ಈ ಮೆಟ್ರೋ ನಿಲ್ದಾಣದಿಂದ ಎಲ್ಲೇ ಇಳಿದರೂ ಆಟೋಗೆ 30 ರೂ. ಮಾತ್ರ

ಬೆಂಗಳೂರು, ಫೆಬ್ರವರಿ 12: ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ 'ನಮ್ಮ ಆಟೋ' ಸೇವೆ ಶುರುವಾಗಿದೆ.

ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಎಂಬೆಸ್ಸಿ ಗಾಲ್ಫ್ ಲಿಂಕ್ಸ್‌ವರೆಗೆ 4.5 ಕಿ.ಮೀ ದೂರದವರೆಗೆ ಎಲ್ಲೇ ಇಳಿದರೂ 30 ರೂ. ಮಾತ್ರ ಪಾವತಿಸಿ. ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಎಂಬೆಸ್ಸಿ ಗಾಲ್ಫ್‌ ಲಿಂಕ್ಸ್ ಬ್ಯುಜಿನೆಸ್ ಪಾರ್ಕ್‌ವರೆಗೂ ಸಹ ಪ್ರಯಾಣಿಕರೊಂದಿಗೆ ದರ ಹಂಚಿಕೊಂಡು ಸಂಚರಿಸಲು ಅನುಕೂಲವಾಗುವಂತೆ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ನಮ್ಮ ಆಟೋ ಎಂಬ ಶೇರಿಂಗ್ ಆಟೋ ಸೌಲಭ್ಯ ಆರಂಭಗೊಂಡಿದೆ.

ಇಂದಿರಾ ನಗರ ಮೆಟ್ರೋನಿಲ್ದಾಣದಿಂದ ಎಂಬೆಸ್ಸಿ ಗಾಲ್ಫ್ ಲಿಂಕ್ಸ್ ವರೆಗೂ ನಾಲ್ಕೂವರೆ ಕಿ.ಮೀ ಇದ್ದು, ಈ ಮಾರ್ಗದಲ್ಲಿ ಬರುವ ಯಾವುದೇ ನಿಲ್ದಾಣದಲ್ಲಿ ಇಳಿದರೂ ಒಂದೇ ರೀತಿಯ ದರ ನಿಗದಿಪಡಿಸಲಾಗಿದೆ. ಶೇರಿಂಗ್ ಆಟೋ ರಿಕ್ಷಾ ಸೇವೆಯನ್ನು ಶೀಘ್ರವೇ ಇತರೆ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತದೆ ಎನ್ನುವ ಮಾಹಿತಿ ಲಬ್ಯವಾಗಿದೆ.

 ಯುರೋಪಿಯನ್ ಯೂನಿಯನ್ ಯೋಜನೆ

ಯುರೋಪಿಯನ್ ಯೂನಿಯನ್ ಯೋಜನೆ

ಯುರೋಪಿಯನ್ ಯೂನಿಯನ್ ಯೋಜನೆಯಡಿ ಎಚ್ ಎಐಎಲ್ ಸಂಸ್ಥೆ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದು,ನಮ್ಮ ಆಟೋ ಸಂಘದ ಸಹಭಾಗಿತ್ವದಲ್ಲಿ ಮೆಟ್ರೋ ಪ್ರಯಾಣಿಕರಿಗೆ ನಿರ್ದಿಷ್ಟ ಮಾರ್ಗ ಮತ್ತು ನಿರ್ದಿಷ್ಟ ದರದಲ್ಲಿ ಆಟೋ ರಿಕ್ಷಾ ಸೌಲಭ್ಯ ಆರಂಭಿಸಲಾಗಿದೆ.

 ಇಂದಿರಾನಗರ ಮೆಟ್ರೋ ಪ್ರಯಾಣಿಕರಿಗೆ ಸೌಲಭ್ಯ

ಇಂದಿರಾನಗರ ಮೆಟ್ರೋ ಪ್ರಯಾಣಿಕರಿಗೆ ಸೌಲಭ್ಯ

ಪ್ರತಿ ದಿನ ಇಂದಿರಾನಗರದಿಂದ ಎಂಬೆಸ್ಸಿ ಗಾಲ್ಫ್ ಲಿಂಕ್ಸ್‌ಗೆ ತೆರಳುವ ಮತ್ತು ಆಗಮಿಸುವ ನಮ್ಮ ಮೆಟ್ರೋ ಪ್ರಯಾಣಿಕರು ನಮ್ಮ ಆಟೋ ಸೇವೆ ಪಡೆಯಬಹುದಾಗಿದೆ. ಆದರೆ ಅದಕ್ಕೂ ಮೊದಲು ನಮ್ಮ ಆಟೋ ಸೇವೆ ಪಡೆಯಲು ಇಚ್ಛಿಸುವವರು ಎಚ್ಎಐಎಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

 ಮಾಲಿನ್ಯ ಮುಕ್ತ ಆಟೋ ರಿಕ್ಷಾಗಳು

ಮಾಲಿನ್ಯ ಮುಕ್ತ ಆಟೋ ರಿಕ್ಷಾಗಳು

ನಮ್ಮ ಆಟೋ ಸಂಘ ಪರಿಸರ ಮಾಲಿನ್ಯ ಮುಕ್ತ ಸೇವೆ ಒದಗಿಸಲು ಆದ್ಯತೆ ನೀಡಿದೆ. ನಮ್ಮ ಆಟೋ ಚಾಲಕರು ಎಲ್‌ಪಿಜಿ ಆಟೋ ರಿಕ್ಷಾಗಳನ್ನು ಬಳಸುತ್ತಿದ್ದಾರೆ. ಇದುವರೆಗೂ 35ಕ್ಕೂ ಹೆಚ್ಚು ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಕೊಡಿಸಲಾಗಿದೆ.

 4.5 ಕಿ.ಮೀಗೆ ಕೇವಲ 30 ರೂ.

4.5 ಕಿ.ಮೀಗೆ ಕೇವಲ 30 ರೂ.

ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಕೆಎಫ್‌ಸಿ ಸಿಗ್ನಲ್ ,ಸೋನಿ ಸೆಂಟರ್, ದೂಪನಹಳ್ಳಿ ಬಸ್ ನಿಲ್ದಾಣ, ದೊಮ್ಮಲೂರು ಫ್ಲೈಓವರ್, ಹೀರೋ ಹೋಂಡಾ ಶೋರೂಂ, ಓಪನ್ ಟೆಕ್ಸ್ಟ್, ಐಬಿಎಂ ಸಿ ಬ್ಲಾಕ್ , ಎಂಬೆಸ್ಸಿ ಗಾಲ್ಫ್ ಲಿಂಕ್ಸ್ ವೃತ್ತ , ಎಎಂಬೆಸ್ಸಿ ಗಾಲ್ಫ್‌ ಲಿಂಕ್ಸ್ ಹೀಗೆ 12 ನಿಲ್ದಾಣಗಳಲ್ಲಿ ನಮ್ಮ ಆಟೋ ನಿಲುಗಡೆ ವ್ಯವಸ್ಥೆ ಇದೆ. 4.5 ಕಿ.ಮೀಗೆ ಕೇವಲ 30 ರೂ. ತೆಗೆದುಕೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+