Namma Metro Yellow Line: ಜೂನ್ 7ರಿಂದ ಡ್ರೈವರ್‌ಲೆಸ್ ರೈಲಿನ ಪರೀಕ್ಷೆ, ಮಾಹಿತಿ
ಬೆಂಗಳೂರು, ಮೇ 30: ಬೆಂಗಳೂರು ಮೆಟ್ರೋ ರೈಲು ನಿಗಮ ನಿರ್ವಹಿಸುವ ರೈಲು ಮಾರ್ಗಗಳಲ್ಲಿ 'ಹಳದಿ ಮಾರ್ಗ'ದತ್ತ ಪ್ರಯಾಣಿಕರ ಕಣ್ಣು ನೆಟ್ಟಿದೆ. ಏಕೆಂದರೆ ಇಲ್ಲಿ ಚಾಲಕ ರಹಿತ ಮೊದಲ ರೈಲುಗಳ ಓಡಾಟಕ್ಕೆ ಸಿದ್ಧತೆಗಳು ನಡೆದಿವೆ. ಅಪ್ಡೇಟ್ ಮಾಹಿತಿಯ ಪ್ರಕಾರ, ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ಚೀನಾದ ಪ್ರೊಟೋ ಟೈಪ್ ರೈಲುಗಳನ್ನು ಸಂಯೋಜಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಚಾಲಕ ರಹಿತ ರೈಲಿಗೆ ವಿವಿಧ ಪರೀಕ್ಷೆ ಆರಂಭಿಸಿದೆ. ಇತ್ತೀಚೆಗೆ ಈ ಹಳದಿ ಮಾರ್ಗಕ್ಕೆ ವಯಾಡಕ್ಟ್ ಮೂಲಕ ವಿದ್ಯುದ್ದೀಕರಣ ಮಾಡಲಾಗಿತ್ತು. ಇದೀಗ ಜೂನ್ 7ರಿಂದ ಹಳಿಗೆ ಇಳಿದಿರುವ ಚಾಲಕ ರಹಿತ ಮೆಟ್ರೋ ರೈಲುಗಳಿಗೆ ಸಿಗ್ನಲಿಂಗ್ ವ್ಯವಸ್ಥೆ ಸಂಯೋಜಿಸುವ ಕಾರ್ಯ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು TNIE ವರದಿ ಆಗಿದೆ.

ಬಿಎಂಆರ್‌ಸಿಎಲ್ ಸಿಗ್ನಲ್ ಆಧಾರಿತ ಮೆಟ್ರೋ ರೈಲು ಕಾರ್ಯಾಚರಣೆಗೆ ಸರ್ವ ಪರೀಕ್ಷೆಗಳು ನಡೆಸುತ್ತಿದ್ದಾರೆ. ಹಂತ ಹಂತವಾಗಿ ವಿದ್ಯುದ್ದೀಕರಣ, ಸಿಗ್ನಲಿಂಗ್ ಸಂಯೋಜನೆ ಕೆಲಸ ನಡೆಸುತ್ತಿದ್ದಾರೆ. ಎಲ್ಲ ಕಾರ್ಯ ಮುಗಿದು ಆರ್‌ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಇದೇ ಡಿಸೆಂಬರ್ ವೇಳೆಗೆ ವಾಣಿಜ್ಯ ಕಾರ್ಯಾಚರಣೆ ಆರಂಭದ ನಿರೀಕ್ಷೆ ಇದೆ.
20 ನಿಮಿಷಗಳಿಗೆ ಒಂದು ರೈಲು ಸಂಚಾರ
ಹಳದಿ ಮಾರ್ಗದಲ್ಲಿ ಆರಂಭದಲ್ಲಿ ಪ್ರತಿ 20 ನಿಮಿಷಗಳಿಗೆ ಒಮ್ಮೆ ಚಾಲಕ ರಹಿತ ಓಡಿಸಲು ಯೋಚನೆ ಹೊಂದಿದೆ. ಈಗಾಗಲೇ 18.82 ಕಿಮೀ ಎತ್ತರದ ಮಾರ್ಗದಲ್ಲಿ ಬರುವ ಎಲ್ಲಾ 16 ನಿಲ್ದಾಣಗಳು, ಕಟ್ಟಡ ಇನ್ನಿತರ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಿದೆ.
ಚೀನಾದಿಂದ ಬರಬೇಕಾದ ಡ್ರೈವರ್‌ಲೆಸ್ ಮೆಟ್ರೋ ರೈಲುಗಳು ತಡವಾಗಿದ್ದರಿಂದ ಎಲ್ಲ ಪರೀಕ್ಷೆಗಳು, ವಾಣಿಜ್ಯ ಕಾರ್ಯಾಚರಣೆ ವಿಳಂಬವಾಯಿತು. ಸದ್ಯ ಫೆಬ್ರವರಿಗೆ ಬಂದ ಮೊದಲ ಸೆಟ್ ರೈಲುಗಳು ವಿವಿಧ ಪರೀಕ್ಷೆಗಳಿಗೆ ಒಳಗಾಗುತ್ತಿವೆ. ಸದ್ಯ ಅವುಗಳಿಗೆ ವಿದ್ಯುತ್ ಸಂಪರ್ಕ, ಸಿಗ್ನಲಿಂಗ್ ವ್ಯವಸ್ಥೆ ಸಂಯೋಜನೆ ಕಾರ್ಯ ಆರಂಭವಾಗಲಿದೆ.

ಚಾಲಕರಿಲ್ಲದೇ ಮೆಟ್ರೋ ಓಡಿಸಬಹುದು
ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರ ಮತ್ತು ಬೊಮ್ಮನಹಳ್ಳಿ ಮಧ್ಯೆ ವಿದ್ಯುತ್ ಹರಿಸಿದ ನಂತರ ಚಾಲಕ ರಹಿತ ರೈಲಿನ ಸರಳ ಪರೀಕ್ಷೆಗಳನ್ನು ಇತ್ತೀಚೆಗೆ ನಡೆಯಿತು. ಇದೇ ಮಾರ್ಗದಲ್ಲಿ ಪ್ರಮುಖ ಪರೀಕ್ಷೆಗಳು ನಡೆಯಬೇಕಿದೆ. ಈ ರೈಲು ಚಾಲಕ ರಹಿತವಾಗಿ ಓಡಿಸಬಹುದಾದರೂ, ಅರಂಭದಲ್ಲಿ ಚಾಲಕ ಸಹಿತವಾಗಿ ಓಡಿಸಲು BMRCL ಹೇಳಿತ್ತು.
ಹಳದಿ ಮಾರ್ಗದಲ್ಲಿ 750 ವೋಲ್ಟ್ ವಿದ್ಯುತ್ ಪೂರೈಸುವ ಮತ್ತು ರೈಲು ಕಾರ್ಯಕ್ಷಮತೆ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಸದ್ಯಕ್ಕೆ ನಿಧಾನಗತಿಯಲ್ಲಿ ರೈಲು ಓಡಿಸಲಾಗುತ್ತದೆ. ಶಿಫಾರಸಿನ ನಂತರ ಹಂತ ಹಂತವಾಗಿ ರೈಲಿಗೆ ವೇಗ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
2025ರ ಹೊತ್ತಿಗೆ 15 ಡ್ರೈವರ್‌ಲೆಸ್ ರೈಲು
ಸದ್ಯ ಒಂದು ಸೆಟ್ ರೈಲು ಬಂದಿದ್ದು, ಎರಡನೇ ಸೆಟ್ ರೈಲು ಏಪ್ರಿಲ್‌ಗೆ ಬರಬೇಕಿತ್ತು. ಎರಡನೇ ರೈಲು ಆಗಸ್ಟ್‌ನಲ್ಲಿ, ಸೆಪ್ಟಂಬರ್ ನಲ್ಲಿ ಮತ್ತೊಂದು ರೈಲು ಬರಲಿವೆ. ಡಿಸೆಂಬರ್ ವೇಳೆ ಮೂರು ರೈಲುಗಳು ಬೆಂಗಳೂರಿಗೆ ಆಗಮಿಸಲಿವೆ. ಡಿಸೆಂಬರ್ ಹೊತ್ತಿಗೆ ಹಳದಿ ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚಣೆ ಆರಂಭವಾಗಲಿದೆ. ಆ ಹೊತ್ತಿಗೆ ಐದು ರೈಲು ಕಾರ್ಯಾಚರಣೆಗೆ ಇಳಿಯಲಿದ್ದು, ಒಂದು ರೈಲು ಬ್ಯಾಕಪ್ ಆಗಿ ಇಟ್ಟುಕೊಳ್ಳಲಾಗುವುದು. ಬೆಂಗಳೂರಿಗೆ 2025ರ ವೇಳೆಗೆ 15 ಚಾಲಕ ರಹಿತ ಮೆಟ್ರೋ ರೈಲು ಆಗಮಿಸಲಿವೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.
ಸದ್ಯ ಬೆಂಗಳೂರಿಗೆ ಆಗಮಿಸಿರುವ ಡ್ರೈವರ್‌ಲೆಸ್ ರೈಲುಗಳಿಗೆ ಕ್ರಮವಾಗಿ ಹತ್ತಾರು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಚೀನಾದಿಂದ ಮೆಟ್ರೋ ಬೋಗಿ ನಿರ್ಮಿಸಿದ ಕಂಪನಿಯ ಅಧಿಕಾರಿಗಳು ಬೆಂಗಳೂರಿಗೆ ಬಂದಿದ್ದರು. ಎಲ್ಲವು ಅಂದುಕೊಂಡಂತಾದರೆ ದೀಪಾವಳಿ ಹೊತ್ತಿಗೆ ಬಿಎಂಆರ್‌ಸಿಎಲ್ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.
ಈ ಹಳದಿ ಮಾರ್ಗ ತೆರೆದರೆ ಐಟಿ ಕೇಂದ್ರವಾಗಿರುವ ಬೊಮ್ಮನಹಳ್ಳಿ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸೀಟಿ ಸೇರಿದಂತೆ ಈ ಭಾಗದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ, ಸಾರ್ವಜನಿಕರು ಸೇರಿದಂತೆ ಲಕ್ಷಾಂತರ ಜನರಿಗೆ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಸಿಕ್ಕಂತಾಗುತ್ತದೆ.
ವಿದ್ಯುದ್ದೀಕರಣ ಜೊತೆಗೆ ಸಿಗ್ನಲಿಂಗ್ ಜೋಡಣೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಡ್ರವೈರ್‌ಲೆಸ್ಟ್ ಮೆಟ್ರೋ ಗಳ ಪರೀಶಿಲನೆ ಮಾತ್ಚಾರ ಬಾಕಿ ಉಳಿಯುತ್ತದೆ. ಅದಾದ ಬಳಿಕ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ.












Click it and Unblock the Notifications