ಅಡಿಗೆ ಹೆಚ್ಚಾಗುತ್ತದೆ. ರಿಯಲ್ ಎಸ್ಟೇಟ್ ಈ ಭಾಗದಲ್ಲಿ ಅಭಿವೃದ್ಧಿ ಆಗಲಿದೆ. ಆಸ್ತಿ ಮಾರಾಟಗಾರರಿಗೆ ದೆಸೆ ಶುರುವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+