Namma metro: ಇಂದು ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ, ಮಾಹಿತಿ ಇಲ್ಲಿದೆ

ಬೆಂಗಳೂರು, ಫಬ್ರವರಿ, 11: ಬೆಂಗಳೂರಿನ ಈ ಮಾರ್ಗದ ಮೆಟ್ರೋ ಇಂದು (ಫೆಬ್ರವರಿ 11) ಬೆಳಗ್ಗೆ 9 ಗಂಟೆಯವರೆಗೆ ಸ್ಥಗಿತವಾಗಲಿದೆ ಎನ್ನುವ ಮಾಹಿತಿ ಇದ್ದು, ಯಾವ್ಯಾವ ಮಾರ್ಗಗಗಳಲ್ಲಿ ಸ್ಥಗಿತವಾಗಲಿದೆ ಎಂದು ಇಲ್ಲಿ ತಿಳಿಯಿರಿ.

ಬೆಂಗಳೂರು ಭಾರತದ ಅತ್ಯಂತ ಜನನಿಬಿಡ ನಗರಗಳಲ್ಲೊಂದಾಗಿದೆ ಮತ್ತು ಕರ್ನಾಟಕ ರಾಜಧಾನಿಯಲ್ಲಿ ಹೆಚ್ಚಿನ ಕಾರ್ಪೊರೇಟ್ ಕಚೇರಿಗಳು ಇಲ್ಲಿ ಇರುವುದರಿಂದ ಭಾರತದ ಕಾರ್ಪೊರೇಟ್ ರಾಜಧಾನಿ ಅಂತಲೂ ಎಂದೂ ಕರೆಯಬಹುದಾಗಿದೆ. ಪ್ರತಿಯೊಬ್ಬ ಬೆಂಗಳೂರಿನ ನಿವಾಸಿಗಳು ಎದುರಿಸುತ್ತಿರುವ ಮತ್ತು ದ್ವೇಷಿಸುವ ಒಂದು ಸಮಸ್ಯೆ ಬೆಂಗಳೂರು ಸಂಚಾರ ದಟ್ಟಣೆಯಾಗಿದೆ.

Namma metro: Metro run suspend on this route today

ಗಂಟೆಗಟ್ಟಲೆ ಸಂಚಾರ ದಟ್ಟಣೆಗಳನ್ನು ತಗ್ಗಿಸಲು ತುಂಬಾ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ. ವಿಶೇಷವಾಗಿ ನಮ್ಮ ಮೆಟ್ರೋವನ್ನು ಬಳಸುತ್ತಾರೆ. ನೀವು ಇಂದು ಮೆಟ್ರೋವನ್ನು ಬಳಸಲು ಯೋಜಿಸುತ್ತಿದ್ದರೆ, ನಮ್ಮ ಮೆಟ್ರೋ ಪರ್ಪಲ್ ಲೈನ್ ಸೇವೆಗಳು ನಿರ್ದಿಷ್ಟ ಸಮಯದವರೆಗೆ ಸ್ಥಗಿತಗೊಳ್ಳುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಮಾರ್ಗದ ಆಯ್ದ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಮ್ಮ ಮೆಟ್ರೋ ಪರ್ಪಲ್ ಲೈನ್ ಸೇವೆಗಳು ಇಂದು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ. ಇದರ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಾಡಿದೆ. ಬಿಎಂಆರ್‌ಸಿಎಲ್‌ ನಿರ್ವಹಿಸುವ ನಿರ್ವಹಣಾ ಕಾರ್ಯದಿಂದಾಗಿ ಸೇವೆಗಳು ಭಾಗಶಃ ಅಡ್ಡಿಪಡಿಸುತ್ತವೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕೃತ ಪ್ರಕಟಣೆಯು ಸೇವೆಯನ್ನು ಸ್ಥಗಿತಗೊಳಿಸುವ ಸಮಯವನ್ನು ಮತ್ತು ಆ ಅವಧಿಗೆ ಕಾರ್ಯನಿರ್ವಹಿಸದಿರುವ ನಿಲ್ದಾಣಗಳನ್ನು ನಿರ್ದಿಷ್ಟಪಡಿಸಿದೆ. ಅಧಿಕೃತ ಅಪ್‌ಡೇಟ್‌ನಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮವು ಭಾನುವಾರ ಟ್ರಿನಿಟಿ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ನೇರಳೆ ಮಾರ್ಗದಲ್ಲಿ ನಿರ್ವಹಣಾ ಕಾರ್ಯವನ್ನು ನಡೆಸಲಿದೆ.

ಪರ್ಪಲ್ ಲೈನ್‌ನಲ್ಲಿ ಎಂಜಿ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವಿನ ವಾಣಿಜ್ಯ ಸೇವೆಗಳನ್ನು ಬೆಳಿಗ್ಗೆ 7 ರಿಂದ9 ಗಂಟೆಯವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಎಂದು ತಿಳಿಸಿದೆ. ನಿರ್ವಹಣಾ ಕಾರ್ಯ ಮುಂದುವರಿದಿದ್ದರೂ, ಬೆಂಗಳೂರಿನ ಮೆಟ್ರೋ ರೈಲುಗಳು ಎಂಜಿ ರಸ್ತೆ ಮತ್ತು ಚಲ್ಲಘಟ್ಟ ಮತ್ತು ಇಂದಿರಾನಗರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಬೆಳಿಗ್ಗೆ 7ರಿಂದ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿತ್ತು.

ಸಂಪೂರ್ಣ ನೇರಳೆ ಮಾರ್ಗದಲ್ಲಿ ಸಾಮಾನ್ಯ ಸೇವೆಗಳು ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 9ರಿಂದ ಪ್ರಾರಂಭ ಆಗುತ್ತವೆ. ನಮ್ಮ ಮೆಟ್ರೋ ಗ್ರೀನ್ ಲೈನ್ ಸೇವೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್‌ಸಿಲ್‌ ತಿಳಿಸಿದೆ. ಈ ಮಾರ್ಗದ ರೈಲುಗಳು ಬೆಳಗ್ಗೆ 7ನಿಂದ ನಿಗದಿತವಾಗಿ ಸಂಚಾರ ಮಾಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+