Namma Metro: ಬೆಂಗಳೂರು ನಮ್ಮ ಮೆಟ್ರೋ ಪ್ರಾರಂಭವಾಗಿ 15 ವರ್ಷ: ಟ್ರಾಫಿಕ್ ಜಾಮ್ ಕಡಿಮೆ ಆಗ್ತಿಲ್ಲ ಯಾಕೆ ?, ಇಲ್ಲಿದೆ ವಿವರ

Namma Metro: ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯು ವಿಪರೀತವಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣದಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಬ್ರೇಕ್ ಬೀಳಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಪ್ರಾರಂಭವಾಗಿ ಬರೋಬ್ಬರಿ 15 ವರ್ಷಗಳೇ ಕಳೆದರೂ ಸಹ ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತಿಲ್ಲ. ದೆಹಲಿ, ಚೆನ್ನೈ ಹಾಗೂ ಹೈದರಬಾದ್‌ ನಂತಹ ನಗರಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಪ್ರಾರಂಭವಾದ ಮೇಲೂ ಸಹ ಟ್ರಾಫಿಕ್ ಜಾಮ್ ಕಡಿಮೆಯಾಗುತ್ತಿಲ್ಲ. ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಬಂದು ಸುದೀರ್ಘ 15 ವರ್ಷಗಳಾದ ಮೇಲೆಯೂ ಸಹ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆ ಆಗದೆ ಇರುವುದು ಯಾಕೆ ಎನ್ನುವ ವಿವರ ಇಲ್ಲಿದೆ.

2026ರ ಅಕ್ಟೋಬರ್ 20ಕ್ಕೆ ಬೆಂಗಳೂರು ಮೆಟ್ರೋ ಸೇವೆ / ಕಾರ್ಯಾಚರಣೆ ಪ್ರಾರಂಭವಾಗಿ 15 ವರ್ಷ ಪೂರ್ಣಗೊಳ್ಳಲಿದೆ. ಇದರ ಹೊರತಾಗಿಯೂ ಭಾರತದ ಐಟಿ ರಾಜಧಾನಿ ಆಗಿರುವ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಸುಧಾರಣೆ ಕಂಡಿಲ್ಲ. ಅಲ್ಲದೆ ಮೆಟ್ರೋ ಪ್ರಯಾಣದ ದರವೂ ಸಹ ದುಬಾರಿ ಆಗುತ್ತಿದೆ. ಬೆಂಗಳೂರಿನ ನಮ್ಮ ಮೆಟ್ರೋದ ಮೊದಲ ಹಂತವು ಅಕ್ಟೋಬರ್ 20, 2011 ರಂದು ಉದ್ಘಾಟನೆ ಆಗಿತ್ತು. ಆದರೆ ಸುಮಾರು ಒಂದೂವರೆ ದಶಕದ ನಂತರ, ಬೆಂಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ಸರಾಸರಿ 168 ಗಂಟೆಗಳ ಕಾಲ ಜನ ಸಂಚಾರದಲ್ಲಿಯೇ ಕಳೆಯುತ್ತಿದ್ದಾರೆ.

Namma Metro

ಇದೀಗ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲವು ಸುಮಾರು 96 ಕಿ.ಮೀ ಉದ್ದವನ್ನು ಹೊಂದಿದೆ. ದೆಹಲಿ ಮೆಟ್ರೋಗೆ ಹೋಲಿಕೆ ಮಾಡಿದರೆ ದೆಹಲಿ ಮೆಟ್ರೋ ತನ್ನ ಮೊದಲ 12 ವರ್ಷಗಳ ಕಾರ್ಯಾಚರಣೆಯಲ್ಲಿ 194 ಕಿ.ಮೀ ಉದ್ದದ ಜಾಲವನ್ನು ಹೊಂದಿತ್ತು. (ಬೆಂಗಳೂರು ಮೆಟ್ರೋದ ಪ್ರಸ್ತುತ ಜಾಲಕ್ಕಿಂತಲೂ ಎರಡು ಪಟ್ಟು ಹೆಚ್ಚು).ಆದರೆ ಬೆಂಗಳೂರು ಮೆಟ್ರೋ ಜಾಲದ ವಿಸ್ತರಣೆಯು ಹಲವು ಕಾರಣಗಳಿಗೆ ವಿಳಂಬವಾಗುತ್ತಿದೆ.

ಬೆಂಗಳೂರು ಮೆಟ್ರೋದ ಎರಡನೇ ಹಂತದ ಯೋಜನೆಯ ಆಗಸ್ಟ್ 15 ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿತ್ತು, ಆದರೆ ಮತ್ತೆ ಈ ಯೋಜನೆ ವಿಳಂಬವಾಗಿದೆ. ಅದರಲ್ಲಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ವಿಸ್ತರಣೆಗೆ ಭೂಸ್ವಾಧೀನ, ಭೂಸ್ವಾಧೀನಕ್ಕೆ ದುಬಾರಿ ವೆಚ್ಚ ಹಾಗೂ ತಾಂತ್ರಿಕ ಕಾರಣಗಳು ಸೇರಿದಂತೆ ಹಲವು ಕಾರಣಗಳಿಗೆ ಮೆಟ್ರೋ ಜಾಲದ ವಿಸ್ತರಣೆಯು ವಿಳಂಬವಾಗುತ್ತಿದೆ.

ಬೆಂಗಳೂರಲ್ಲಿ ನಮ್ಮ ಮೆಟ್ರೋ ಯೋಜನೆ ಜಾರಿಯಾಗಿ, ಪ್ರಗತಿಯಲ್ಲಿದ್ದರೂ ಇಂದಿಗೂ ಎಂಡ್ ಟು ಎಂಡ್ ಕನೆಕ್ಟಿವಿಟಿ ಸುಧಾರಿಸಿಲ್ಲ. ಆದರೆ ದೆಹಲಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದಕ್ಕೆ ಮೆಟ್ರೋ ವಿಸ್ತೀರ್ಣವಿದೆ.

ಕಳೆದ ಕೆಲವು ದಶಕಗಳಲ್ಲಿ ಬೆಂಗಳೂರಿನಲ್ಲಿ ಭೂಮಿ / ಪ್ರಾಪರ್ಟಿ ಬೆಲೆ ದುಬಾರಿ ಆಗಿದೆ. ಹೀಗಾಗಿ, ಬೆಂಗಳೂರು ಮೆಟ್ರೋ ಯೋಜನೆಗೆ ಭೂಸ್ವಾಧೀನಕ್ಕೂ ತೊಡಕಾಗುತ್ತಿದೆ. ಮೆಟ್ರೋ ಯೋಜನೆಗೆ ಮರಗಳನ್ನು ಕಡಿಯುವುದು, ಯೋಜನೆಗಾಗಿ ಭೂಸ್ವಾಧೀನ ಹಾಗೂ ಕಾನೂನು ವಿವಾದಗಳನ್ನು ಪರಿಹರಿಸುವುದು, ಪಾರಂಪರಿಕ ಕಟ್ಟಡಗಳಿಂದ ಮಾರ್ಗಗಳನ್ನು ಬದಲಾಯಿಸುವುದು ಅಗತ್ಯವಾಗಿದೆ. ಈ ಎಲ್ಲಾ ಅಂಶಗಳು ಯೋಜನೆಯನ್ನು ವಿಳಂಬಗೊಳಿಸುತ್ತವೆ ಮತ್ತು ಕೆಲವೊಮ್ಮೆ ಈ ಸಮಸ್ಯೆಗಳನ್ನು ಪರಿಹರಿಸಲು ತಿಂಗಳುಗಳೇ ಬೇಕಾಗುತ್ತಿದೆ ಎಂದು ಹೇಳಲಾಗಿದೆ.

Namma Metro: ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಖ್ಯ ಕಾರಣವೇನು ?

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರವಾಗದೆ ಇರುವುದು ಅಥವಾ ಮೆಟ್ರೋ ಬಳಕೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದೆ ಇರುವುದಕ್ಕೆ End to end Connectivityಯು (ಎಲ್ಲ ಹಂತಗಳನ್ನೂ ಸಂಪರ್ಕಿಸುವ ವ್ಯವಸ್ಥೆ) ಸಹ ಪ್ರಮುಖ ಕಾರಣವಾಗಿದೆ.

ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಎಲ್ಲ ಕಡೆಯಲ್ಲೂ ಇಲ್ಲ. ಅದೇ ರೀತಿ ಬಿಎಂಟಿಸಿ ಸೇವೆ ಇದೆಯಾದರೂ ಬಿಎಂಟಿಸಿ ಮಾರ್ಗ - ಪ್ರಯಾಣದ ಸಮಯ ತುಂಬಾ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಸಮೂಹ ಸಾರಿಗೆ ಬಳಕೆ ಮಾಡುವವರು ಸಹ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೆಟ್ರೋ ಜಾಲ ಪೂರ್ಣ ಪ್ರಮಾಣದಲ್ಲಿ ಬೇಗ ವಿಸ್ತರಿಸಿದರೆ ಮಾತ್ರ ನಮ್ಮ ಮೆಟ್ರೋದ ಪೂರ್ಣ ಲಾಭ ಹಾಗೂ ಟ್ರಾಫಿಕ್ ಜಾಮ್‌ಗೆ ಮುಕ್ತಿ ಸಿಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+