• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಪ್ಟೆಂಬರ್ 7 ರಿಂದ ನಮ್ಮ ಮೆಟ್ರೋ ಸಂಚಾರ: ಮಾರ್ಗಸೂಚಿ ರೆಡಿ

|

ಬೆಂಗಳೂರು, ಸೆಪ್ಟೆಂಬರ್ 03: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ ರದ್ದುಪಡಿಸಲಾಗಿದ್ದ ಮೆಟ್ರೋ ರೈಲು ಸಂಚಾರ ಸೆ.7 ರಿಂದ ಆರಂಭವಾಗುತ್ತಿದ್ದು, ಬಿಎಂಆರ್‌ಸಿಎಲ್ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

   Namma Metro ಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ನಿಲ್ಲಲ್ಲ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಟೋಕನ್ ಮಾರಾಟಕ್ಕೆ ಅನುಮತಿ ನೀಡದ ಕಾರಣ ಆನ್‌ಲೈನ್ ರೀಚಾರ್ಜ್‌ನೊಂದಿಗೆ ಸ್ಮಾರ್ಟ್ ಕಾರ್ಡ್ ಬಳಸಬೇಕಿದೆ.

   ಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲಲ್ಲ

   ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಪ್ರವೇಶದ್ವಾರಲ್ಲೇ ಪ್ರತಿಯೊಬ್ಬರು ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಬೇಕಿದೆ.

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಮಾರ್ಗಸೂಚಿ ಇಂತಿದೆ

   -ಮುನ್ನೆಚ್ಚರಿಕೆ ಕ್ರಮವಾಗಿ 400 ಪ್ರಯಾಣಿಕರು ಮಾತ್ರ ರೈಲಿನಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. 400ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರೆ ಅವರನ್ನು ಮುಂದಿನ ನಿಲ್ದಾಣದಲ್ಲಿ ಇಳಿಸಲಾಗುತ್ತದೆ.

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   - ಲಿಫ್ಟ್‌ಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಪ್ರಯಾಣಿಸಬಾರದು

   -65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷದ ಒಳಗಿನವರು ಅಗತ್ಯವಿದ್ದರೆ ಮಾತ್ರ ಪ್ರಯಾಣಿಸಬೇಕು.

   -ರೈಲು ಹತ್ತುವಾಗ ಮತ್ತು ಒಳಿಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

   -ನಿಲ್ದಾಣಗಳಲ್ಲಿ ಗುರುತು ಮಾಡಿರುವ ಹಳದಿ ಗುರುತಿನ ಮೇಲೆಯೇ ನಿಲ್ಲಬೇಕು

   -ಟೋಕನ್ ವ್ಯವಸ್ಥೆ ಇಲ್ಲ, ಕಾರ್ಡ್ ಇದ್ದವರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಬಹುದು.

   -ಎಸ್ಕಲೇಟರ್‌ನಲ್ಲಿ ಚಲಿಸುವಾಗ ಮತ್ತೊಬ್ಬರಿಗಿಂತ ಒಂದು ಸ್ಟೆಪ್ ದೂರವಿರಿ

   - ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು, ನಿಲ್ದಾಣಗಳಲ್ಲಿ ಮತ್ತು ರೈಲುಗಳ ಒಳಗೆ ಸೂಕ್ತವಾದ ಗುರುತುಗಳನ್ನು ಮಾಡಬೇಕು.

   - ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದರೆ ಅಂತಹ ನಿಲ್ದಾಣಗಳಲ್ಲಿ ರೈಲು ನಿಲ್ಲಲ್ಲ.

   - ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವುದು. ಮಾಸ್ಕ್ ಧರಿಸದವರಿಗೆ ಪಾವತಿ ಆಧಾರದ ಮೇಲೆ ಮಾಸ್ಕ್ ಪೂರೈಸುವ ವ್ಯವಸ್ಥೆಯನ್ನು ಮೆಟ್ರೋ ರೈಲು ನಿಗಮಗಳು ಮಾಡಬಹುದು.

   - ನಿಲ್ದಾಣಗಳಿಗೆ ಪ್ರವೇಶಿಸುವಾಗ ದೇಹದ ಉಷ್ನಾಂಶ ತಪಾಸಣೆ, ಲಕ್ಷಣರಹಿತ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ರೋಗಲಕ್ಷಣ ಹೊಂದಿರುವವರಿಗಾಗಿ ಪರೀಕ್ಷೆ/ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಕೋವಿಡ್ ಆರೈಕೆ ಕೇಂದ್ರ/ಆಸ್ಪತ್ರೆಗೆ ಹೋಗಲು ಸೂಚಿಸಲಾಗುತ್ತದೆ. ಆರೋಗ್ಯ ಸೇತು ಅಪ್ಲಿಕೇಶನ್‌ನ ಹೊಂದಿರಬೇಕು.

   -ಸೆಪ್ಟೆಂಬರ್ 7 ರಿಂದ ನೇರಳೆ ಮಾರ್ಗದಲ್ಲಿ ಮಾತ್ರ ಮೆಟ್ರೋ ಸಂಚರಿಸಲಿದೆ. ಸೆಪ್ಟೆಂಬರ್ 9ರಿಂದ ಹಸಿರು ಬಣ್ಣದ ಲೈನ್ ನಲ್ಲಿ ಮೆಟ್ರೋ ಸಂಚಾರ ಆರಂಭಿಸಲಿದೆ. ಆರಂಭಿಕವಾಗಿ ಜನ ಸಂಚಾರ ಹೆಚ್ಚಾಗಿರುವ ಬೆಳಗ್ಗೆ 3 ಗಂಟೆ ಮತ್ತು ಸಂಜೆ 3 ಗಂಟೆಗಳ ಕಾಲ ಸಂಚಾರ ಆರಂಭಿಸಲಿದೆ.

   ಸೆಪ್ಟೆಂಬರ್ 11ರಿಂದ ಎಂದಿನಂತೆ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಸೇವೆ ಒದಗಿಸಲಿವೆ.

   English summary
   Bengaluru Metro will resume operations from September 7 after a hiatus of five-month since the same were suspended due to the coronavirus-induced lockdown, an order issued by the Karnataka government confirmed on Monday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X