Namma Metro: ನಮ್ಮ ಮೆಟ್ರೋ ದರ ಏರಿಕೆ, ಬಿಎಂಆರ್‌ಸಿಎಲ್‌ಗೆ 7 ಪ್ರಶ್ನೆಗಳು

ಬೆಂಗಳೂರು, ಮಾರ್ಚ್‌ 13: ಉದ್ಯಾನ ನಗರಿ ಬೆಂಗಳೂರು ಜನರ ಜೀವನಾಡಿ ನಮ್ಮ ಮೆಟ್ರೋ. ಪ್ರತಿದಿನ ಸುಮಾರು 8 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಸಂಚಾರವನ್ನು ನಡೆಸುತ್ತಾರೆ. 2017ರ ಬಳಿಕ ಮೊದಲ ಬಾರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎ೦ಆರ್‌ಸಿಎಲ್) ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದೆ. ಫೆಬ್ರವರಿ 9ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಬಿಎಂಆರ್‌ಸಿಎಲ್ ದರ ಏರಿಕೆಯನ್ನು ಸಮರ್ಥನೆ ಮಾಡಿಕೊಂಡಿದೆ.

ದರ ಏರಿಕೆಯ ಬಳಿಕ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದುಬರುತ್ತಿದೆ. ಬಿಎಂಆರ್‌ಸಿಎಲ್ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದ್ದರೂ ಸಹ ಪ್ರಯಾಣಿಕರು ಬಿಎಂಟಿಸಿ ಬಸ್, ಖಾಸಗಿ ವಾಹನಗಳ ಮೊರೆ ಹೋಗಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ.

Namma Metro Fare Hike PC Mohan 7 Questions For BMRCL

ವೆಚ್ಚಗಳು ಅಧಿಕವಾಗುತ್ತಿರುವ ಕಾರಣ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಬಿಎಂಆರ್‌ಸಿಎಲ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಬಿಎಂಆರ್‌ಸಿಎಲ್, ಕರ್ನಾಟಕ ಸರ್ಕಾರದ ವಿರುದ್ಧ ಜನರು ಆಕ್ರೋಶವನ್ನು ಹೊರಹಾಕಿದ್ದಾರೆ. ಟಿಕೆಟ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಬಿಎಂಆರ್‌ಸಿಎಲ್‌ಗೆ 7 ಪ್ರಶ್ನೆಗಳು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಿಗಮ ಟಿಕೆಟ್ ರಹಿತ ಆದಾಯ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

ಗುರುವಾರ ಟ್ವೀಟ್ ಮಾಡಿರುವ ಅವರು, ಬಿಎಂಆರ್‌ಸಿಎಲ್‌ ದರ ಏರಿಕೆಯನ್ನು ಸಮರ್ಥನೆ ಮಾಡಿಕೊಂಡಿದೆ. 2017ರ ಬಳಿಕ ನಿರ್ವಹಣೆ ಮತ್ತು ಆಡಳಿತ ವೆಚ್ಚಗಳು ಶೇ 366ರಷ್ಟು ಹೆಚ್ಚಾದ ಕಾರಣ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಹೇಳಿದೆ ಎಂದು ತಿಳಿಸಿದ್ದಾರೆ. ಬಿಎಂಆರ್‌ಸಿಎಲ್‌ ಮುಂದೆ 7 ಪ್ರಶ್ನೆಗಳನ್ನು ಇಟ್ಟಿದ್ದಾರೆ.

1. ಶೇ 366ರಷ್ಟು ವೆಚ್ಚಗಳು ಹೇಗೆ ಅಧಿಕವಾಗಿವೆ ಎಂದು ಬಿಎಂಆರ್‌ಸಿಎಲ್ ವಿವರಣೆ ನೀಡಲಿದೆಯೇ?
2. ನಮ್ಮ ಮೆಟ್ರೋದ ಆದಾಯ ಹೆಚ್ಚಳವಾಗಿದೆಯೇ? ಅಥವ ಮೆಟ್ರೋ ನಷ್ಟದಲ್ಲಿಯೇ?
3. ವೆಚ್ಚವನ್ನು ಕಡಿತಗೊಳಿಸಲು ಬಿಎಂಆರ್‌ಸಿಎಲ್ ಕೈಗೊಂಡ ಕ್ರಮಗಳು ಏನು?
4. ಟಿಕೆಟ್ ದರ ಏರಿಕೆ ಹಿಂದಿರುವ ಪ್ರಮುಖವಾದ ಅಂಶಗಳೇನು?
5. ಇತರ ನಗರಗಳಿಗೆ ಹೋಲಿಕೆ ಮಾಡಿದರೆ ದರ ಏರಿಕೆ ಹೇಗಿದೆ?
6. ದರ ಏರಿಕೆ ಕುರಿತು ವಿಶ್ಲೇಷಣಾ ವರದಿಯನ್ನು ಬಿಡುಗಡೆ ಮಾಡುತ್ತೀರಾ?
7. ಬಿಎಂಆರ್‌ಸಿಎಲ್ ತನ್ನ ಆರ್ಥಿಕ ವೆಚ್ಚದ ಅಂಕಿ ಅಂಶ ಬಿಡುಗಡೆ ಮಾಡಲಿದೆಯೇ? ಎಂದು ಸಂಸದರು ಪ್ರಶ್ನೆ ಮಾಡಿದ್ದಾರೆ.

ಮೆಟ್ರೋ ಪ್ರಯಾಣ ದರವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದ್ದರು. ಬಿಎಂಆರ್‌ಸಿಎಲ್ ಗರಿಷ್ಠ ಬೆಲೆ ಏರಿಕೆಯನ್ನು ಶೇ 100 ರಿಂದ 71ಕ್ಕೆ ಇಳಿಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿತು. ಆದರೆ ಇದು ಯಾವ ಮಾದರಿ ದರ ಏಳಿಕೆ? ಎಂದು ಇನ್ನೂ ಸಹ ಜನರಿಗೆ ಅರ್ಥವಾಗಿಲ್ಲ. ಜನರು ಮೆಟ್ರೋ ಬಿಟ್ಟು ಖಾಸಗಿ ವಾಹನ, ಬಿಎಂಟಿಸಿ ಬಸ್ ಬಳಕೆ ಮಾಡುತ್ತಿದ್ದಾರೆ.

ಅಂಕಿ ಸಂಖ್ಯೆಗಳ ಮಾಹಿತಿಯಂತೆ ಜನವರಿಯಲ್ಲಿ ನಮ್ಮ ಮೆಟ್ರೋದಲ್ಲಿ 2,49,14,736 ಜನರು ಸಂಚಾರವನ್ನು ನಡೆಸಿದ್ದಾರೆ. ಆದರೆ ದರ ಏರಿಕೆ ಬಳಿಕ ಫೆಬ್ರವರಿ ತಿಂಗಳಿನಲ್ಲಿ ಸಂಚಾರ ನಡೆಸಿದ ಪ್ರಯಾಣಿಕರ ಸಂಖ್ಯೆ 2,09,90,894. ಪ್ರತಿದಿನ ಸುಮಾರು 1 ಲಕ್ಷ ಮೆಟ್ರೋ ಪ್ರಯಾಣಿಕರು ಕಡಿಮೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

Take a Poll

ಅಧಿಕಾರಿಗಳು ನಮ್ಮ ಮೆಟ್ರೋದಲ್ಲಿ ಪ್ರತಿ ದಿನ 8.5 ಲಕ್ಷದಿಂದ 9 ಲಕ್ಷದ ತನಕ ಜನರು ಸಂಚಾರ ಮಾಡುತ್ತಿದ್ದರು. ಈಗ 7.5 ಲಕ್ಷದಿಂದ 8 ಲಕ್ಷದ ತನಕ ಜನರು ಪ್ರತಿದಿನ ಸಂಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ವಿವಿಧ ಖಾಸಗಿ ಸಮೀಕ್ಷೆಗಳು ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಬೆಂಗಳೂರಿನಲ್ಲಿ ಖಾಸಗಿ ವಾಹನ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಮಾಲಿನ್ಯ ಹೆಚ್ಚಾಗಿದೆ ಎಂದು ವಿಶ್ಲೇಷಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+