Namma Metro: ನಗರದ ವಾಯು ಮಾಲಿನ್ಯ ಹೆಚ್ಚಳಕ್ಕೆ ಮೆಟ್ರೋ ದರ ಏರಿಕೆ ಕಾರಣ! ಹೇಗೆ? ಇಂದಿನ AQI ಎಷ್ಟಿದೆ
ಬೆಂಗಳೂರು, ಮಾರ್ಚ್ 06: ಬೆಂಗಳೂರಿನಲ್ಲಿ ಅತ್ಯುತ್ತಮ ಸಾರಿಗೆ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ ಸಾರಿಗೆ ಬಳಕೆಯಲ್ಲಿ ಜನರ ನಿರಾಸಕ್ತಿ ಮುಂದುವರೆದಿದೆ. ಮೆಟ್ರೋ ಪ್ರಯಾಣದ ದರ ಏರಿಕೆ ಕಾರಣದಿಂದ ಜನರು ಪರಿಸರಕ್ಕೆ ಪೂರಕವಾದ ಮೆಟ್ರೋ ಬದಲಿಗೆ ಖಾಸಗಿ ವಾಹನಗಳನ್ನು ಬಳಕೆ ಮಾಡುವುದು ಹೆಚ್ಚಾಗಿದೆ. ಬಿಎಂಟಿಸಿ ಬಸ್ ಬಳಕೆಯು ಕೊಂಚ ಏರಿಕೆ ಆಗಿದೆ. ಈ ಕಾರಣದಿಂದ ರಾಜಧಾನಿಯಲ್ಲಿ ಫೆಬ್ರವರಿ 10ರ ನಂತರ ನಿರಂತರವಾಗಿ ವಾಯು ಗುಣಮಟ್ಟದಲ್ಲಿ ತೀವ್ರತರದ ಬದಲಾವಣೆ ಆಗಿದೆ. ನಗರ ವಾಯು ಮಾಲಿನ್ಯವಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಳೆದ ತಿಂಗಳು ಫೆಬ್ರವರಿ 9 ರಂದು ಮೆಟ್ರೋ ಪ್ರಯಾಣ ದರವನ್ನು ಶೇಕಡಾ 50ರಷ್ಟು ಹಾಗೂ , 30 ಕಿ.ಮೀ.ಗೂ ದೂರದ ಪ್ರಯಾಣಕ್ಕೆ ಗರಿಷ್ಠ ದರ 60 ರಿಂದ 90 ರೂಪಾಯಿಗೆ ಹೆಚ್ಚಿಸಿತು. ಇದರೊಂದಿಗೆ ರಿಯಾಯಿತಿ ದರ ಸಿಗುತ್ತದೆ ಎಂದು ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶಾಕ್ ನೀಡಿತು. ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಗತ್ಯವಿರುವ ಕನಿಷ್ಠ ಬ್ಯಾಲೆನ್ಸ್ ಅನ್ನು 50 ರೂ.ನಿಂದ 90 ರೂಪಾಯಿಗೆ ಪರಿಷ್ಕರಿಸಿ ಆದೇಶಿಸಿತು.

ಈ ಮೆಟ್ರೋ ಟಿಕೆಟ್ ದರ ಏರಿಕೆಗೆ ಜನರಿಂದ ವ್ಯಾಪಕ ಆಕ್ರೋಶ ಕೇಳಿ ಬಂತು. ದೈನಂದಿನ ಪ್ರಯಾಣಿಕರಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಮೆಟ್ರೋ ಬಹಿಷ್ಕರಿಸಲು ನಿರ್ಧರಿಸಿದೆ. ಪರಿಣಾಮ ಖಾಸಗಿ ವಾಹನಗಳು, ಟ್ಯಾಕ್ಸಿ, ಆಟೋಗಳ ಬಳಕೆ ಹೆಚ್ಚಾಯಿತು. ಇದು ಪರಿಸರದಲ್ಲಿ ವಾಯು ಗುಣಮಟ್ಟ ಮಲೀನಕ್ಕೆ ಕಾರಣವಾಗಿದೆ ಎಂದು 'ದಿ ಫೆಡರಲ್' ವರದಿ ಮಾಡಿದೆ.
ನಮ್ಮ ಮೆಟ್ರೋ ದರ ಅವೈಜ್ಞಾನಿಕವಾಗಿ ಅತೀ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಆಕ್ರೋಶ ಕೇಳಿ ಬಂತು. ಬಳಿಕ ಸ್ಟೇಜ್ ಬೈ ಸ್ಟೇಜ್ ಮರ್ಜ ಮಾಡಿ, ಕೊಂಚ ಅಂದರೆ ಶೇಕಡಾ 10 ರಷ್ಟು ಕಡಿಮೆ ಮಾಡಿತು. ಇದು ಕೆಲವು ಮಾರ್ಗಗಳಲಿಗೆ ಮಾತ್ರ ಅನ್ವಯಿಸಿದ್ದು, ಬಹುತೇಕ ಮಾರ್ಗಗಳಲ್ಲಿ ದರ ಏರಿಕೆ ಯಥಾಸ್ಥಿತಿಯಲ್ಲಿದೆ.

ಮೆಟ್ರೋ ಪ್ರಯಾಣಿಕ್ಕಿಂತ ಖಾಸಗಿ ವಾಹನಗಳ ಪ್ರಯಾಣ ಅಗ್ಗ ಎಂದು ಲೆಕ್ಕಾಚಾರ ಮಾಡಿ ಮೆಟ್ರೋ ಕಡೆಗಣಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಎಲ್ಲ ವಿಧದ ಖಾಸಗಿ ವಾಹನಗಳ ಬಳಕೆ ಹೆಚ್ಚಾಗಿದೆ. ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದೆ.
ನಗರದಲ್ಲಿ ಹದಗೆಡುತ್ತಿದೆ ವಾಯು ಗುಣಮಟ್ಟ, ವಿವರ
ಮೆಟ್ರೋ ಬಿಟ್ಟು ಕಾರು, ಬಸ್, ಬೈಕ್, ಟ್ಯಾಕ್ಸಿ ಆಟೋ ಏರುತ್ತಿದ್ದಾರೆ. ಇದರಿಂದ ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕ ಸಂಖ್ಯೆ ಶೇ. 10.5 ರಷ್ಟು ಕುಸಿತ ಕಂಡಿದೆ. ಇತ್ತ ನಗರದಲ್ಲಿ ವಾಯು ಮಾಲಿನ್ಯಗೊಂಡಿದ್ದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ದೃಢಪಡಿಸಿದೆ.
ನಗರ ಸಾರಿಗೆ ವಲಯದಿಂದ ಶೇ. 40 ರಿಂದ 51 ರಷ್ಟು ಮಾಲಿನ್ಯ, ಧೂಳು ಶೇ. 17ರಿಂದ 51 ರಷ್ಟು ಧೂಳು ಉಂಟಾಗುತ್ತದೆ. ಮೆಟ್ರೋ ದರ ಏರಿಕೆ ಬಳಿಕ (ಫೆ. 10ರ ನಂತರ) ಇದರ ಪ್ರಮಾಣ ಗಮನಾರ್ಹವಾಗಿ ಏರಿಕೆ ಆಗಿದೆ. ಒಂದು ಪ್ರದೇಶದ ವಿವರ ನೋಡುವುದಾದರೆ ಜಯನಗರ 5 ನೇ ಬ್ಲಾಕ್ ವ್ಯಾಪ್ತಿಯಲ್ಲಿ ಗರಿಷ್ಠ 43ರಿಂದ 54 ಮೈಕ್ರೋ ಗ್ರಾಂ ಕ್ಯೂಬಿಕ್ ಮಾಲಿನ್ಯ ಅಂಶ ದಾಖಲಾಗುತ್ತಿತ್ತು. ಅದು ಫೆಬ್ರವರಿ 10ರ ನಂತರ ಪ್ರತಿ ಘನ ಮೀಟರ್‌ಗೆ 112-114 ಮೈಕ್ರೋಗ್ರಾಂಗೆ ಏರಿಕೆ ಆಗಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಗುರುವಾರದ AQI ಮಟ್ಟ, ಕಳಪೆ ಎಲ್ಲಿ
ಬೆಂಗಳೂರಿನಲ್ಲಿ ಇಂದು ಕಸ್ತೂರಿ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಕಳಪೆ ಆಗಿದೆ. ಇಲ್ಲಿ 203 AQI ಮಟ್ಟ ದಾಖಲಾಗಿದೆ. ಪೀಣ್ಯದ ಶಿವಪುರದಲ್ಲಿ 96 AQI ಮಟ್ಟ ಇದ್ದು, ಇದು ಸಮಾಧಾನಕರ ಎನ್ನಲಾಗಿದೆ. ಜಿಗಣಿಯಲ್ಲಿ ಗಾಳಿ ಮಟ್ಟ ಮಧ್ಯಮ ಮಟ್ಟದಲ್ಲಿದೆ. ಇಲ್ಲಿ 145 AQI ದಾಖಲಾಗಿದೆ.
ಉಳಿದಂತೆ ನಗರ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ 100 AQI, ಬಾಪೂಜಿ ನಗರ 109 AQI, ಹೆಬ್ಬಾಳ ವ್ಯಾಪ್ತಿಯಲ್ಲಿ 108 AQI, ಜಯನಗರ 5ನೇ ಬ್ಲಾಕ್ 102 AQI, ಬಿಟಿಎಂ ಬಡಾವಣೆ 102 AQI, ಸಿಲ್ಕ್ ಬೋರ್ಡ್ ವ್ಯಾಪ್ತಿಯಲ್ಲಿ 122 AQI ದಾಖಲಾಗಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ? ಇಲ್ಲಿದೆ ಏಪ್ರಿಲ್ 13ರ ದರಪಟ್ಟಿ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ











Click it and Unblock the Notifications