Namma Metro: ಹಳದಿ ಮಾರ್ಗದ ಪ್ರಯಾಣಿಕರಿಗೆ ಶಾಕ್! ಮೆಟ್ರೋ ಕಾರ್ಯಾಚರಣೆ ಯಾವಾಗ? ಇಲ್ಲಿದೆ ಅಪ್ಡೇಟ್ಸ್
ಬೆಂಗಳೂರು, ಏಪ್ರಿಲ್ 13: ರಾಜಧಾನಿ ಬೆಂಗಳೂರಿನ ಜನರು ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು ಕಾರ್ಯಾಚರಣೆಗೆ ಮುಹೂರ್ತ ಯಾವಾಗ ಕೂಡಿ ಬರುತ್ತದೋ ಎಂದು ಕಾಯುತ್ತಿದ್ದಾರೆ. ಈ ಮಧ್ಯೆ ಶಾಕಿಂಗ್ ನ್ಯೂಸ್‌ವೊಂದು ಹೊರ ಬಿದ್ದಿದೆ. ಎರಡು ಡ್ರೈವರ್‌ಲೆಸ್ ಮೆಟ್ರೋ ರೈಲು ಹೊಂದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇದೇ ಮೇ ಇಲ್ಲವೇ ಜೂನ್ ತಿಂಗಳಲ್ಲಿ ತೆರೆಯುವ ಚಿಂತನೆ ನಡೆಸಿತ್ತು. ಆದರೆ ಇದೀಗ ಎಲ್ಲವು ತೆಲೆಕೆಳಗೆ ಆಗಿದೆ.
ಒಂದರ್ಥದಲ್ಲಿ ಹಲವು ಗಡುವು ಮೀರದರೂ ಸಹ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಹಾದು ಹೋಗುವ ನಮ್ಮ ಮೆಟ್ರೋ ಹಳದಿ ಮಾರ್ಗ ಸಂಪೂರ್ಣ ತೆರೆಯುವುದು ಮತ್ತೆ ವಿಳಂಬವಾಗುವ ಮುನ್ಸೂಚನೆ ಸಿಕ್ಕಿದೆ. ಈ ಮೊದಲು 2025ರ ಮೇ ಅಂತ್ಯ ಇಲ್ಲವೇ ಜೂನ್ ಮೊದಲಾರ್ಧದಲ್ಲಿ 19.5 ಕಿಲೋ ಮೀಟರ್ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ ಎಂದು ಹೇಳಲಾಗಿತ್ತು.

ಸದ್ಯ ಮೂರನೇ ರೈಲು ಏಪ್ರಿಲ್ ಅಂತಕ್ಕೆ ಬರುವ ನಿರೀಕ್ಷೆ ಇದೆ. ರೈಲ್ವೆ ಸುರಕ್ಷತಾ ಆಯುಕ್ತರು ಅನುಮೋದನೆ ನೀಡಲಿದ್ದಾರೆ. ಇದೆಲ್ಲವು ರೈಲು ಆಗಮನಿಸುವ, ಮೆಟ್ರೋ ಮೂಲಸೌಕರ್ಯಗಳ ಮೇಲೆ ನಿರ್ಧಾರವಾಗಲಿದೆ. ನಮ್ಮ ಮೆಟ್ರೋ ಹಳದಿ ಮಾರ್ಗವು ಮೇ ಇಲ್ಲವೇ ಜೂನ್ ಪೂರ್ಣ ಪ್ರಮಾಣದಲ್ಲಿ ತೆರೆಯುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ತಿಳಿಸಿದ್ದಾರೆ.
ರೈಲಿನ ಪೂರ್ಣ ಕಾರ್ಯಾಚರಣೆ ಆರಂಭದ ಅಪ್ಡೇಟ್
ಎರಡನೇ ರೈಲಿನ ಎಲ್ಲ ವಿಧದ ತಪಾಸಣೆ ಮಾಡಿದ್ದಾರೆ. ಈಗಾಗಲೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಮಾರ್ಗ ತಪಾಸಣೆ ಮಾಡಿದ್ದಾರೆ. ಅವರು ಈ ತಿಂಗಳಾಂತ್ಯಕ್ಕೆ ಅನುಮೋದನೆ ನೀಡಲಿದ್ದಾರೆ. ನಂತರ ಮತ್ತೊಂದು ರೈಲು ಬರಲಿದ್ದು, ಅದನ್ನು ತಪಾಸಣೆ ಮಾಡಲಾಗುತ್ತಿದೆ. ಮೂರು ರೈಲು ಇಟ್ಟುಕೊಂಡು ಸೇವೆ ಆರಂಭಿಸಲಾಗುತ್ತದೆ. ಆದರೆ ಪೂರ್ಣ ಪ್ರಮಾಣದ ಸೇವೆ ಮಂದಿನ ಆಗಸ್ಟ್ ಅಥವಾ ಸೆಪ್ಟಂಬರ್ ಹೊತ್ತಿಗೆ ತೆರೆಲಾಗುತ್ತದೆ ಎಂದು ಅವರು ಹೇಳಿದರು.
ಅಗತ್ಯ ಎಲ್ಲ ರೈಲುಗಳು ಸಿಕ್ಕ ಮೇಲೆ ಮಾರ್ಗದ ಕಾರ್ಯಾಚರಣೆ ಆರಂಭವಾಗಲಿದೆ. ಸದ್ಯ ಮೇ ಇಲ್ಲವೇ ಜೂನ್ ನಲ್ಲಿ ಮೂರು ರೈಲುಗಳಿಂದ ಅಂದರೆ ಕಡಿಮೆ ರೈಲುಗಳಿಂದ ಅತ್ಯಲ್ಪ ದೂರದ ವರೆಗೆ ಮಾರ್ಗ ತೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಪೂರ್ತಿ ಮಾರ್ಗ ತೆರೆಯುವುದು ಉತ್ತಮ ಅಂತಲೂ ಹೇಳಲಾಗುತ್ತಿದೆ. ಸದ್ಯ ಬೆಂಗಳೂರು ಮೆಟ್ರೋ ಅಧಿಕಾರಿಗಳು ಮೂರನೇ ರೈಲಿಗೆ ಕಾಯುತ್ತಿದೆ.

ಹಸಿರು ಮಾರ್ಗದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗವು ನಿರ್ಮಾಣಗೊಂಡಿದೆ. ಎಲ್ಲ ಕೆಲಸಗಳೂ ಪೂರ್ಣಗೊಂಡಿವೆ. ಆದರೂ ಕಾರ್ಯಾಚರಣೆ ಆಗುತ್ತಿಲ್ಲ ಎಂಬ ದೂರು ಪ್ರಯಾಣಿಕರಿಂದ ಕೇಳಿ ಬರುತ್ತಿದೆ. ಚೀನಾದಿಂದ ರೈಲು ಆಗಮನ ತಡವಾಗಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಮೊದಲ ಬ್ಯಾಚ್ ರೈಲು ಸೆಟ್ ಫೆಬ್ರವರಿ 14 ರಂದು ಆಗಮಿಸಿದೆ. ಕನಿಷ್ಠ ಮೂರು ರೈಲುಗಳಿಂದ ಕೆಲಸ ಆರಂಭಿಸಲು ಬಿಎಂಆರ್‌ಸಿಎಲ್ ಸಜ್ಜಾಗಿದೆ.
ಐಟಿ ಕಾರಿಡಾರ್ ಸಂಪರ್ಕಿಸುವ ಮಾರ್ಗ
ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಪ್ರಮುಖ ಕಂಪನಿಗಳು ಇವೆ. ನಿತ್ಯ ಸಾವಿರಾರು ಉದ್ಯೋಗಿಗಳು, ಸಾರ್ವಜನಿಕರು ಈ ಭಾಗದಲ್ಲಿ ಓಡಾಡುತ್ತಾರೆ. ಹೀಗಾಗಿ ಈ ಹಳದಿ ಮಾರ್ಗ ನಿರ್ಣಾಯಕ ಎಂದು ಹೇಳಲಾಗುತ್ತಿದೆ. ಈ ಹೊಸ ಮಾರ್ಗವು ದಕ್ಷಿಣ ಬೆಂಗಳೂರು ಮತ್ತು ನಗರದ ಐಟಿ ಕ್ಲಸ್ಟರ್ ಮಧ್ಯ ನೇರ ಸಂಪರ್ಕ ಸಾಧಿಸಲಿದೆ.
ಈ ಮಾರ್ಗದ ಬಗ್ಗೆ ಹೆಚ್ಚಿನ ಮಾಹಿತಿ ನೋಡುವುದಾದರೆ, ಇಲ್ಲಿ 16 ಎತ್ತರದ ಮೆಟ್ರೋ ನಿಲ್ದಾಣ ನಿರ್ಮಿಸಲಾಗಿದೆ. ಮೆಟ್ರೋ ಜಾಲ ವಿಸ್ತರಣೆಯಲ್ಲಿ ಅದರಲ್ಲೂ ಐಟಿ ಕಾರಿಡಾರ್ ಸಂಪರ್ಕಿಸುವ ಮಾರ್ಗ ಇದಾಗಿದೆ. ಪಿಂಕ್ ಮಾರ್ಗ, ಹಸಿರು ಮಾರ್ಗ ಮೆಟ್ರೋ ಮಾರ್ಗ ಬೇದಿಸುತ್ತದೆ. ಸೆಂಟ್ರಲ್ ಸಿಲ್ಕ ಬೋರ್ಡ್ ನಲ್ಲಿ ಜನದಟ್ಟಣೆ ಕಡಿಮೆ ಮಾಡಲು ಈ ಮಾರ್ಗ ಪ್ರಮುಖ ಪಾತ್ರವಹಿಸಲಿದೆ.












Click it and Unblock the Notifications