ಏಪ್ರಿಲ್ 27 ರಂದು ಪ್ರತಿಷ್ಠಿತ 'ನಮ್ಮ ಬೆಂಗಳೂರು' ಪ್ರಶಸ್ತಿ ಪ್ರದಾನ
ಬೆಂಗಳೂರು, ಏಪ್ರಿಲ್ 24: ಪ್ರತಿಷ್ಠಿತ ನಮ್ಮ ಬೆಂಗಳೂರು ಪ್ರಶಸ್ತಿಯ ಅಂತಿಮ ಸುತ್ತಿಗೆ ಐದು ಮಂದಿ ಬೆಂಗಳೂರಿಗರು ಆಯ್ಕೆ ಆಗಿದ್ದು ಅವರಲ್ಲೊಬ್ಬರಿಗೆ ಶನಿವಾರ (27/04/2019) ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ನಮ್ಮ ಬೆಂಗಳೂರು ಪ್ರತಿಷ್ಠಾನವು ಪ್ರತಿ ವರ್ಷ ಅತ್ಯುತ್ತಮ ಬೆಂಗಳೂರಿಗರನ್ನು ಗುರುತಿಸಿ ಪ್ರಶಸ್ತಿ ನೀಡುತ್ತದೆ. ಅದಕ್ಕೆ ಜನರೇ ಹೆಸರುಗಳನ್ನು ಸೂಚಿಸುವುದು ವಿಶೇಷ. ಈ ಬಾರಿ ಕೂಡ ಜನರೇ ಸೂಚಿಸಿದ ಹೆಸರುಗಳಲ್ಲಿ ಅವರ ಸೇವೆಗಳನ್ನು ಗುರುತಿಸಿ ಕೊನೆಯ ಐದು ಮಂದಿಯನ್ನು ಆಯ್ಕೆ ಮಾಡಲಾಗಿದೆ.
ವರ್ಷದ ಸಾಮಾಜಿಕ ಉದ್ದಿಮೆದಾರರು ವಿಭಾಗದಲ್ಲಿ ದಿ ಗ್ರೀನ್ ಪಾಥ್ ಸಂಸ್ಥಾಪಕ ಜಯರಾಮ್ ಎಚ್.ಆರ್, ರೀಪ್ ಬೆನಿಫಿಟ್ ಸಂಸ್ಥೆ ಸಿಇಓ ಕುಲ್‌ದೀಪ್ ದಂತೇವಾಡ, ಸ್ವಚ್ಛ ಇಕೋ ಸೊಲ್ಯೂಷನ್ಸ್‌ನ ಸಹ ಸಂಸ್ಥಾಪಕರಾದ ರಾಜೇಶ್ ಬಾಬು ಮತ್ತು ವಿಕ್ಟೋರಿಯಾ ಜೋಸ್ಲಿನ್ ಡಿಸೋಜಾ, ಹಸಿರು ದಳದ ಸಹ ಸಂಸ್ಥಾಪಕಿ ನಳಿನಿ ಶೇಖರ್, ಸ್ಟೋನ್ ಸೂಪ್‌ನ ಸಹ ಸಂಸ್ಥಾಪಕ ಸ್ಮಿತಾ ಕುಲಕರ್ಣಿ ಅವರು ಅಂತಿಮ ಸುತ್ತಿಗೆ ಆಯ್ಕೆ ಆಗಿದ್ದಾರೆ.

ಐದು ವಿಭಾಗದಲ್ಲಿ ಅತ್ಯುತ್ತಮ ಬೆಂಗಳೂರಿಗರನ್ನು ಆಯ್ಕೆ ಮಾಡಲಾಗುತ್ತದೆ. ಈ ಐದು ವಿಭಾಗದಲ್ಲಿ 28 ಮಂದಿ ಅಂತಿಮ ಸುತ್ತಿನಲ್ಲಿ ಇದ್ದಾರೆ. ಪ್ರತಿಯೊಂದು ವಿಭಾಗದಲ್ಲೂ ಒಬ್ಬರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇವರಲ್ಲಿ ಒಬ್ಬರಿಗೆ ಇದೇ ಶನಿವಾರದಂದು ಅಂಬೇಡ್ಕರ್ ಭವನ, ವಸಂತನಗರ ಇಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಾರಿ ಪ್ರಶಸ್ತಿಗೆ ನಾಮಿನೇಶನ್ ಅನ್ನು ರಮೇಶ್ ಅರವಿಂದ್ ಅವರು ಚಾಲನೆ ನೀಡಿದ್ದರು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದು, ಅವರೊಂದಿಗೆ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಇರಲಿದ್ದಾರೆ.












Click it and Unblock the Notifications