ಎಂಜಿ ರಸ್ತೆಯಿಂದ ಮಾಗಡಿ ರಸ್ತೆ ತಲುಪಿತು ಮೆಟ್ರೋ

ಬೆಂಗಳೂರು, ಮಾ. 16 : ನಮ್ಮ ಮೆಟ್ರೋ ರೈಲು ಎಂ.ಜಿ.ರಸ್ತೆಯಿಂದ ಮಾಗಡಿ ರಸ್ತೆವರೆಗಿನ ಸುರಂಗ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾನುವಾರ ಕಬ್ಬನ್ ಪಾರ್ಕ್ ನಿಲ್ದಾಣದಿಂದ ಹೊರಟ ರೈಲು ಮಾಗಡಿ ರಸ್ತೆ ಪ್ರವೇಶ ದ್ವಾರವನ್ನು ತಲುಪಿತು. ಈ ಮಾರ್ಗದಲ್ಲಿನ ಫ್ಲೈ ಓವರ್ ಸಂಚಾರ ಮಾತ್ರ ಬಾಕಿ ಇದೆ.

ಭಾನುವಾರ ಬೆಳಗ್ಗೆ 11.30ರ ಸುಮಾರಿಗೆ ಎಂ.ಜಿ.ರಸ್ತೆಯ ಡಿಪೋದಿಂದ ಹೊರಟ ರೈಲು ಮಧ್ಯಾಹ್ನ 1 ಗಂಟೆಗೆ ಕಬ್ಬನ್ ಪಾರ್ಕ್ ನಿಲ್ದಾಣವನ್ನು ತಲುಪಿತು. ಅಲ್ಲಿಂದ ಪ್ರಾಯೋಗಿಕ ಸಂಚಾರ ಮುಂದುವರೆಸಿದ ರೈಲು ಸಂಜೆ 6.45ಕ್ಕೆ ಮಾಗಡಿ ರಸ್ತೆಯ ಪ್ರವೇಶ ದ್ವಾರವನ್ನು ತಲುಪಿತು. ['ನಮ್ಮ ಮೆಟ್ರೋ ಬೇಗ ಕಟ್ರೋಗೆ' 3 ವರ್ಷ]

namma metro

ಈ ಸುರಂಗ ಮಾರ್ಗದಲ್ಲಿ ಇನ್ನೂ ಹಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಕಾರಣ ಬ್ಯಾಟರಿ ಚಾಲಿತ ಲೋಕೊಮೋಟರ್‌ ಮೂಲಕ ಮೂರು ಬೋಗಿಗಳ ರೈಲನ್ನು ಎಳೆದುಕೊಂಡು ಹೋಗಿ ಪ್ರಾಯೋಗಿಕ ಸಂಚಾರ ನಡೆಸಲಾಯಿತು. [ಚಿತ್ರಗಳು : ಸುರಂಗ ಮಾರ್ಗದಲ್ಲಿ ಓಡಿದ ನಮ್ಮ ಮೆಟ್ರೋ]

ಬಿಎಂಆರ್‌ಸಿಎಲ್‌ನ ಸುಮಾರು 30 ಮಂದಿ ತಂತ್ರಜ್ಞರು ಹಳಿಯ ಕಾರ್ಯಕ್ಷಮತೆ ಮತ್ತು ದೋಷಗಳನ್ನು ಪರೀಕ್ಷಿಸುತ್ತಾ ಮುಂದೆ ಸಾಗಿದರು. ಇವರ ಹಿಂದೆಯೇ ಬ್ಯಾಟರಿ ಚಾಲಿತ ಲೋಕೊಮೋಟರ್ ಮೆಟ್ರೋ ರೈಲನ್ನು ಮಾಗಡಿ ರಸ್ತೆಗೆ ಎಳೆದುಕೊಂಡು ಹೋಯಿತು.

ಎಂ.ಜಿ. ರಸ್ತೆಯಿಂದ ಕಬ್ಬನ್‌ಪಾರ್ಕ್‌ ನಿಲ್ದಾಣದವರೆಗಿನ ನಮ್ಮ ಮೆಟ್ರೋ ಸಂಚಾರ ಗುರುವಾರ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಸದ್ಯ, ಎಂ.ಜಿ.ರಸ್ತೆ ಮಾಗಡಿ ರಸ್ತೆ ಸುರಂಗ ಮಾರ್ಗದ ಸಂಚಾರ ಯಶಸ್ವಿಯಾಗಿದೆ. ಇದೇ ರೈಲು ಇನ್ನು ಮುಂದೆ ಮಾಗಡಿ ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗಿನ 6.4 ಕಿ.ಮೀ ಉದ್ದದ ಫ್ಲೈ ಓವರ್‌ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+