BREAKING: ನಮ್ಮ ಮೆಟ್ರೋ ಪರಿಷ್ಕೃತ ದರ ಫೆಬ್ರವರಿ 14ರಿಂದ ಜಾರಿ: ಇಳಿಕೆ ಆಗಿದ್ದೆಷ್ಟು?

ಬೆಂಗಳೂರು, ಫೆಬ್ರವರಿ 13: ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಬಿಸಿ ತಟ್ಟುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂತು. ಕಾನೂನಾತ್ಮಕವಾಗಿಯೇ ನಾವು ದರ ಏರಿಕೆ ಮಾಡಿದ್ದೇವೆ ಎಂದಿದ್ದ BMRCLಗೆ ಬೆಲೆ ಇಳಿಕೆಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು. ಇದರ ಬೆನ್ನಲ್ಲೆ ವಿಧಾನಸೌಧದಲ್ಲಿ ಸಚಿವರ ಜೊತೆ ಚರ್ಚಿಸಿದ ನಮ್ಮ ಮೆಟ್ರೋ ಅಧಿಕಾರಿಗಳು ಜನಾಕ್ರೋಶಕ್ಕೆ ಮಣಿದಿದ್ದಾರೆ. ಪ್ರಯಾಣಿಕರಿಗೆ ದರ ಇಳಿಕೆಯ ಗುಡ್ ನ್ಯೂಸ್ ನೀಡಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಿಎಂಆರ್‌ಸಿಎಲ್ ಎಂಡಿ ಅವರು ದರ ಏರಿಕೆ ಬಗ್ಗೆ ಕೇಳಿ ಬಂದ ಜನಾಕ್ರೋಶ, ದರ ಇಳಿಕೆ ಬಗ್ಗೆ ಮಾತುಕತೆ ನಡೆಸಿದರು. ನಂತರ ಈ ದರದಲ್ಲಿ ಮಹತ್ವದ ಬದಲಾವಣೆ ತರುವ ನಿರ್ಧಾರ ಪ್ರಕಟಿಸಿದರು. ನಾಳೆಯಿಂದಲೇ ಹೊಸ ದರ ಜಾರಿಯಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಶೇಕಡಾ 90ರಿಂದ 70ಕ್ಕೆ ಇಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶುಕ್ರವಾರ ಗೊತ್ತಾಗಲಿದೆ.

Namma Metro Fare Reduce Updates BMRCL Press Meet

ಗುರುವಾರ (ಫೆ.13) ಮಧ್ಯಾಹ್ನ 1.30ಕ್ಕೆ ಸುದ್ದಿಗೋಷ್ಠಿ ನಡೆಸಿದ BMRCL ಎಂಡಿ ಮಹೇಶ್ವರ ರಾವ್ ಅವರು, ದರ ಇಳಿಕೆಗೆ ನಿರ್ಧರಿಸಲಾಗಿದೆ. ಎಲ್ಲೆಲ್ಲಿ ಶೇಕಡಾ 40%-50%ರಷ್ಟು ಏರಿಕೆ ಆಗಿದೆಯೋ ಅಲ್ಲಲ್ಲಿ ದರ ಇಳಿಕೆಗೆ ಕ್ರಮ ವಹಿಸಲಾಗುವುದು. ನಮ್ಮ ಮೆಟ್ರೋ ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು, ಸ್ಜೇಜ್ ಬೈ ಸ್ಟೇಜ್ ಮರ್ಜ್ ಮಾಡಲಾಗುವುದು ಎಂದಿದ್ದಾರೆ.

ದರ ಇಳಿಕಯ ಪರಿಷ್ಕೃತ ಪಟ್ಟಿ ಶೀಘ್ರವೇ ನೀಡಲಾಗುವುದು. ನಾಳೆಯಿಂದ ಈ ಹೊಸ ದರ ಜಾರಿಗೆ ಬರಲಿದೆ ಎಂದು ತಿಳಿಸಿದರು. ಬೆಂಗಳೂರು ಮೆಟ್ರೋ ರೈಲು ನಿಗಮ ನಷ್ಟದಲ್ಲಿದೆ. ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ. ಈ ಸಂಬಂಧ ಇತ್ತೀಚೆಗೆ ದರ ಪರಿಷ್ಕರಣೆ ಮಾಡಲಾಗಿತ್ತು. ಅದರಿಂದ ಉಂಟಾದ ತೊಂದರೆ ನಿವಾರಿಸಲಾಗುವುದು. ದರ ಇಳಿಕೆಗೆ ಅವಕಾಶ ಇರುವಲ್ಲಿ ಟಿಕೆಟ್ ಬೆಲೆ ಕಡಿಮೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸ್ಜೇಜ್ ಬೈ ಸ್ಜೇಜ್ ರೇಟ್ ಮರ್ಜ್

ನಮ್ಮ ಮೆಟ್ರೋ ದರ ಪರಿಷ್ಕರಣೆ ಮಾಡುವುದಿಲ್ಲ. ಸ್ಜೇಜ್ ಬೈ ಸ್ಜೇಜ್ ರೇಟ್ ಮರ್ಜ್ ಮಾಡುತ್ತೇವೆ. ಸ್ಟೇಜ್ ರೇಟ್ ಜಂಪ್ ಆಗಿದ್ದರೆ ಕಡಿಮೆ ಮಾಡಲು ಕ್ರಮ ವಹಿಸುತ್ತೇವೆ. ಬೆಂಗಳೂರು ಮೆಟ್ರೋ ಕನಿಷ್ಠ ದರ 10 ರೂಪಾಯಿ ಹಾಗೂ ಗರಿಷ್ಠ 90 ರೂಪಾಯಿ ಇರುತ್ತದೆ. ಶೇಕಡಾ 90-100 ರೂಪಾಯಿ ರೇಟ್ ಜಂಪ್ ಆಗಿದ್ದಲ್ಲಿ ಅದನ್ನು ಕಡಿಮೆ ಮಾಡುತ್ತೇವೆ ಎಂದು ಹೇಳಿದರು.

ಮೆಟ್ರೋ ನಿರ್ಧಾರ ಸಮಾಧಾನ ತಂದಿಲ್ಲ: ಜನರು

ಈಗಾಗಲೇ ನಮ್ಮ ಮೆಟ್ರೋ ದರವನ್ನು ಶೇಕಡಾ 46ರಷ್ಟು ದರ ಏರಿಕೆ ಮಾಡಲಾಗಿದೆ. ಕೆಲವು ಸ್ಟೇಷನ್‌ಗಳಿಂದ ಕೆಲವು ಸ್ಟೇಷನ್‌ಗಳಿಗೆ ಹೆಚ್ಚು ದರ ಇದೆ. ಸದ್ಯ ಸುದ್ದಿಗೋಷ್ಠಿಯಲ್ಲಿ BMRCL ವ್ಯವಸ್ಥಾಪಕರು ಹೇಳಿದ್ದು ಕೇಳಿದರೆ, ಇದು ದರ ಇಳಿಕೆ ಮಾಡಲು ಕ್ರಮ ಅಲ್ಲ. ಬದಲಾಗಿ ಏರಿಕೆ ದರದಲ್ಲಿ ಅಡ್ಜೆಸ್ಟ್ ಮೆಂಟ್ ಮಾಡಲಿದ್ದಾರೆ ಎಂಬುದು ಗೊತ್ತಾಗುತ್ತಿದೆ.

ಮೊದಲು ಮೆಟ್ರೋ ಕನಿಷ್ಠ ದರ 10ರೂ. ಗರಿಷ್ಠ 60 ರೂಪಾಯಿ ಇತ್ತು. ಅದು ಏರಿಕೆ ನಂತರ ಕನಿಷ್ಠ ದರದಲ್ಲಿ ಬದಲಾವಣೆ ಆಗಿಲ್ಲ, ಗರಿಷ್ಠ ದರ 90 ರೂ.ಗೆ ಏರಿಕೆ ಆಯಿತು. ಇದೀಗ ಏರಿಕೆ ಮಾಡಿದ ದರದಲ್ಲೇ ಅಡ್ಜೆಸ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿಯೇ ಸ್ಟೇಜ್ ಬೈ ಸ್ಟೇಜ ಮರ್ಜ್ ಮಾಡುವುದಾಗಿ ಅಧಿಕಾರಿಗಳೂ ತಿಳಿಸಿದ್ದಾರೆ ಎಂದು ಜನರು ಮತ್ತು ಸಿಡಿಮಿಡಿಗೊಂಡಿದ್ದಾರೆ. ಇಷ್ಟಾದರೂ BMRCL ಬುದ್ಧಿ ಕಲಿತಿಲ್ಲ ಎಂದಿದ್ದಾರೆ. ನಾಳೆ ಪರಿಷ್ಕರಣೆ ಹೊರ ದರ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಪ್ರಕಟವಾದ ಮೇಲೆ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+