ರಾಜ್ಯದಾದ್ಯಂತ ಸಂಭ್ರಮದ ನಾಗರ ಪಂಚಮಿ ಆಚರಣೆ
ಬೆಂಗಳೂರು, ಆಗಸ್ಟ್, 07: ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದೆಲ್ಲೆಡೆ ನಾಗರ ಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆದವು.

ಬೆಂಗಳೂರಿನ ಗಿರಿನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ (ಕಾರ್ಯಸಿದ್ಧಿ ವಿನಾಯಕ ದೇವಾಲಯ) ನಾಗರ ಪಂಚಮಿ ನಿಮಿತ್ತ ಆಶ್ಲೇಷಾ ಬಲಿ, ನಾಗ ತನು ತರ್ಪಣ, ನಾಗ ಸುಬ್ರಹ್ಮಣ್ಯಾರಾಧನೆ ಜರುಗಿತು. ಸಾವಿರಾರು ಭಕ್ತರು ಆದಿಶೇಷನ ಕೃಪೆಗೆ ಪಾತ್ರರಾದರು.[ನಾಗರ ಪಂಚಮಿಗೆ ಕೇದಗೆ ವಿಶೇಷ ಏನು?]

ದೃಷ್ಟಿ ದೋಷ, ಚರ್ಮ ರೋಗ, ಸಂತಾನ ಹೀನತೆ, ಕುಟುಂಬದ ಸಾಮರಸ್ಯ, ಸಂಪತ್ತು ವೃದ್ಧಿ ಮುಂತಾದ ಕಾರಣಗಳ ಪರಿಹಾರಕ್ಕೋಸ್ಕರ ಭಕ್ತರು ನಾಗದೇವನಿಗೆ ನಮಿಸಿದರು.[ನಾಗನನ್ನು ಪೂಜಿಸುವುದು ಮೂಢನಂಬಿಕೆಯಾಗಲು ಸಾಧ್ಯವೇ?]

ಬೆಂಗಳೂರು ಹೊರವಲಯದ ಮುಕ್ತಿನಾಗ ದೇವಾಲಯದಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಾನುವಾರವಾದ್ದರಿಂದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.












Click it and Unblock the Notifications