Namma Metro: ಎಲೆಕ್ಟ್ರಾನಿಕ್ ಸಿಟಿ ಮೆಟ್ರೋಗೆ ಕಾಯುತ್ತಿದ್ದ ಜನರಿಗೆ ಆಘಾತ! ಜೂನ್ ತಿಂಗಳ ತನಕ ಓಡಾಟ ಇಲ್ಲ?
ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಇವತ್ತು ಓಪನ್ ಆಗುತ್ತೆ, ನಾಳೆ ಓಪನ್ ಆಗುತ್ತೆ ಅಂತಾ ಕಳೆದ 5 ವರ್ಷಗಳಿಂದ ನಮ್ಮ ಪ್ರಜೆಗಳು ಕಾಯುತ್ತಿದ್ದಾರೆ. ಆದರೆ ನಿಮಗೇ ಗೊತ್ತಲ್ವಾ, 'ಸರ್ಕಾರದ ಕೆಲಸ ದೇವರ ಕೆಲಸ' ಇದೇ ಕಾರಣಕ್ಕೆ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗದ ಕೆಲಸ ಕೂಡ ತುಂಬಾ ನಿಧಾನವಾಗಿ, ದೇವರ ಕೆಲಸ ಎಂಬ ಕಾರಣಕ್ಕೆ ತಡ ಮಾಡುತ್ತಿದ್ದಾರೆ ಅಂತಾ ಜನರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಹೀಗಿದ್ದಾಗಲೇ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋಗೆ ಕಾಯುತ್ತಿರುವ ಜನರಿಗೆ ಆಘಾತ ಎದುರಾಗಿದ್ದು, ಜೂನ್ ತಿಂಗಳ ತನಕ ಓಡಾಟ ಇಲ್ಲ?
ಇಡೀ ಬೆಂಗಳೂರಿನಲ್ಲಿ ಯಾವ ಪ್ರದೇಶಕ್ಕೆ ಮೊಟ್ಟ ಮೊದಲು, 'ನಮ್ಮ ಮೆಟ್ರೋ'ದ ಸೇವೆ ಅತ್ಯಗತ್ಯವಾಗಿ ಇತ್ತು? ಅಂತಾ ಪ್ರಶ್ನೆ ಕೇಳಿದರೆ, ಅದಕ್ಕೆ ಉತ್ತರ ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಅಂತಾ ಕಣ್ಣು ಮುಚ್ಚಿಕೊಂಡು ಹೇಳಬಹುದು. ಯಾಕಂದ್ರೆ ಬೆಂಗಳೂರಿಗೆ ಐಟಿ ತವರು ಎಂಬ ಕೀರ್ತಿ ಪತಾಕೆ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಟ್ರಾಫಿಕ್ ನರಕದ ಬಗ್ಗೆ ಇಡೀ ಇಂಡಿಯಾಗೆ ಗೊತ್ತಿದೆ!

ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಟ್ರಾಫಿಕ್ ನರಕ!
ಹೌದು, ಬೆಂಗಳೂರು ನಗರದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ ಇರುವ ನಮ್ಮ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ನರಕದಲ್ಲಿ ಸಿಲುಕಿ ನರಳುತ್ತಿದೆ. ಇದು ಇವತ್ತು ಅಥವಾ ನಿನ್ನೆ ಕಥೆಯಲ್ಲ ಸುಮಾರು 25 ವರ್ಷಗಳಿಂದ ಕೂಡ ಇದೇ ರೀತಿ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಜನರು ಪ್ರಯಾಣ ಮಾಡಲು ನರಳುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಕಳೆದ 5 ವರ್ಷಗಳಿಂದ ಮೆಟ್ರೋ ರೈಲು ಇವತ್ತು ಓಡಾಡುತ್ತೆ, ನಾಳೆ ಓಡಾಡುತ್ತೆ ಅಂತಾ ಕನಸುಗಳನ್ನ ಕಟ್ಟಿಕೊಂಡು ಕಾಯುತ್ತಿದ್ದ ಜನರಿಗೆ ಈಗ ಮತ್ತೆ ಆಘಾತ ಎದುರಾಗಿದೆ!
ಅಂದಹಾಗೆ, ಆರ್‌ವಿ ರಸ್ತೆ TO ಬೊಮ್ಮಸಂದ್ರದ ಮಾರ್ಗದಲ್ಲಿ ಓಟಾಟ ನಡೆಸಲಿರುವ ನಮ್ಮ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಆಗುವುದು ಅನುಮಾನ ಆಗುತ್ತಿದೆ. ಎಲ್ಲ ಅಂದುಕೊಂಡ ರೀತಿ ನಡೆದಿದ್ದರೆ 2020ರ ಸಮಯದಲ್ಲೇ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ 'ನಮ್ಮ ಮೆಟ್ರೋ' ಓಡಾಟ ನಡೆಸಲು ಆರಂಭಿಸಬೇಕಿತ್ತು.
ಆದರೆ ಆಗಿದ್ದೆಲ್ಲವೂ ಉಲ್ಟಾ, ಹೀಗಾಗಿ 'ನಮ್ಮ ಮೆಟ್ರೋ'ದ ಓಡಾಟಕ್ಕೆ 'ಕೊರೊನಾ' ಕಾಟ ಶುರುವಾಗಿ ಉದ್ಘಾಟನೆ ಮುಂದೂಡಿಕೆ ಆಗುತ್ತ ಬಂತು. ಹೀಗಿದ್ದಾಗ 2025ರ ಜನವರಿ ತಿಂಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ 'ನಮ್ಮ ಮೆಟ್ರೋ' ಓಡಾಟ ಗ್ಯಾರಂಟಿ ಗುರೂ ಎನ್ನಲಾಗಿತ್ತು. ಆದರೆ ಮತ್ತೆ ಪ್ರಯಾಣಿಕರಿಗೆ ಆಘಾತ ನೀಡುವ ಸುದ್ದಿ ಸಿಕ್ಕಿದೆ!
ಐಯ್ಯಯ್ಯೋ ಏನ್ ಗುರೂ ಇದು ಗೋಳು?
ನಿಮಗೆಲ್ಲಾ ಗೊತ್ತಿರುವಂತೆ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಓಡಾಡುವ 'ನಮ್ಮ ಮೆಟ್ರೋ' ರೈಲುಗಳ ಒಳಗೆ ಡ್ರೈವರ್ ಇರೋದಿಲ್ಲ. ಡೈವರ್ ಲೆಸ್ ಮೆಟ್ರೋ ಓಡಾಟ ನಡೆಸಲು ಇದೇ ಮಾರ್ಗ ಸಾಕ್ಷಿ ಆಗುತ್ತಿದೆ. ಹೀಗಿದ್ದಾಗ ಹಲವು ತಾಂತ್ರಿಕ ಸಮಸ್ಯೆಗಳು ಕಾಡುತ್ತಿದ್ದು, ಇನ್ನೂ ಸರಿಯಾದ ಪ್ರಮಾಣದಲ್ಲಿ ರೈಲು ಬೋಗಿಗಳು ಎಲೆಕ್ಟ್ರಾನಿಕ್ ಸಿಟಿ ಮಾರ್ಗಕ್ಕೆ ಬಂದಿಲ್ಲವಂತೆ.
ಇದರ ಜೊತೆಯಲ್ಲೇ ಮತ್ತಷ್ಟು ಕೆಲಸ ಬಾಕಿ ಇದೆ ಎಂದು ಹೇಳಲಾಗುತ್ತಿದ್ದು, 2025ರ ಜೂನ್ ತಿಂಗಳ ತನಕವೂ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ 'ನಮ್ಮ ಮೆಟ್ರೋ' ಓಡಾಟ ಅನುಮಾನ ಅಂತಾ ಹೇಳಲಾಗುತ್ತಿದೆ. ಇದು ಲಕ್ಷಾಂತರ ಪ್ರಯಾಣಿಕರಿಗೆ ಇದೀಗ ಸಿಟ್ಟು ತರಿಸಿದ್ದು, ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಜನ ಭಾರಿ ಬೇಸರ ಹೊರ ಹಾಕುತ್ತಿದ್ದಾರೆ.












Click it and Unblock the Notifications