Namma Metro Blue Line: ಈ ನಿಲ್ದಾಣಕ್ಕೆ 'ಬಾಗ್ಮನೆ ಟೆಕ್‌ಪಾರ್ಕ್' ಹೆಸರು, ₹40 ಕೋಟಿಗೆ ಒಪ್ಪಂದ
ಬೆಂಗಳೂರು, ಡಿಸೆಂಬರ್ 11: ಬೆಂಗಳೂರು ಮೆಟ್ರೋ ರೈಲು ನಿಗಮ (BMRLC) ಹಳದಿ ಮೆಟ್ರೋ ಮಾರ್ಗದಂತೆ ಇದೀಗ ನಿರ್ಮಾಣಗೊಳ್ಳುತ್ತಿರುವ 'ನೀಲಿ ಮಾರ್ಗ' ನಿಲ್ದಾಣವೊಂದಕ್ಕೆ 'ಬಾಗ್ಮನೆ ಟೆಕ್‌ಪಾರ್ಕ್' ಎಂದು ನಾಮಕರಣ ಮಾಡಲು ಮುಂದಾಗಿದೆ. ಈ ಕುರಿತು ಮಂಗಳವಾರ ಮುಂದಿನ ಎರಡು ದಶಕಗಳ ಅವಧಿಗೆ ನಮ್ಮ ಮೆಟ್ರೋ ಜೊತೆಗೆ ಕಂಪನಿಯು ಮಹತ್ವದ ಒಪ್ಪಂದ ಮಾಡಿಕೊಂಡಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಜೊತೆಗೆ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ನೀಡುವ ನಿಟ್ಟಿನಲ್ಲಿ BMRCL ಅಷ್ಟ ದಿಕ್ಕುಗಳಿಗೂ ನಮ್ಮ ಮೆಟ್ರೊ ಜಾಲ ವಿಸ್ತರಣೆ ಮಾಡುತ್ತಿದೆ. ಕಳೆದ ಒಂದು ದಿನದ ಹಿಂದಷ್ಟೇ ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಂಡಿತ್ತು.

ಬೊಮ್ಮಸಂದ್ರ ಮೆಟ್ರೋ ನಿಲ್ದಾಣಕ್ಕೆ ತಮ್ಮ ಹೆಸರಿಡುವಂತೆ ಒಟ್ಟು 65 ಕೋಟಿ ರೂ. ಮೊತ್ತದಲ್ಲಿ ತೈವಾನ್ ಮೂಲದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಕಂಪನಿ ಜೊತೆಗೆ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಎರಡು ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿರುವ 'ನೀಲಿ ಮಾರ್ಗದ' ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ ಟೆಕ್ ಪಾರ್ಕ್' ಎಂದು ಹೆಸರಿಡಲು 'ಬಾಗ್ಮನೆ ಡೆವಲಪರ್ಸ್' ಜೊತೆಗೆ ರೂ.40 ಒಪ್ಪಂದ ಮಾಡಿಕೊಳ್ಳಲಾಗಿದೆ. 10 ಕೋಟಿ ರೂ. ಹಣ ಮುಂಗಡ ನೀಡಲಾಗಿದೆ.
ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂ ವರೆಗೆ 2ಎ ಹಾಗೂ ಕೆಆರ್.ಪುರಂನಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವರೆಗೆ 2ಬಿ ಎಂದು ಎರಡು ಹಂತಗಳಲ್ಲಿ 'ನೀಲಿ ಮಾರ್ಗ' ನಿರ್ಮಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಇದರಲ್ಲಿ 2ಎ ಮಾರ್ಗದಲ್ಲಿ DRDO ಸ್ಪೋರ್ಟ್ಸ್ ಕಾಂಪ್ಸೆಕ್ಸ್ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ಈ ಒಪ್ಪಂದ ನಡೆದಿದೆ.
17 ಕಿಲೋ ಮೀಟರ್ ಇರುವ ಈ 2ಎ ಮಾರ್ಗದಲ್ಲಿ ದಲ್ಲಿ ಒಟ್ಟು 13 ಮೆಟ್ರೋ ನಿಲ್ದಾಣಗಳು ತಲೆ ಎತ್ತಲಿವೆ. ಅದರಲ್ಲಿ DRDO ಸ್ಪೋರ್ಟ್ಸ್ ಕಾಂಪ್ಸೆಕ್ಸ್ ಮೆಟ್ರೋ ನಿಲ್ದಾಣ ನಿರ್ಮಿಸಿದ ಬಳಿಕ ಮುಂದಿನ 20 ವರ್ಷಗಳ ವರೆಗೆ ಅದಕ್ಕೆ ಬಾಗ್ಮನೆ ಟೆಕ್‌ಪಾರ್ಕ್ ಎಂದು ಹೆಸರಿಡುವಂತೆ ಕಂಪನಿಯು ಒಪ್ಪಂದದಡಿ ಹಣ ನೀಡಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಂಗಳವಾರ ಅಧಿಕೃತ ಮಾಹಿತಿ ನೀಡಿದ್ದಾರೆ.
ಮೆಟ್ರೋ 'ನೀಲಿ ಮಾರ್ಗ'ದ ಮೊದಲ ಒಪ್ಪಂದ
ನೀಲಿ ಮಾರ್ಗದ ಈ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿವಾರಿಸುತ್ತಿದೆ. ಐಟಿ ಉದ್ಯೋಗಿಗಳು ಸೇರಿದಂತೆ ಪ್ರಯಾಣಿಕರಿಗೆ ಚಲನಶೀಲತೆಯ ಸ್ಥಿರತೆ, ಪರಿಣಾಮಕಾರಿ ಪರ್ಯಾಯ ಒದಗಿಸುತ್ತದೆ. ಮೆಟ್ರೋವು ಸಂಚಾರ ದಟ್ಟಣೆ ತಪ್ಪಿಸಿ ಉತ್ತಮ ಸಂಚಾರ ಸೇವೆ ನೀಡುತ್ತದೆ. ಇನ್ನೂ ನಿಲ್ದಾಣ ನಿರ್ಮಾಣಕ್ಕೆ ಒಪ್ಪಂದಂತೆ ಬಾಗ್ಮನೆ ಡೆವಲಪರ್ಸ್ ನವೀನ ಹಣಕಾಸು ಕಾರ್ಯ ವಿಧಾನ ಮೂಲಕ ಹಣ ಒದಗಿಸಲಿದೆ ಎಂದರು.
ಬೆಂಗಳೂರು ಮೆಟ್ರೋ ನೀಲಿ ಮಾರ್ಗದ ವಿಚಾರದಲ್ಲಿ ಇದು ಮೊದಲ ಒಪ್ಪಂದವಾಗಿದೆ. ಹಳದಿ ಮಾರ್ಗದಲ್ಲಿ ಈಗಾಗಲೇ ಮೂರು ಒಪ್ಪಂದಗಳು ನಡೆದಿವೆ. ಬಯೋಕಾನ್ ಸಂಸ್ಥೆ, ಇನ್ಫೋಸಿಸ್ ಹಾಗೂ ನೆನ್ನೆಯ ಡೆಲ್ಟಾ ಎಲೆಕ್ಟ್ರಾನಿಕ್ಸ್ ಜತೆಗಿನ ಒಪ್ಪಂದವಾಗಿದೆ.












Click it and Unblock the Notifications