BMTC: ಬಿಎಂಟಿಸಿ ಪ್ರಯಾಣಿಕರಿಗೆ ಸೂಚನೆ, 15 ದಿನ ಈ ಸೇವೆ ಇಲ್ಲ

ಬೆಂಗಳೂರು, ಜನವರಿ 14: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಉದ್ಯಾನ ನಗರಿಯ ಜನರ ಜೀವನಾಡಿ. ಪ್ರತಿದಿನ ಲಕ್ಷಾಂತರ ಜನರು ಬಸ್ ಬಳಕೆ ಮಾಡುತ್ತಾರೆ. ಬಿಎಂಟಿಸಿ ಬಸ್‌ ಕುರಿತು ಮಾಹಿತಿ ನೀಡಲು ಹಲವು ವ್ಯವಸ್ಥೆಗಳನ್ನು ಒಳಗೊಂಡಿದೆ. ಪ್ರಯಾಣಿಕರು ಬೆರಳ ತುದಿಯಲ್ಲಿಯೇ 'ನಮ್ಮ ಬಿಎಂಟಿಸಿ' ಮೊಬೈಲ್ ಅಪ್ಲಿಕೇಶನ್ ಮೂಲಕ ಬಸ್‌ಗಳ ಕುರಿತು ಮಾಹಿತಿಯನ್ನು ಸಹ ಪಡೆಯಬಹುದಾಗಿದೆ.

ಬಿಎಂಟಿಸಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಒಂದಿದೆ. ಜನವರಿ 15 ರಿಂದ 30ರ ತನಕ 'ನಮ್ಮ ಬಿಎಂಟಿಸಿ' ಮೊಬೈಲ್ ಅಪ್ಲಿಕೇಶನ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ. ಈ ಸಮಯದಲ್ಲಿ ಅಪ್ಲಿಕೇಶನ್‌ನಲ್ಲಿ ಯಾವ ಮಾಹಿತಿಯೂ ಸಿಗುವುದಿಲ್ಲ. ಪ್ರಯಾಣಿಕರು ಸಂಸ್ಥೆಯ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

Namma BMTC Application Will Not Available From January 15 To 30

ಬಿಎಂಟಿಸಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಲು, ಬಸ್‌ಗಳ ಅಂದಾಜು ಆಗಮನ ಮತ್ತು ನಿರ್ಗಮನ ಸಮಯವನ್ನು ಪಡೆಯಲು ಮತ್ತು ಬಸ್ ವೇಳಾಪಟ್ಟಿಯ ಬಗ್ಗೆ ಮಾಹಿತಿ ಪಡೆಯಲು 'ನಮ್ಮ ಬಿಎಂಟಿಸಿ' ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರು. ನಗರಕ್ಕೆ ಹೊಸದಾಗಿ ಬರುವ ಜನರಿಗೆ ಈ ಅಪ್ಲಿಕೇಶನ್ ಸಹಾಯಕವಾಗಿದೆ.

ಆದರೆ ದತ್ತಾಂಶ ನಿರ್ವಹಣೆ ಕಾರಣಕ್ಕೆ ಜನವರಿ 15 ರಿಂದ 30ರ ತನಕ 'ನಮ್ಮ ಬಿಎಂಟಿಸಿ' ಮೊಬೈಲ್ ಅಪ್ಲಿಕೇಶನ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ ಎಂದು ತಿಳಿಸಲಾಗಿದೆ. ಈ ಸಮಯದಲ್ಲಿ ಬಸ್‌ಗಳ ಮಾಹಿತಿ, ಯೋಜನೆ, ದರಪಟ್ಟಿ ಸೇರಿದಂತೆ ಯಾವುದೇ ಸೇವೆಗಳು ಕಾರ್ಯ ನಿರ್ವಹಣೆ ಮಾಡುವುದಿಲ್ಲ. ಆದರೆ ದತ್ತಾಂಶಗಳ ನಿರ್ವಹಣೆ ಪೂರ್ಣಗೊಂಡ ಬಳಿಕ ಅಪ್ಲಿಕೇಶನ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

2023ರಲ್ಲಿ ತಯಾರಿ: 'ನಮ್ಮ ಬಿಎಂಟಿಸಿ' ಮೊಬೈಲ್ ಅಪ್ಲಿಕೇಶನ್‌ ಅನ್ನು 2023ರಲ್ಲಿ ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಶನ್ ಮೂಲಕ ಸದ್ಯ 4 ರಿಂದ 4,700 ಬಸ್‌ಗಳನ್ನು ಟ್ರಾಕ್ ಮಾಡಬಹುದು. ಆದರೆ ಬಿಎಂಟಿಸಿಯಲ್ಲಿ 6027ಕ್ಕೂ ಅಧಿಕ ಬಸ್‌ಗಳಿವೆ. ಬಿಎಸ್‌-6 ಮಾದರಿ ಬಸ್‌ಗಳು, ಎಲೆಕ್ಟ್ರಿಕ್ ಬಸ್‌ಗಳನ್ನು ಈ ಅಪ್ಲಿಕೇಶನ್ ಮೂಲಕ ಟ್ರಾಕ್ ಮಾಡುವುದು ಅಸಾಧ್ಯ. ಆದ್ದರಿಂದ ಅಪ್ಲಿಕೇಶನ್ ನಿರ್ವಹಣೆ ಮಾಡುವ ಮೂಲಕ ಸೇವೆ ಒದಗಿಸಲು ಬಿಎಂಟಿಸಿ ಮುಂದಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ವಾಯುವಜ್ರ' ವೊಲ್ವೋ ಬಸ್‌ ಓಡಿಸುತ್ತದೆ. ಈ ಬಸ್‌ಗಳ ಎಲ್ಲಾ ಮಾಹಿತಿಯನ್ನು ನೀಡಲು ಪ್ರತ್ಯೇಕ ವೆಬ್‌ಸೈಟ್ ಆರಂಭಿಸಲಾಗಿದೆ. ಅಲ್ಲದೇ ಬಿಎಂಟಿಸಿ ವೆಬ್‌ಸೈಟ್, ನಮ್ಮ ಬಿಎಂಟಿಸಿ ವೆಬ್‌ಸೈಟ್ ಮೂಲಕ ಬಸ್‌ಗಳ ವೇಳಾಪಟ್ಟಿ, ದರ ಮುಂತಾದ ಮಾಹಿತಿಗಳು ಪ್ರಯಾಣಿಕರಿಗೆ ಲಭ್ಯವಿದೆ.

ಕರ್ನಾಟಕದ ಸಾರಿಗೆ ಸಂಸ್ಥೆಗಳಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಸೇರಿವೆ. ಬಿಎಂಟಿಸಿ ಬೆಂಗಳೂರು ನಗರಕ್ಕೆ ಸೀಮಿತವಾಗಿ ಬಸ್ ಸೇವೆಯನ್ನು ನೀಡುತ್ತಿದ್ದು, 6 ಸಾವಿರಕ್ಕೂ ಅಧಿಕ ಬಸ್‌ಗಳನ್ನು ಹೊಂದಿದೆ.

ಬಿಎಂಟಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಬೇರ್ಪಟ್ಟು ಸರ್ಕಾರಿ ಆದೇಶದಂತೆ ದಿನಾಂಕ 15-08-1997 ರಿಂದ ಜಾರಿಗೆ ಬರುವಂತೆ ಸ್ವತಂತ್ರ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದು ಕಾರ್ಯಾರಂಭ ಮಾಡಿದೆ. ಬಿಎಂಟಿಸಿ ರಚನೆಯಾದ ನಂತರ ಘಟಕಗಳು ಮತ್ತು ಕೇಂದ್ರ ಕಛೇರಿಯ ಮಧ್ಯೆ ನೇರ ಸಂಪರ್ಕ ಕಲ್ಪಿಸಿ, ಉತ್ತಮ ನಿಯಂತ್ರಣ ಸಾಧಿಸಲು ಹಾಗೂ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸುವ ದೃಷ್ಟಿಯಿಂದ ಸಂಸ್ಥೆಯು ದ್ವಿ-ಹಂತ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+