ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ; ಬಿಡಿಎ ಫ್ಲಾಟ್‌ಗಳಿಗೆ ಡಿಮಾಂಡ್!

ಬೆಂಗಳೂರು, ಏಪ್ರಿಲ್ 24; ನಮ್ಮ ಮೆಟ್ರೋ ಉದ್ಯಾನ ನಗರಿ ಬೆಂಗಳೂರು ನಗರದ ಜನರ ಜೀವನಾಡಿಯಾಗಿ ಬದಲಾಗುತ್ತಿದೆ. ಬಿಎಂಆರ್‌ಸಿಎಲ್ ಮೆಟ್ರೋ ಯೋಜನೆಯನ್ನು ವಿಸ್ತರಣೆ ಮಾಡುತ್ತಿದೆ. ಇದರಿಂದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಲಾಭವಾಗುತ್ತಿದೆ. 2 ಬಿಎಚ್‌ಕೆ ಫ್ಲಾಟ್‌ಗಳಿಗೆ ಸಖತ್ ಡಿಮಾಂಡ್ ಬಂದಿದೆ.

ಬಿಎಂಆರ್‌ಸಿಎಲ್ ಮೈಸೂರು ರಸ್ತೆಯ ತನಕ ಇದ್ದ ನೇರಳೆ ಮಾರ್ಗವನ್ನು ಕೆಂಗೇರಿ ತನಕ ವಿಸ್ತರಣೆ ಮಾಡಿದೆ. ಈಗಾಗಲೇ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ಈ ಮಾರ್ಗ ಕೊಮ್ಮಘಟ್ಟ ತನಕ ಸಾಗಲಿದ್ದು, ಅದರ ಕಾರ್ಯವೂ ನಡೆಯುತ್ತಿದೆ. ಇದರಿಂದಾಗಿ ಬಿಡಿಎಗೆ ಸಹಾಯಕವಾಗಿದೆ.

Namma Metro Extension Demand For BDA Flats At Kommaghatta

ಕೊಮ್ಮಘಟ್ಟ ಸುತ್ತಮುತ್ತಲೂ ಬಿಡಿಎ ನಿರ್ಮಾಣ ಮಾಡಿರುವ 2 ಬಿಎಚ್‌ಕೆ ಫ್ಲಾಟ್‌ಗಳಿಗೆ ಬೇಡಿಕೆ ಬಂದಿದೆ. ಕೆಲವೇ ದಿನಗಳಲ್ಲಿ ಮೆಟ್ರೋ ನಿಲ್ದಾಣ ಪೂರ್ಣಗೊಳ್ಳಲಿದೆ. ಅಷ್ಟರಲ್ಲಿ ಬಾಕಿ ಇರುವ ಫ್ಲಾಟ್‌ಗಳು ಸಹ ಮಾರಾಟವಾಗಲಿದೆ ಎಂದು ಬಿಡಿಎ ಅಂದಾಜಿಸಿದೆ. ನಗರದಲ್ಲಿ ಮನೆ ಹುಡುಕುವವರು ಹತ್ತಿರದ ಮೆಟ್ರೋ ನಿಲ್ದಾಣ ಯಾವುದು? ಎಂದು ಈಗ ಪರಿಶೀಲಿಸುತ್ತಿದ್ದಾರೆ.

ಎಷ್ಟು ಫ್ಲಾಟ್‌ಗಳು ಸೇಲ್?; ಬಿಡಿಎ ಕೊಮ್ಮಘಟ್ಟ ಫೇಸ್‌-1 ಮತ್ತು 2ರಲ್ಲಿ 536 ಫ್ಲಾಟ್‌ಗಳನ್ನು ನಿರ್ಮಾಣ ಮಾಡಿತ್ತು. ಫೇಸ್‌-1 ಫ್ಲಾಟ್‌ ದರ 25 ಲಕ್ಷ ಮತ್ತು ಫೇಸ್‌-2 ದರ 32 ಲಕ್ಷ ನಿಗದಿ ಮಾಡಲಾಗಿತ್ತು. 5 ಅಂತಸ್ತುಗಳಿಗಿಂತ ಮೇಲೆ ಫ್ಲಾಟ್‌ ಖರೀದಿ ಮಾಡುವವರು ಶೇ 0.5ರಷ್ಟು ಹೆಚ್ಚು ಪಾವತಿ ಮಾಡಬೇಕಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಡಿಎ ನಿರ್ಮಾಣ ಮಾಡಿರುವ ಈ ಫ್ಲಾಟ್‌ಗಳಿಂದ ಕೆಂಗೇರಿ ಮೆಟ್ರೋ ನಿಲ್ದಾಣ 2.2 ಮತ್ತು ಚಲ್ಲಘಟ್ಟ ನಿಲ್ದಾಣ 1.5 ಕಿ. ಮೀ. ದೂರದಲ್ಲಿದೆ. ಮೂರು ತಿಂಗಳಿನಲ್ಲಿ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುವ ನಿರೀಕ್ಷೆಇದೆ. ಮೈಸೂರು ರಸ್ತೆ-ಕೆಂಗೇರಿ ನಡುವಿನ 7.35 ಕಿ. ಮೀ. ಮಾರ್ಗ 2021ರ ಆಗಸ್ಟ್‌ನಲ್ಲಿ ಸಂಚಾರಕ್ಕೆ ಮುಕ್ತವಾಗಿದೆ.

Namma Metro Extension Demand For BDA Flats At Kommaghatta

ಸರಿಯಾದ ಸಾರಿಗೆ ಸಂಪರ್ಕವಿಲ್ಲದ ಕಾರಣ ಮೊದಲು ಫ್ಲಾಟ್‌ಗಳು ಖಾಲಿ ಇದ್ದವು. ನಮ್ಮ ಮೆಟ್ರೋ ಸಂಚಾರದ ಬಳಿಕ ಫ್ಲಾಟ್‌ಗಳಿಗೆ ಡಿಮಾಂಡ್ ಬಂದಿದೆ. ಬಿಡಿಎ ಅಧಿಕಾರಿಗಳ ಮಾಹಿತಿ ಪ್ರಕಾರ 2021ರಲ್ಲಿ ನೇರಳೆ ವಿಸ್ತರಿತ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾದ ಬಳಿಕ 536ರಲ್ಲಿ 427 ಫ್ಲಾಟ್‌ಗಳು ಮಾರಾಟವಾಗಿವೆ.

ಪ್ರತಿದಿನ ಫ್ಲಾಟ್‌ಗಳ ಬಗ್ಗೆ ಜನರು ವಿಚಾರಣೆ ನಡೆಸುತ್ತಿದ್ದಾರೆ. ಬಾಕಿ ಉಳಿದಿರುವ 109 ಫ್ಲಾಟ್‌ಗಳನ್ನು ನಮ್ಮ ಮೆಟ್ರೋ ರೈಲುಗಳು ಚಲ್ಲಘಟ್ಟಕ್ಕೆ ಆರಂಭವಾಗುವ ಮುಂಚೆಯೇ ಮಾರಾಟ ಮಾಡುವ ನಿರೀಕ್ಷೆಯಲ್ಲಿ ಬಿಡಿಎ ಅಧಿಕಾರಿಗಳು ಇದ್ದಾರೆ. ಸರಿಯಾದ ರಸ್ತೆಗಳಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಬಿಡಿಎ ಮೈಸೂರು ರಸ್ತೆಯ ಪಂಚಮುಖ ಗಣೇಶ ದೇವಾಲಯದಿಂದ ವಸತಿ ಯೋಜನೆ ತನಕ 2 ಕಿ. ಮೀ. ರಸ್ತೆಯನ್ನು ನಿರ್ಮಾಣ ಮಾಡಿದೆ.

ಬಿಡಿಎ ಕೆಂಗೇರಿಯಿಂದ ವಸತಿ ಯೋಜನೆ ತನಕ ಇನ್ನೂ ಎರಡು ರಸ್ತೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. 2017ರಲ್ಲಿಯೇ ಬಿಡಿಎ ಉಳಿದ ವಸತಿ ಯೋಜನೆಗಳ ಜೊತೆಗೆ ಕೊಮ್ಮಘಟ್ಟ ಫೇಸ್‌-1 ಮತ್ತು 2ರ ಫ್ಲಾಟ್ ಮಾರಾಟಕ್ಕೆ ಅರ್ಜಿಗಳನ್ನು ಕರೆದಿತ್ತು. ಆದರೆ ಉಳಿದ ಯೋಜನೆಗಳ ಫ್ಲಾಟ್‌ ಮಾರಾಟವಾದರೂ ಕೊಮ್ಮಘಟ್ಟ ವಸತಿ ಯೋಜನೆಗೆ ಬೇಡಿಕೆ ಬಂದಿರಲಿಲ್ಲ. ಆದರೆ ಈಗ ನಮ್ಮ ಮೆಟ್ರೋ ಸಂಚಾರ ಆರಂಭವಾಗುತ್ತಿದ್ದಂತೆಯೇ ಫ್ಲಾಟ್‌ಗಳಿಗೆ ಡಿಮಾಂಡ್ ಬಂದಿದೆ.

ನಮ್ಮ ಮೆಟ್ರೋ 2023ರಲ್ಲಿ ಬೆಂಗಳೂರು ನಗರದಲ್ಲಿ ಮೂರು ಮಾರ್ಗಗಳಲ್ಲಿ ರೈಲು ಸೇವೆ ಆರಂಭಿಸುವ ಗುರಿ ಹೊಂದಿದೆ. ನೇರಳೆ ಮಾರ್ಗದ ವೈಟ್‌ಫೀಲ್ಡ್‌-ಕೆ. ಆರ್.. ಪುರ ಮಾರ್ಗವನ್ನು ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ. ಬೊಮ್ಮಸಂದ್ರ-ಆರ್. ವಿ. ರಸ್ತೆ. ಹಳದಿ ಮಾರ್ಗ ಮತ್ತು ಹಸಿರು ಮಾರ್ಗದ ಮಂಜುನಾಥ ನಗರ, ಜಿಂದಾಲ್ ಮತ್ತು ಬಿಐಇಸಿ ವಿಸ್ತರಿತ ಮಾರ್ಗವು ಈ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+