ನಮ್ಮ ಮೆಟ್ರೋ 175 ಕಿ.ಮೀ.ವರೆಗೆ ವಿಸ್ತರಣೆಯ ಗುರಿ: 2026ಕ್ಕೆ ನಗರಾದ್ಯಂತ ಸುಧಾರಿತ ಸಾರಿಗೆ
ಬೆಂಗಳೂರು, ನವೆಂಬರ್ 23: ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಕೈಗೆತ್ತಿಕೊಳ್ಳಲು ಸಜ್ಜಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಹಾಲಿ ಕೆಲವು ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿದೆ. 2026ರ ಹೊತ್ತಿಗೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲವನ್ನು ಬರೋಬ್ಬರಿ 175 ಕಿಲೋ ಮೀಟರ್‌ಗೆ ವಿಸ್ತರಣೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ವಿಸ್ತರಣೆ ಯೋಜನೆಯಿಂದ ಏನೆಲ್ಲ ಪ್ರಯೋಜನ, ಲಾಭವಾಗಲಿದೆ...?
ಮುಂದಿನ ಎರಡಡೇ ವರ್ಷದಲ್ಲಿ ಬೆಂಗಳೂರಿನ ಮೆಟ್ರೋ ಜಾಲದ ಪ್ರಮುಖ ವಿಸ್ತರಣೆ ಇದಾಗಿದೆ. ಹಾಲಿ 76 ಕಿಲೋ ಮೀಟರ್ ಜಾಲದಲ್ಲಿ ಮೆಟ್ರೋ ಸೇವೆ ಇದೆ. ಅದರ ಒಟ್ಟು ಉದ್ದ 2026ಕ್ಕೆ 175 ಕಿಮೀಗೆ ವಿಸ್ತರಣೆಗೊಳ್ಳಲಿದೆ. ಇದರಲ್ಲಿ ನೇರಳೆ ಮಾರ್ಗ ವಿಸ್ತರಣೆ, ನೀಲಿ ಮಾರ್ಗ, ಹಳದಿ ಮಾರ್ಗ, ಗುಲಾಬಿ ಮಾರ್ಗಗಳು ಒಳಗೊಳ್ಳಲಿವೆ ಎಂದು 'ಕನ್ಟ್ರಕ್ಷನ್ ವಲ್ಡ್ ಇನ್' ವರದಿ ಮಾಡಿದೆ.

ಬೆಂಗಳೂರಿನಾದ್ಯಂತ ಸುಧಾರಿತ ಸಾರಿಗೆ ಜಾಲ
ಒಟ್ಟಾರೆಯಾಗಿ ನಗರದ ಹೃದಯಭಾಗದಲ್ಲಿ ಸೇವೆ ನೀಡುತ್ತಿರುವ ಬೆಂಗಳೂರು ಮೆಟ್ರೋ ನಗರದ ಹೊರ ವಲಯದವರೆಗೂ ತನ್ನ ಕಬಂಧಬಾಹು ಚಾಚಲಿದೆ. ನಗರಾದ್ಯಂತ ಸಾರಿಗೆ ಸಂಪರ್ಕ ಸುಧಾರಣೆಗೆ BMRCL ಈ ಜಾಲ ವಿಸ್ತರಣೆ ಉಪಕ್ರಮ ಸಹಕಾರಿಯಾಗಲಿದೆ. ಟ್ರಾಫಿಕ್ ಸಮಸ್ಯೆಗೆ ಮೆಟ್ರೋ ಪ್ರಮುಖ ಕೊಡುಗೆ ನೀಡಲಿದೆ. ಒಂದು ತುದಿಯಿಂದ ಮತ್ತೊಂದು ತುದಿಗೆ ಪ್ರಯಾಣಿಕರು ಸರಾಗವಾಗಿ ಸಾಗಬಹುದಾಗಿದೆ.
ಮೆಟ್ರೋ ನೆಟ್‌ವರ್ಕ್ ಜಾಲದಲ್ಲಿ ಹಾಲಿ ಮಾರ್ಗ ವಿಸ್ತರಣೆ ಜೊತೆಗೆ ಹೊಸ ಮಾರ್ಗಗಳ ನಿರ್ಮಾಣವು ಇರಲಿದೆ. ಮುಂದಿನ ಕೆಲವೇ ವಾರಗಳಲ್ಲಿ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ತೆರೆದುಕೊಳ್ಳಲಿದೆ. ನೇರಳೆ ಮಾರ್ಗ ಮತ್ತು ಔಟರ್ ರಿಂಗ್ ರೋಡ್ (ORR), ಏರ್‌ಪೋರ್ಟ್ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗಗಳು ನಿರ್ಮಾಣಗೊಳ್ಳಿವೆ.
ವಿವಿಧ ಪ್ರದೇಶಗಳಿಗೆ ಸಾರಿಗೆ ಸೇತುವೆ
ಈ ಮಾರ್ಗಗಳು ನಗರದ ಪ್ರಮುಖ ಕೇಂದ್ರಗಳು, ವಾಣಿಜ್ಯ ಹಾಗೂ ಪ್ರಮುಖ ವಸತಿ ಪ್ರದೇಶಗಳಿಗೆ ಈ ಮೆಟ್ರೋ ಮಾರ್ಗಗಳು ಸಂಪರ್ಕ ಸೇತುವೆಯಾಗಲಿವೆ. ನಗರದಿಂದ ಹೊರ ವಲಯದ ಪ್ರದೇಶಗಳಿಗೆ ಮೆಟ್ರೋ ಮೂಲಕ ಹೋಗಿ ಬರಬಹುದಾಗಿದೆ. ಬೆಂಗಳೂರಿನ ಯಾವ ಭಾಗದಿಂದಲಾದರೂ ನೀವು ನಗರವನ್ನು ಮೆಟ್ರೋ ಸಾರಿಗೆಯಿಂದ ಪ್ರವೇಶಿಸಬಹುದಾಗಿದೆ.
ಮೆಟ್ರೋ ಜಾಲ ವಿಸ್ತರಣೆ ಆದಂತೆ ಮೆಟ್ರೋ ನಿಲ್ದಾಣಗಳ ಸಂಖ್ಯೆ ಹೆಚ್ಚುತ್ತವೆ. ಪ್ರಯಾಣಿಕರ ಸಂಖ್ಯೆ ದುಪಟ್ಟಾಗುತ್ತದೆ. ಆಗ ಈಗಿರುವ ಬಸ್, ಆಟೋ ಇನ್ನಿತರ ಸಾರಿಗೆ ಸೇವೆಗಳನ್ನು ವಿಸ್ತರಿಸಿ ಪ್ರಮಾಣಿಕರಿಗೆ ಅನುಕೂಲಕರ ವ್ಯವಸ್ಥೆ ರೂಪಿಸಲು ನಮ್ಮ ಮೆಟ್ರೋ ಪ್ಲಾನ್ ಮಾಡಿಕೊಂಡಿದೆ. ಆಗ ತಡೆರಹಿತ ಸಂಚಾರಕ್ಕೂ ಅನುಕೂಲವಾಗಲಿದೆ.
ಕೊನೆ ಮೈಲಿಗೂ ಸಂಪರ್ಕ ಸಾಧಿಸುವ ಗುರಿ
ಇದೆಲ್ಲವು ಅಂದುಕೊಂಡಂತೆ ಆಗಲು ಇನ್ನೂ ಎರಡು ವರ್ಷ ಕಾಯಬೇಕು. 2026ರಲ್ಲಿ ಪ್ರಯಾಣಿಕರು ದೂರದ ಗಮ್ಯಸ್ಥಾನಗಳನ್ನು ಯಾವ ಟ್ರಾಫಿಕ್ ಕಿರಿಕಿರಿ ಇಲ್ಲದೆ ತಲುಪಬಹುದಾಗಿದೆ. ನಮ್ಮ ಮೆಟ್ರೋ ಕೊನೆ ಮೈಲಿಗೂ ಸಂಪರ್ಕ ಸಾಧಿಸಲು ಒಂದಷ್ಟು ಯೋಜನೆ ರೂಪಿಸಿದೆ. ಸರ್ಕಾರದ ಅನುಮತಿ ಮೇರೆಗೆ ಮೂರನೇ ಹಂತದ ಕಾಮಗಾರಿಯಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣಕ್ಕೆ ಸಜ್ಜಾಗಿದೆ. ಹೀಗೆ ಜನರಿಗೆ ಅನುಕೂಲವಾಗುವಂತೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ.
ಬೆಂಗಳೂರು ನಮ್ಮ ಮೆಟ್ರೋದಿಂದ ವೇಗದ, ಸುರಕ್ಷಿತ ಸಾರಿಗೆ ಸಿಕ್ಕಂತಾಗುತ್ತದೆ. ಕೇವಲ ಟ್ರಾಫಿಕ್ ಸಮಸ್ಯೆಗೆ ಮಾತ್ರವಲ್ಲದೇ, ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೂ ತನ್ನದೇ ಆದ ಕೊಡುಗೆ ನೀಡಲಿದೆ. ಸುಧಾರಿತ ತಂತ್ರಜ್ಞಾನಗಳು ಮತ್ತು ಸುಸ್ಥಿರತೆ ಒತ್ತು ನೀಡುತ್ತದೆ. ಮೆಟ್ರೋದಿಂದ ಕೈಗಾರಿಕೆ, ವಾಣಿಜ್ಯ ವಲಯ, ಉದ್ಯೋಗ ವಲಯ, ಶೈಕ್ಷಣಿಕ ರಂಗಕ್ಕೆ ಸಹಾಯವಾಗುತ್ತದೆ.












Click it and Unblock the Notifications