Namma Metro Yellow Line: ಹಳಿ ಮೇಲೆ ಬಂತು 'ಡ್ರೈವರ್‌ಲೆಸ್' ರೈಲು: 4 ತಿಂಗಳಲ್ಲಿ 37 ಪರೀಕ್ಷೆಗಳು, ಅಪ್ಡೇಟ್ ಮಾಹಿತಿ
ಬೆಂಗಳೂರು, ಮಾರ್ಚ್ 06: ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ಕುರಿತು BMRCL ಮಹತ್ವದ ಅಪ್ಡೇಟ್ ಕೊಟ್ಟಿದೆ. ಸುಮಾರು 37 ಮಾದರಿಯ ಪರೀಕ್ಷೆಗಳು ನಡೆದ ನಂತರ ನಾಲ್ಕು ತಿಂಗಳ ನಂತರ ಒಂದಷ್ಟು ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದೆ.
ಹೌದು, ಕಳೆದ ತಿಂಗಳು ಚೀನಾ ನಿರ್ಮಿತ ಪ್ರೋಟೋಟೈಪ್ ಮೆಟ್ರೋ ಬೋಗಿಗಳು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಓಡಲು ನಗರದ ಹೆಬ್ಬಗೋಡಿ ಮೆಟ್ರೋ ಡಿಪೋಗೆ ಬಂದಿಳಿದಿವೆ. ಈ ಕುರಿತು ರೈಲು ಬೋಗಿಗಳು ಹೇಗೆ ಕಾರ್ಯ ನಿರ್ವಹಣೆ ಮಾಡಲಿವೆ, ಬೋಗಿ ಮತ್ತು CBTC ವಿಶೇಷತೆಗಳ ಕುರಿತು ಬುಧವಾರ ನಮ್ಮ ಮೆಟ್ರೋ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರಾಯೋಗಿಕ ಮಾಹಿತಿ ನೀಡಿದರು.

4 ತಿಂಗಳು 37 ಮಾದರಿಯ ಪರೀಕ್ಷೆ
ಸುಮಾರು 37 ಮಾದರಿಯ ಪರೀಕ್ಷೆಗಳು ನಾಲ್ಕು ತಿಂಗಳ ನಂತರ. ತದನಂತರ 45 ಸಂಪರ್ಕ ಸಿಗ್ನಲಿಂಗ್ ವ್ಯವಸ್ಥೆ, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ವ್ಯವಸ್ಥೆ ಮತ್ತಿರರ ಸಿಸ್ಟಮ್ ಏಕೀಕರಣ ಪರೀಕ್ಷೆಗಳು ನಡೆಯಲಿವೆ.
ಹೊಸ ರೋಲಿಂಗ್ ಸ್ಟಾಕ್ ಆಗಿರುವುದರಿಂದ ಬಹು ಪರೀಕ್ಷೆಗಳನ್ನು ನಡೆಸಲಾಗಿದೆ. ಸ್ಟ್ಯಾಟಿಕ್ ಮತ್ತು ಪ್ರಾಥಮಿಕ ಪರೀಕ್ಷೆಗಾಗಿ ಪರೀಕ್ಷೆಗೆ ತೆರಳುವ ಮೊದಲು ಬೋಗಿಗಳನ್ನು ಜೋಡಿಸಲಾಗಿದೆ. ನಂತರ, ಅದರ ಮುಖ್ಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ತಿಳಿಸಿದರು.

RDSO ಮತ್ತು CMRS ಅನುಮತಿ
ಹಳದಿ ಮಾರ್ಗದಲ್ಲಿ ಈ ರೈಲುಗಳ ಕಾರ್ಯಾಚರಣೆಗೂ ಮೊದಲು ''ಶಾಸನಬದ್ಧ ಸುರಕ್ಷತಾ ಪರೀಕ್ಷೆಗಳು, ರಿಸರ್ಚ್ ಡಿಸೈನ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಮೂಲಕ ಆಸಿಲೇಷನ್ ಟ್ರಯಲ್ಸ್ ಮತ್ತು ಕಮಿಷನರ್ ಆಫ್ ಮೆಟ್ರೋ ರೈಲ್ ಸೇಫ್ಟಿ (CMRS) ಅವರಿಂದ ತಪಾಸಣೆಗೆ ಒಳಪಡಿಸಲಾಗಿದೆ.
RDSO ಮತ್ತು CMRS ನ ಶಿಫಾರಸುಗಳನ್ನು ಆಧರಿಸಿ, ವಾಣಿಜ್ಯ ಸೇವೆಗಾಗಿ ರೈಲುಗಳನ್ನು ಪರಿಚಯಿಸುವ ಮೊದಲು ಅನುಮತಿ ಮಂಡಳಿಯ ಅನುಮೋದನೆಯನ್ನು ಪಡೆಯಬೇಕಿರುತ್ತದೆದೆ.
ಈ ಅತ್ಯಾಧುನಿಕ ತಂತ್ರಜ್ಞಾನ ರೈಲುಗಳ ವಿಶೇಷತೆ
ಹಳದಿ ಮಾರ್ಗದಲ್ಲಿ ಸಂಚಾರ ಸಂಬಂಧ ಚೀನಾದಿಂದ ಬಂದ ಈ ಮೆಟ್ರೋ ರೈಲುಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಚಾಲಕ ರಹಿತ ರೈಲು ಕಾರ್ಯಾಚರಣೆ (UTO), ಕಾರ್ಯಾಚರಣೆಯ ನಿಯಂತ್ರಣ ಕೇಂದ್ರದಿಂದ ವರ್ಧಿತ ಮೇಲ್ವಿಚಾರಣೆ ಸಾಮರ್ಥ್ಯ (OCC), ಟ್ರಾಕ್ ಮಾನಿಟರಿಂಗ್ ಸಿಸ್ಟಮ್, ಹಾಟ್ ಆಕ್ಸಲ್ ಪತ್ತೆ ವ್ಯವಸ್ಥೆ, ಅಬಾಜ್ ಮತ್ತು ಡಿರೈಲ್ಮೆಂಟ್ ಡಿಟೆಕ್ಷನ್ ವ್ಯವಸ್ಥೆ ಹೊಂದಿವೆ.
ಈ ಪ್ರೊಟೋಟೈಪ್ ಮೆಟ್ರೋ ಬೋಗಿಗಳು ಮಾರ್ಗಗಳು, ಜಾಹೀರಾತುಗಳು, ಸೂಚನೆಗಳು, ಮಾಹಿತಿ ಇತ್ಯಾದಿಗಳನ್ನು ಪ್ರದರ್ಶಿಸಲು ಬಾಗಿಲುಗಳ ಮೇಲೆ ವಿದ್ಯುತ್ ಸಂಕೇತಗಳನ್ನು ಗುರುತಿಸಲಾಗಿದೆ.
ಕಮ್ಯುನಿಕೇಷನ್ ಬೇಸ್ ಟೈನ್ ಕಂಟ್ರೋಲ್ (CBTC) ಗಾಗಿ ಮಾದರಿ ರೈಲು, DTG ಸಿಗ್ನಲಿಂಗ್‌ನೊಂದಿಗೆ ಮತ್ತೊಂದು ಮೂಲ ಮಾದರಿಯ ರೈಲು ಚೀನಾದ CRRC ನಿಂದ ಸರಬರಾಜ ಆಗಲಿದೆ. ಉಳಿದ 34 ರೈಲುಗಳನ್ನು (14 CBTC & 20 DTG) ಭಾರತದಲ್ಲಿ ಪಶ್ಚಿಮ ಬಂಗಾಳದ ಟಿಟಾಗಢ್ ರೈಲ್ ಸಿಸ್ಟಮ್ಸ್ ಕಂಪನಿಯು ಒಪ್ಪಂದಂತೆ ನಮ್ಮ ಮೆಟ್ರೊಗೆ ಸರಬರಾಜು ಮಾಡಲಿದೆ ಎಂದು ಅಧಿಕಾರಿಗಳು ಹೇಳಿದರು.
ಸದ್ಯ ಇದೇ ಮೊದಲ ಬಾರಿಗೆ ಸಂವಹನ-ಆಧಾರಿತ ರೈಲು ನಿಯಂತ್ರಣ (CBTC) ವ್ಯವಸ್ಥೆ ಮೆಟ್ರೋ ಬೋಗಿಗಳನ್ನು ಹಳದಿ ಮಾರ್ಗಕ್ಕೆ ಪರಿಚಯಿಸಲಾಗುತ್ತಿದೆ. ಇದನ್ನೇ ನಾವು 'ಚಾಲಕರಹಿತ ತಂತ್ರಜ್ಞಾನ' ಎಂದು ಕರೆಯಲಾಗುತ್ತದೆ. ಇದು ಪ್ರಸ್ತುತ ಎರಡೂವರೆ ನಿಮಿಷದಿಂದ 90 ಸೆಕೆಂಡುಗಳಷ್ಟು ಹೆಡ್‌ವೇ ಕಡಿಮೆಯಾಗುತ್ತದೆ. ಸಿಗ್ನಲ್ ಬೇಸ್ ರೈಲಾಗಿದ್ದರೂ ಸಹ ಆರಂಭದಲ್ಲಿ ನಾವು ಲೊಕೊ ಪೈಲಟ್‌ಗಳ ಸಹಿತ ರೈಲು ಕಾರ್ಯಾಚರಣೆಗೆ ನಿರ್ಧರಿಸಿದ್ದೇವೆ ಎಂದು ಪ್ರಕಟಣೆಯಲ್ಲಿ BMRCL ಹೇಳಿದೆ.
16 ನಿಲ್ದಾಣದ ಮೆಟ್ರೋ 'ಹಳದಿ ಮಾರ್ಗ'
18.82 ಕಿಮೀ ಉದ್ದದಲ್ಲಿ ನಿರ್ಮಾಣಗೊಂಡಿರುವ ಈ ಮೆಟ್ರೋ ಮಾರ್ಗವು ಆರ್‌ವಿ ರಸ್ತೆ- ಬೊಮ್ಮಸಂದ್ರದೊಂದಿಗೆ ಸಂಪರ್ಕಿಸುತ್ತದೆ. ಇದು 16 ನಿಲ್ದಾಣಗಳನ್ನು ಹೊಂದಿರುವ ಸಂಪೂರ್ಣ ಎತ್ತರದ ಮೆಟ್ರೋ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ, ಇಂಪೀಸ್ ಫೌಂಡೇಷನ್-ಕೋಣಪ್ಪನ ಅಗ್ರಹಾರ, ಎಲೆಟ್ರಾನಿಕ್ ಸಿಟಿ, ಬಿರಟೆನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕುಡುಲು ಗೇಟ್, ಹೊಂಗಸಂದ್ರ, ಬೊಮ್ಮನ ಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿ.ಟಿ.ಟಿ. ಲೇಔಟ್, ಜಯದೇವ ಹಾಸ್ಪಿಟಲ್, ರಾಗಿ ಗುಡ್ಡ ಮತ್ತು ಆರ್.ವಿ ರಸ್ತೆ 16 ನಿಲ್ದಾಣಗಳು ಬರುತ್ತವೆ.
ಈ ಹಳದಿ ಮಾರ್ಗವು ಮೆಟ್ರೋದ ಹಸಿರು ಮಾರ್ಗ ಹಾಗೂ ಜಯದೇವ ಆಸ್ಪತ್ರೆಯ ಗುಲಾಬಿ ಮಾರ್ಗವನ್ನು ಸಂಪರ್ಕ ಕಲ್ಪಿಸುತ್ತದೆ.
ಜಯದೇವ ಮೆಟ್ರೋ ನಿಲ್ದಾಣವು ರೀಚ್-5ರ ಹಳದಿ ಮಾರ್ಗ (ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ) ಮತ್ತು ರೀಚ್-6ರ ಗುಲಾಬಿ (ಕಳೇನ ಅಗ್ರಹಾರದಿಂದ ನಾಗವಾರ) ಮಾರ್ಗಗಳಿಗೆ ನಿಲ್ದಾಣ ಬದಲಾವಣೆ ಆಗುತ್ತದೆ. ಎಲ್ಲೆಲ್ಲಿ ಮಾರ್ಗ ಸಂಪರ್ಕ ಏರ್ಪಡಲಿದೆ ಎಂಬ ಮಾಹಿತಿ ಇಲ್ಲಿದೆ.
* ಬನ್ನೇರುಘಟ್ಟ ರಸ್ತೆ ಕೆಳಸೇತುವೆ
* ನೆಲಮಟ್ಟದಲ್ಲಿ ಮಾರೇನಹಳ್ಳಿ ರಸ್ತೆ
* ರಾಗಿಗುಡ್ಡ - ಸೆಂಟ್ರಲ್ ಸಿಲ್ಕ್ ಬೋರ್ಡ್, ರಸ್ತೆ ಮೇಲ್ಸೇತುವೆ
* ಮೆಟ್ರೋ ಕಾನ್ಕೋರ್ಸ್ ಮಟ್ಟ
* ರೀಚ್-5 ಪ್ಲಾಟ್‌ಫಾರ್ಮ್ - ಹಳದಿ ಮಾರ್ಗ (ಆರ್‌ವಿ ರಸ್ತೆ-ಬೊಮ್ಮಸಂದ್ರ)
* ರೀಚ್-6 ಪ್ಲಾಟ್ಫಾರ್ಮ್- ಗುಲಾಬಿ ಮಾರ್ಗ (ಕಾಳೇನ ಅಗ್ರಹಾರ-ನಾಗವಾರ)
ಡ್ರೈವರ್‌ಲೆಸ್ ಮೆಟ್ರೋ: ಬೆಂಗಳೂರಿಗೆ 2ನೇ ಸ್ಥಾನ
ಮೆಟ್ರೊ ಈ ಹೊಸ ಮಾರ್ಗಗಳು ಬೆಂಗಳೂರಿನ ದೈನಂದಿನ ಓಡಾಟದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಅಲ್ಲದೇ ಐಟಿ ಕೇಂದ್ರಗಳ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಭವಿಷ್ಯದಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಅಲ್ಲದೇ ನಗರದಲ್ಲಿ ಮೆಟ್ರೋ ಸಂಪರ್ಕವನ್ನು ಹೆಚ್ಚಿಸಲಿದೆ. ದೇಶದಲ್ಲೇ ಚಾಲಕ ರಹಿತ ಮೆಟ್ರೋ ರೈಲು ಹೊಂದಿರುವ ನಗರಗಳಲ್ಲಿ ಬೆಂಗಳೂರು ಮೆಟ್ರೋಗೆ 2ನೇ ಸ್ಥಾನ ಲಭಿಸಿದೆ.
ನಮ್ಮ ಮೆಟ್ರೋಗೆ ಚೀನಾದಿಂದ ಆರು ಬೋಗಿಗಳ ಒಂದು ಸೆಟ್ ರೈಲು ಬೋಗಿಗಳು ಬಂದಿವೆ. ಚೀನಾ ಕಂಪನಿ ಹಾಗೂ BMRCL ಮಧ್ಯೆ ಒಟ್ಟು 216 ಮೆಟ್ರೋ ಬೋಗಿ ನೀಡಲು 2019ರಲ್ಲಿ ಒಪ್ಪಂದ ಆಗಿತ್ತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications