Namma Metro Fare Hike: ನಮ್ಮ ಮೆಟ್ರೋ ದರ ಏರಿಕೆ ಹಿಂದೆ ರಾಜ್ಯ ಸರ್ಕಾರದ ಕೈವಾಡ: ಪಿಸಿ ಮೋಹನ್ ಆರೋಪ
Namma Metro Fare Hike: ರಾಜ್ಯ ರಾಜಧಾನಿ ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಹಾಗೂ ಸಮಯ ಉಳಿತಾಮ ಮಾಡಲು ಮೆಟ್ರೋವನ್ನೇ ಅವಲಂಬನೆ ಮಾಡಿದ್ದಾರೆ. ಆದರೆ, ಇದೀಗ ಬಿಎಂಆರ್‌ಸಿಎಲ್ ಪ್ರಯಾಣ ದರ ಏರಿಕೆ ಮಾಡಲು ನಿರ್ಧರಿಸಿದ್ದು, ಇದರ ವಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ಈ ಬಗ್ಗೆ ಪಿ.ಸಿ.ಮೋಹನ್ ಟ್ವೀಟ್‌ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣ ದರಗಳಲ್ಲಿ ಆಗಿರುವ ತೀವ್ರ ಏರಿಕೆ ಅನಿವಾರ್ಯವಾದುದಲ್ಲ. ಕರ್ನಾಟಕ ಸರ್ಕಾರ ಕೈಗೊಂಡಿರುವ ಉದ್ದೇಶಪೂರ್ವಕ ಹಣಕಾಸು ನಿರ್ಧಾರಗಳ ಪರಿಣಾಮವಾಗಿ ಈ ದರ ಹೆಚ್ಚಳದ ನಿರ್ಧಾರ ಮಾಡಲಾಗುದೆ ಎಂದು ದರ ನಿಗದಿ ಸಮಿತಿ (FFC) ವರದಿಯೇ ಸ್ಪಷ್ಟಪಡಿಸಿದೆ ಎಂದು ಪಿ.ಸಿ.ಮೋಹನ್ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸ್ವಯಂಚಾಲಿತ ದರ ಪರಿಷ್ಕರಣೆ: ಎಫ್‌ಎಫ್‌ಸಿ ವರದಿ ಸತ್ಯವನ್ನು ಬಹಿರಂಗಪಡಿಸಿದೆ. ರಾಜ್ಯದ ಮೇಲಿನ ಹಣಕಾಸು ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಹಾಗೂ ಹಣಕಾಸು ಇಲಾಖೆಗಳು ಮೆಟ್ರೋ ದರ ಹೆಚ್ಚಳಕ್ಕೆ ಒತ್ತಾಯಿಸಿದ್ದವು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಚ್ಟೇ ಅಲ್ಲದೆ, ಪ್ರತಿವರ್ಷ ಸ್ವಯಂಚಾಲಿತವಾಗಿ ದರ ಪರಿಷ್ಕರಣೆ ಮಾಡುವ ಪ್ರಸ್ತಾವವನ್ನೂ ಸರ್ಕಾರ ಮುಂದಿಟ್ಟಿತ್ತು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಬಿಎಂಆರ್‌ಸಿಎಲ್ ಸಂಸ್ಥೆಯು ದರ ನಿಗದಿ ಕಮಿಟಿಯನ್ನು ಶೀಘ್ರವಾಗಿ ರಚಿಸುವಂತೆ ಈ ಇಲಾಖೆಗಳು ಸೂಚನೆ ನೀಡಿದ್ದವು ಎಂಬುದನ್ನೂ ವರದಿ ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದು ತಿಳಿಸಿದ್ದಾರೆ.
"ನವೆಂಬರ್ 2023ರಲ್ಲಿ ಬಿಎಂಆರ್‌ಸಿಎಲ್ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯಕ್ಕೆ ಅಧಿಕೃತವಾಗಿ ಪತ್ರ ಬರೆದು ತಿಳಿಸಿತ್ತು. ಮೆಟ್ರೋ ದರಗಳನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಸರ್ಕಾರದಿಂದ ಫೇರ್ ಫಿಕ್ಸೇಷನ್ ಕಮಿಟಿ ರಚನೆಗೆ ಆಗುತ್ತಿರುವ ವಿಳಂಬವನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಳಂಬ ಮುಂದುವರೆದರೆ, ಬಿಎಂಆರ್‌ಸಿಎಲ್‌ಗೆ ಮುಂದಿನ ಅನುದಾನ ಬಿಡುಗಡೆಗಳನ್ನು ತಡೆಹಿಡಿಯುವ ಸಾಧ್ಯತೆಯಿದೆ," ಎಂದು ಹೇಳಿತ್ತು.
ರಾಜ್ಯ ಸರ್ಕಾರದಿಂದ ಒತ್ತಡ: ಇದು ವಿರೋಧ ಪಕ್ಷಗಳ ಆರೋಪವಲ್ಲ. ರಾಜ್ಯ ಸರ್ಕಾರವೇ ದರ ಹೆಚ್ಚಳಕ್ಕೆ ಒತ್ತಡ ಹೇರುತ್ತಿತ್ತು ಎಂಬುದನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ನೀಡಿರುವ ಅಧಿಕೃತ ಲಿಖಿತ ಸಂವಹನವಾಗಿದೆ. ಇದಕ್ಕಿಂತಲೂ ಗಮನಾರ್ಹವಾದುದು ಎಫ್‌ಎಫ್‌ಸಿ ವರದಿಯನ್ನು ಸರ್ಕಾರ ಹೇಗೆ ನಿರ್ವಹಿಸಿತು ಎಂಬುದು. ಮೊದಲು ಮೆಟ್ರೋ ದರಗಳನ್ನು ಹೆಚ್ಚಿಸಲಾಯಿತು. ಆದರೆ, ಆ ದರ ಹೆಚ್ಚಳಕ್ಕೆ ಆಧಾರವಾಗಿದ್ದ ಎಫ್‌ಎಫ್‌ಸಿ ವರದಿಯನ್ನು ಸುಮಾರು 7 ತಿಂಗಳ ಬಳಿಕ ಬಹಿರಂಗಗೊಳಿಸಲಾಯಿತು ಎಂದು ಹೇಳಿದರು.
ಬಿಜೆಪಿ ಕರ್ನಾಟಕ ಹೈಕೋರ್ಟ್ ಅನ್ನು ಸಂಪರ್ಕಿಸಿದ ನಂತರವೇ, ವರದಿಯನ್ನು ಸಾರ್ವಜನಿಕಗೊಳಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಅಲ್ಲಿಯವರೆಗೆ ಮೆಟ್ರೋ ಪ್ರಯಾಣಿಕರಿಗೆ ಈ ವಿಚಾರವನ್ನು ತಿಳಿದೆ ಮುಚ್ಚಿಹಾಕಿತ್ತು. ಹಿಂದಿನ ಕರ್ನಾಟಕ ಸರ್ಕಾರಗಳು ಬಿಎಂಆರ್‌ಸಿಎಲ್‌ಗೆ "ಶಾಡೋ ಕ್ಯಾಶ್ ಸಪೋರ್ಟ್" ಎಂಬ ರೀತಿಯಲ್ಲಿ ಹಣಕಾಸು ಬೆಂಬಲ ನೀಡುತ್ತಿದ್ದು, ಕಾರ್ಯಾಚರಣಾ ನಷ್ಟಗಳನ್ನು ಭರಿಸುವುದು, ಬಡ್ಡಿರಹಿತ ಹಣವನ್ನು ಒದಗಿಸುವುದು ಹಾಗೂ ಕೇಂದ್ರ ಸರ್ಕಾರ ಮತ್ತು ದೇಶೀಯ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳ ಮರುಪಾವತಿಗೆ ಸಹಾಯ ಮಾಡುತ್ತಿದ್ದವು. ಈ ರೀತಿಯ ಆರ್ಥಿಕ ಭದ್ರತೆ ಇದ್ದುದರಿಂದ ಮೆಟ್ರೋ ಪ್ರಯಾಣ ದರಗಳು ಸ್ಥಿರವಾಗಿಯೇ ಮುಂದುವರಿಯುತ್ತಿದ್ದವು ಎಂದು ಹೇಳಿದರು.
ರಾಜ್ಯ ಸರ್ಕಾರವು "ಶಾಡೋ ಕ್ಯಾಶ್ ಸಪೋರ್ಟ್" ನೀಡುವುದನ್ನು ನಿಲ್ಲಿಸಿದ ನಂತರ 71% ರವರೆಗೆ ಮೆಟ್ರೋ ಪ್ರಯಾಣ ದರ ಏರಿಕೆಯಾಯಿತು. ಹೀಗೆ ರಾಜಕೀಯ ಅಥವಾ ಸಾರ್ವಜನಿಕ ಮೇಲ್ವಿಚಾರಣೆಯಿಲ್ಲದೆ ಪ್ರತಿವರ್ಷ ಗರಿಷ್ಠ 5% ವರೆಗೆ ಸ್ವಯಂಚಾಲಿತ ದರ ಏರಿಕೆ ಮಾಡುವ ವ್ಯವಸ್ಥೆಯನ್ನೂ ಅಳವಡಿಕೆ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮೇಲೆ ಹೊಣೆ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಅಧಿಕೃತವಾಗಿ ಮನವಿ ಸಲ್ಲಿಸಿದಾಗ ಮಾತ್ರ ಕೇಂದ್ರ ಸರ್ಕಾರ ದರ ನಿಗದಿ ಸಮಿತಿ ರಚಿಸುತ್ತದೆ ಎಂಬುದನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 2024ರಲ್ಲಿ ನಮ್ಮ ಮೆಟ್ರೋ ಹಂತ-2 ಯೋಜನೆಗಾಗಿ ಬಿಎಂಆರ್‌ಸಿಎಲ್ ₹9,919 ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿತ್ತು. ಆದರೆ, ಕರ್ನಾಟಕ ಬಜೆಟ್ 2025ರಲ್ಲಿ ಈ ಯೋಜನೆಗೆ ಸಂಬಂಧಿಸಿದ ಯಾವುದೇ ಘೋಷಣೆಗಳು ಆಗಿಲ್ಲ. ಇದಕ್ಕೆ ವಿರುದ್ಧವಾಗಿ, ಸುರಂಗ ಯೋಜನೆಗಾಗಿ ₹19,000 ಕೋಟಿ ಸಾಲಕ್ಕೆ ಇದೇ ಸರ್ಕಾರ ಬೇಡಿಕೆ ಇಟ್ಟಿದೆ ಎಂದು ಆರೋಪ ಮಾಡಿದ್ದಾರೆ.
ದರ ಏರಿಕೆ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ: ಮೆಟ್ರೋ ದರ ಏರಿಕೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಬಿಎಂಆರ್‌ಸಿಎಲ್ ಮಂಡಳಿಯಲ್ಲಿ ಒಟ್ಟು 10 ಸದಸ್ಯರಿದ್ದು, ಅವರಲ್ಲಿ 5 ಮಂದಿ ರಾಜ್ಯ ಸರ್ಕಾರದಿಂದ ಹಾಗೂ 5 ಮಂದಿ ಕೇಂದ್ರ ಸರ್ಕಾರದಿಂದ ನೇಮಕವಾಗಿದ್ದಾರೆ. ಆದರೆ, ಕೇಂದ್ರದಿಂದ ನೇಮಕವಾದ ನಾನ್ ಎಕ್ಸಿಕ್ಯೂಟಿವ್ ಅಧ್ಯಕ್ಷರಿಗೆ ಮತದಾನದ ಹಕ್ಕಿಲ್ಲ. ಆದ್ದರಿಂದ ಮಂಡಳಿಯಲ್ಲಿ ಪರಿಣಾಮಕಾರಿ ಬಹುಮತ ರಾಜ್ಯ ಸರ್ಕಾರದ ಕೈಯಲಿದೆ.
ರಾಜ್ಯ ಸರ್ಕಾರ ದರ ಏರಿಕೆಯನ್ನು ವಿರೋಧಿಸಬಹುದಾಗಿತ್ತು. ಆದರೆ, ಅದರ ಬದಲು ರಾಜ್ಯ ಸರ್ಕಾರವೇ ದರ ನಿಗದಿ ಕಮಿಟಿ ರಚನೆಗೆ ಒತ್ತಾಯಿಸಿ, ಬಳಿಕ ಅದರ ಶಿಫಾರಸುಗಳನ್ನು ಅಂಗೀಕರಿಸಿದೆ. ಇದರಿಂದ ದರ ಏರಿಕೆಯ ಹಿಂದೆ ರಾಜ್ಯ ಸರ್ಕಾರದ ನಿರ್ಧಾರಗಳೇ ಪ್ರಮುಖ ಕಾರಣ ಎಂಬುದು ಸ್ಪಷ್ಟವಾಗುತ್ತದೆ.
ಮತ್ತೊಂದು ಅಸಹಜ ಸತ್ಯವೂ ಇದೆ. "ಶಕ್ತಿ" ಉಚಿತ ಗ್ಯಾರಂಟಿ ಯೋಜನೆಯ ಆರ್ಥಿಕ ಹೊರೆಯನ್ನು ಪರೋಕ್ಷವಾಗಿ ಮೆಟ್ರೋ ಪ್ರಯಾಣಿಕರ ಮೇಲೆ ಹಾಕಲಾಗಿದೆ ಎನ್ನುವ ಅನುಮಾನಗಳು ಮೂಡುತ್ತಿವೆ. ಸಾರ್ವಜನಿಕ ಸಾರಿಗೆಯನ್ನು ರಾಜ್ಯ ಬಜೆಟ್ ಮೂಲಕ ಸ್ಪಷ್ಟವಾಗಿ ಮತ್ತು ಪಾರದರ್ಶಕವಾಗಿ ಹಣಕಾಸು ನೆರವು ನೀಡಿ ಬೆಂಬಲಿಸುವ ಬದಲು, ಮೆಟ್ರೋ ದರಗಳನ್ನು ಹೆಚ್ಚಿಸುವ ಮೂಲಕ ಜನಪ್ರಿಯ ಯೋಜನೆಗೆ ಪರೋಕ್ಷವಾಗಿ ಕ್ರಾಸ್-ಸಬ್ಸಿಡಿ ಮಾಡಿರುವಂತಾಗಿದೆ. ಈ ನಡುವೆ, ಕೇಂದ್ರ ಸರ್ಕಾರವು ದೇಶದಲ್ಲೇ ಇತರ ಯಾವುದೇ ನಗರಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮೆಟ್ರೋ ಯೋಜನೆಗೆ ನಿರಂತರವಾಗಿ ಹಣಕಾಸು ನೆರವು ನೀಡುತ್ತಿದೆ ಎಂದು ಹೇಳಿದರು.
— P C Mohan (@PCMohanMP) February 8, 2026
ಯಾವ ವರ್ಷ ಎಷ್ಟು ನೆರವು?
* ₹3,400 crore (2019-20)
* ₹1,800 crore (2020-21)
* ₹3,600 crore (2021-22)
* ₹4,000 crore (2022-23)
* ₹3,600 crore (2023-24)
* ₹1,717.62 crore (2024-25)
* ₹2,000+ crore (2025-26)
ಕೇಂದ್ರ ಸರ್ಕಾರವೇ ದರ ಏರಿಕೆ "ಹೇರಿದೆ" ಎಂದು ಹೇಳುವುದು ತಾರ್ಕಿಕವಾಗಿ ಸರಿಯಲ್ಲ. ಏಕೆಂದರೆ, ಒಂದೆಡೆ ಕೇಂದ್ರ ಸರ್ಕಾರವೇ ಅತ್ಯಂತ ಹೆಚ್ಚು ಹಾಗೂ ನಿರಂತರವಾಗಿ ಹಣಕಾಸು ನೆರವು ನೀಡುತ್ತಿದೆ. ಆದ್ದರಿಂದ ದರ ಏರಿಕೆಯ ಹೊಣೆ ಕೇಂದ್ರದ ಮೇಲೇ ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ











Click it and Unblock the Notifications