Namma Metro 3rd Phase: 3ನೇ ಹಂತ ಯೋಜನೆ ಬಹುತೇಕ ಫೈನಲ್, ವಿಳಂಬ ಏಕೆ? ಅಪ್ಡೇಟ್ ಇಲ್ಲಿದೆ
ಬೆಂಗಳೂರು, ಆಗಸ್ಟ್ 12: ಬೆಂಗಳೂರು ನಮ್ಮ ಮೂರನೇ ಹಂತದ ಯೋಜನೆ (Namma Metro 3rd Phase Project)ಬಹುತೇಕ ಅಂತಿಮ ಘಟ್ಟ ತಲುಪುತ್ತಿದೆ. 2028ರಲ್ಲಿ ಆರಂಭವಾಗಬೇಕಿದ್ದ ಈ ಯೋಜನೆಯ ಪ್ರಾಥಮಿಕ ಕೆಲಸಗಳು ಇದೇ ವರ್ಷಾಂತಕ್ಕೆ ಶುರುವಾಗಲಿವೆ. ಕೇಂದ್ರ ಸಚಿವ ಸಂಪುಟ ಈಗಾಗಲೇ ಯೋಜನೆಗೆ ಅನುಮೋದನೆ ನೀಡಿದೆ. ಫೈನಲ್ ಒಪ್ಪಿಗೆ ಸಿಗುವುದು ಬಾಕಿ ಇದೆ.
ಬೆಂಗಳೂರು ಮೆಟ್ರೋ ಮೂರನೇ ಹಂತದ ಯೋಜನೆಯಡಿ ಮೂರು ಕಾರಿಡಾರ್‌ಗಳು ನಿರ್ಮಾಣವಾಗುತ್ತವೆ. ಇದರಲ್ಲಿ ಆರೆಂಜ್ ಲೈನ್ (Namma Metro Orange Line) ಎಂದು ಹೆಸರಿಟ್ಟ ಮಾರ್ಗದಲ್ಲಿ ಮೂರು ನಿಲ್ದಾಣ ನಿರ್ಮಾಣಕ್ಕೆ ಬೇಕಾದ ಜಾಗ ಸಿಗದೇ ವಿಳಂಬವಾಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ನಿಲ್ದಾಣಗಳಿಗೆ ಹೆಚ್ಚುವರಿ ಅಗತ್ಯ ಆಸ್ತಿಗಳನ್ನು ಸ್ವಾಧಿನಪಡಿಸಿಕೊಳ್ಳಬೇಕಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಮ್ಮ ಮೆಟ್ರೋ 3ನೇ ಹಂತದ ಯೋಜನೆಯಲ್ಲಿ ಜೆಪಿ ನಗರ 4ನೇ ಹಂತ- ಕೆಂಪಾಪುರ (32.15 ಕಿಮೀ) ಹಾಗೂ ಹೊಸಹಳ್ಳಿ- ಕಡಬಗೆರೆ (12.5 ಕಿಮೀ) ಹಾಗೂ ಹೊರ ವರ್ತುಲ ರಸ್ತೆ-ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮೂರು ಕಾರಿಡಾರ್ ನಿರ್ಮಾಣ ಮಾಡಲು ಯೋಜನೆಯಲ್ಲಿ ಉದ್ದೇಶಿಸಲಾಗಿದೆ.
ಯೋಜನೆಗಾಗಿ 770ಕ್ಕೂ ಹೆಚ್ಚು ಆಸ್ತಿ ಗುರುತು
ಕಾರಿಡಾರ್ ಒಂದರ ಮಾರ್ಗಕ್ಕಾಗಿ 1,29,743 ಚದರ ಮೀಟರ್‌ನಲ್ಲಿನ 770ಕ್ಕೂ ಹೆಚ್ಚು ಆಸ್ತಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಆದರೆ ಜೆಪಿ ನಗರ 5 ನೇ ಹಂತ, ಕಾಮಾಕ್ಯ ಬಸ್ ಡಿಪೋ ಮತ್ತು ಹೊಸಕೆರೆಹಳ್ಳಿ ಮೂರು ನಿಲ್ದಾಣಗಳಿಗೆ ಅಗತ್ಯ ಭೂಮಿ ಸಿಕ್ಕಿರಲಿಲ್ಲ. ಸದ್ಯ ಭೂಮಿ ಅಂತಿಮಗೊಳಿಸಲಾಗಿದೆ ಎಂದರು.
ಅಗತ್ಯ ಆಸ್ತಿಗಳ ಸ್ವಾಧೀನಕ್ಕಾಗಿ ಕೆಐಎಡಿಬಿಯು ಪ್ರಾಥಮಿಕ ಅಧಿಸೂಚನೆ ಹೊರಡಿಸಲಿದೆ ಎಂದು BMRCL ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ) ಎಂಎಸ್ ಚನ್ನಪ್ಪಗೌಡರ್ ತಿಳಿಸಿದ್ದಾರೆ ಎಂದು 'ಡಿಎಚ್' ವರದಿ ಮಾಡಿದೆ.

ಇನ್ನೂ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಗುರುತಿಸಿರುವ ಭೂಮಿಗಳಲ್ಲಿ (ಆಸ್ತಿ) ವಾಣಿಜ್ಯ, ಖಾಸಗಿ ಕಟ್ಟಡಗಳಾಗಿವೆ. ಇದಲ್ಲಿ ಯಾವುದೇ ಪಾರಂಪರಿಕ ಕಟ್ಟಡ ಗುರುತಿಸಿಲ್ಲ ಎಂದು ಅವರು ಸ್ಪಷ್ಟಡಿಸಿದರು. ಇನ್ನು ಅಗತ್ಯ ಭೂಗೆ ಪಡೆಯಲು ಬೇಕಾಗುವ ಖರ್ಚು ವೆಚ್ಚದ ಮಾಹಿತಿ ಕಲೆ ಹಾಕಲಾಗುತ್ತಿದೆ. ಲೆಕ್ಕ ಸಿಕ್ಕ ಬಳಿಕ ಡಿಪಿಆರ್‌ನಲ್ಲಿ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಬದಲಾವಣೆಗೆ ಆಗಬಹುದು. ಈ ಡಿಪಿಆರ್ ಕೇಂದ್ರ ಹಣಕಾಸು ಇಲಾಖೆ ಅಂತಿಮ ಅನುಮೋದನೆ ನೀಡಬೇಕಿದೆ.
ಯೋಜನೆಯಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸೇರ್ಪಡೆ
ಇನ್ನೂ ನಗರದ ಡೈರಿ ವೃತ್ತದಲ್ಲಿ ಮೇಲ್ಸೇತುವೆ ಮೇಲೆ ಯೋಜನೆ ಹಾದು ಹೋಗುವಂತೆ ಚಿಂತನೆ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಹೊಸ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸುವಂತೆ ತಿಳಿಸಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಯಾವ ರೀತಿ ಸಾಕಾರಗೊಳಿಸಬೇಕು ಎಂಬುದರತ್ತ ಗಮನ ಹರಿಸಲಾಗಿದೆ.
ನಮ್ಮ ಮೆಟ್ರೋ ಯೋಜನೆಯ 3ನೇ ಹಂತದಲ್ಲಿ 3A ಅಡಿಯಲ್ಲಿ ಮೆಟ್ರೋ ಜೊತೆಗೆ ಫ್ಲೈಓವರ್ ನಿರ್ಮಿಸುವ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದೆ. ಈ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣಕ್ಕೆ ಪ್ರತ್ಯೇಕ ಪ್ಲಾನ್ ಮಾಡಲಿರುವ ಬಿಎಂಆರ್‌ಸಿಎಲ್, ಅಷ್ಟರೊಳಗೆ ಕೇಂದ್ರದಿಂದ ಅನುಮೋದನೆ ಪಡೆದುಕೊಂಡು ಯೋಜನೆ ಆರಂಭಿಸುವ ಚಿಂತನೆಯಲ್ಲಿದೆ.
ಮತ್ತೊಂದೆಡೆ ಶುರುವಾಗಬೇಕಾದ ಈ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ರಾಜ್ಯ ಸರ್ಕಾರದ 'ಹೊಸ ಮೆಟ್ರೋ ಮಾರ್ಗಗಳಲ್ಲಿ ಡೆಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸುವಂತೆ ಸೂಚನೆ ನೀಡಿರುವುದು' ಸಹ ಸವಾಲಾಗಬಹುದು ಅಂತಲೂ ಊಹಿಸಲಾಗಿದೆ. ಈ ಕುರಿತು ಅಧಿಕಾರಿಗಳು ಗಂಭೀರ ಚರ್ಚೆ ನಡೆಸಿದ್ದಾರೆ.












Click it and Unblock the Notifications