Namma Metro Phase-2: ಮೆಟ್ರೋ ವಿಸ್ತರಣೆಗಳಿಂದ ಹೆಚ್ಚಾಯ್ತು ಯೋಜನಾ ವೆಚ್ಚ: ಅಂಕಿ-ಸಂಖ್ಯೆ ವಿವರ
ಬೆಂಗಳೂರು, ಫೆಬ್ರವರಿ 15: ಬೆಂಗಳೂರು ಮಟ್ರೋ ರೈಲು ನಿಗಮವು (BMRCL) ತನ್ನ ಎರಡನೇ ಹಂತದ ಯೋಜನೆಯ ಭೂಸ್ವಾಧೀನದ ವೆಚ್ಚ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. 2021ರಲ್ಲಿ ನಿಗದಿ ಮಾಡಿದ್ದ ಹಣಕ್ಕಿಂತಲೂ ಹೆಚ್ಚಿನ ಹಣ ಬೇಕಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಯ ಭೂಸ್ವಾಧೀನ ವೆಚ್ಚ ಏರಿಕೆ ಆಗಿದೆ. ಎರಡನೇ ಹಂತದಲ್ಲಿ ನೇರಳೆ ಮಾರ್ಗ (Metro Purple Line) ಮತ್ತು ಹಸಿರು ಮಾರ್ಗ (Metro Green Line) 72-ಕಿಮೀ ಜಾಲದ ಒಟ್ಟಾರೆ ವೆಚ್ಚವನ್ನು 2021 ರಲ್ಲಿ ಮೂಲ ರೂ 26,405 ಕೋಟಿಯಿಂದ ರೂ 30,695 ಕೋಟಿಗೆ ಪರಿಷ್ಕರಿಸಲಾಗಿದೆ ಎಂದು TNIE ವರದಿ ಮಾಡಿದೆ.

ವೆಚ್ಚಳ ಹೆಚ್ಚಳಕ್ಕೆ ಕಾರಣವಾದ ಅಂಶಗಳು
ಕಾಣವೇನೆಂದರೆ ಹೆಚ್ಚಾದ ಒಟ್ಟು 438.26 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರೋ ಮಾರ್ಗಕ್ಕೆ ಬೇಕಾದ ರಸ್ತೆಗಳ ಅಗಲೀಕರಣ, ಡಿಪೋ ಮತ್ತು ನಿಲ್ದಾಣದ ಸೇರ್ಪಡೆ ಮತ್ತು ಸರ್ವೀಸ್ ರಸ್ತೆಗಳ ಅಭಿವೃದ್ಧಿ ಅಗತ್ಯವಿರುತ್ತದೆ. ಈ ಸಂಬಂಧ ನಮ್ಮ ಮೆಟ್ರೋ ಹೆಚ್ಚುವರಿ 44 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಲು ಒತ್ತಾಯಿಸಿದ್ದರಿಂದ ವೆಚ್ಚ ಹೆಚ್ಚಳ ಮಾಡಿದೆ.
ಮೆಟ್ರೋ ಪ್ರಸ್ತಾವಿತ ಯೋಜನೆಗೆ ಮೊದಲು 84 ಹೆಕ್ಟೇರ್‌ಗೆ ಭೂಮಿ ವಶಕ್ಕೆ ಪಡೆಯುವುದಾಗಿ ಹೇಳಿದ್ದೇವೆ. ಇದೀಗ 128.36 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಂಡಿದ್ದೇವೆ. ಉದ್ದೇಶಗಳು ವಿಸ್ತರಣೆ ಆದಂತೆ ಅಂದಾಜು ವೆಚ್ಚ ಹೆಚ್ಚಾಗಲಿದೆ ಎಂದು BMRCL ಹಿರಿಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದರು.
ಕೆಂಗೇರಿಗೆ ಬದಲಾಗಿ ಚಲಘಟ್ಟವರೆಗೆ ವಿಸ್ತರಣೆ
ಎರಡನೇ ಹಂತದ ಯೋಜನೆಗೆ ನೀಡಲಾದ ವಿವರವಾದ ಯೋಜನಾ ವರದಿ (ಡಿಪಿಆರ್) ಪ್ರಕಾರ ಪಶ್ಚಿಮದಲ್ಲಿ ಮೆಟ್ರೋ ರೀಚ್-2 ವಿಸ್ತರಣೆಯು ಕೆಂಗೇರಿ ನಿಲ್ದಾಣದವರೆಗೆ ಮಾತ್ರ ಇತ್ತು. ಆದರೆ ಅಲ್ಲಿ ಕೊನೆಗೊಳ್ಳದೇ ಅದನ್ನು ಚಲಘಟ್ಟ ವರೆಗೆ ವಿಸ್ತರಣೆ ಮಾಡಲಾಯಿತು.
ಪೂರ್ವ-ಪಶ್ಚಿಮವರೆಗೆ ಆದ ಮೆಟ್ರೋ ವಿಸ್ತರಣೆಯಲ್ಲಿ 12 ಹೆಕ್ಟೇರ್ ಭೂಮಿಯಲ್ಲಿ ಕೇವಲ ಒಂದು ಡಿಪೋ ಸ್ಥಾಪನೆಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ ಸುಮಾರು 19 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪೂರ್ವ-ಪಶ್ಚಿಮ ವಿಸ್ತರಣೆಯ ಪೂರ್ವ ಭಾಗದಲ್ಲಿ ಇನ್ನೂ ಒಂದು ಡಿಪೋವನ್ನು ಕಾಡುಗೋಡಿ (ವೈಟ್‌ಫೀಲ್ಡ್) ನಲ್ಲಿ ಸ್ಥಾಪಿಸುವ ಚಿಂತನೆ ಇದೆ. ಅದಕ್ಕಾಗಿ BMRLC ಒಟ್ಟು 18.11 ಹೆಕ್ಟೇರ್ ಅರಣ್ಯ ಭೂಮಿ ವಶಕ್ಕೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬೈಯಪ್ಪನಹಳ್ಳಿಯಿಂದ ಕಾಡುಗೋಡಿಗೆ ರೀಚ್ 1ಇ ವಿಸ್ತರಣೆ ಆದರೆ ರೀಚ್ 4 ವಿಸ್ತರಣೆ ಯಲಚೇನಹಳಿಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ವರೆಗಿನ ವಿಸ್ತರಣೆ ಆಗಿದೆ. ಈ ಯೋಜನೆ ಸಾಕಾರಗೊಳ್ಳುವಾಗ ರಸ್ತೆ ಅಗಲೀಕರಣವನ್ನು ಡಿಪಿಆರ್ ವ್ಯಾಪ್ತಿಗೆ ತಂದಿರಲಿಲ್ಲ.
ರಸ್ತೆ ವಿಸ್ತರಣೆಗೆ ಹೆಚ್ಚು ಭೂಮಿ ಸ್ವಾಧಿನ: ಅಧಿಕ ಖರ್ಚು
ಇನ್ನೂ ಕೆ.ಆರ್ ಪುರ ಮತ್ತು ಗರುಡಾಚಾರ್‌ಪಾಳ್ಯ ನಿಲ್ದಾಣಗಳ ಮಧ್ಯೆದ ರಸ್ತೆಯನ್ನು ಅಗಲೀಕರಣಗೊಳಿಸಲು ನಿರ್ಧರಿಸಲಾಗಿದೆ. ರೀಚ್ 4 ವಿಸ್ತರಣೆ ಮತ್ತು ರೀಚ್ 6 ನಡಿ ಕಾಳೇನ ಅಗ್ರಹಾರದಿಂದ ನಾಗವಾರ ರಸ್ತೆ ವಿಸ್ತರಣೆ ಮಾಡಲಾಗಿದೆ. ಇನ್ನೂ ಮೆಟ್ರೋ ರೀಚ್ 5 ನಲ್ಲಿ ಉದ್ದೇಶಕ್ಕಿಂತಲೂ ಹೆಚ್ಚು ಭೂಮಿಯನ್ನು ವಯಡಕ್ಟ್ ಮತ್ತು ನಿಲ್ದಾಣ ನಿರ್ಮಾಣಕ್ಕೆ ನೀಡಲಾಗಿದೆ. ಇದು ಡಿಪಿಆ್‌ನಲ್ಲಿದ್ದ 79,620 ಚದರ ಮೀಟರ್ ಭೂಮಿಗಿಂತಲೂ ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ಮಾಹಿತಿ ನೀಡಿವೆ.
ನಮ್ಮ ಮೆಟ್ರೋ ಸ್ವಾಧೀನಪಡಿಸಿಕೊಂಡ ಭೂಮಿಯ ಬಹುತೇಕ ಭಾಗವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಬೊಮ್ಮಸಂದ್ರದವರೆಗೆ ಹೊಸ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಹೋಗುತ್ತದೆ. ಹೀಗಾಗಿ ಡಿಪೋಗಾಗಿ ಹೆಚ್ಚಿನ ಭೂಮಿ ಅಗತ್ಯತೆ ಇರುವ ಕಾರಣ ಇಲ್ಲಿ 12 ಹೆಕ್ಟೇರ್ ಬದಲಾಗಿ 14.13 ಹೆಕ್ಟೇರ್ ಭೂಮಿ ವಶಕ್ಕೆ ಪಡೆಸಲಾಯಗಿದೆ. ಇದೆಲ್ಲ ಕಾರಣಗಳಿಂದ ಮೆಟ್ರೋ ಹಂತ ಎರಡರ ಯೋಜನೆಯ ವೆಚ್ಚ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications