ಬೆಂ-ಮೈ ರೈಲು ಜೋಡಿಮಾರ್ಗ ಮಾರ್ಚ್ ನಲ್ಲಿ ಪೂರ್ಣ

ಬೆಂಗಳೂರು, ಜೂ. 26 : ಬೆಂಗಳೂರು-ಮೈಸೂರು ರೈಲ್ವೆ ಜೋಡಿ ಮಾರ್ಗ ಕಾಮಗಾರಿಯನ್ನು 2015ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವುದಾಗಿ ಮೂಲ ಸೌಕರ್ಯ ಸಚಿವ ರೋಷನ್ ಬೇಗ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ಎನ್.ಚಲುವರಾಯಸ್ವಾಮಿ ಅವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.

ಬುಧವಾರದ ಕಲಾಪದಲ್ಲಿ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಎನ್.ಚಲುವರಾಯಸ್ವಾಮಿ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದ ಸಚಿವ ರೋಷನ್ ಬೇಗ್, ರೈಲ್ವೆ ಇಲಾಖೆ ಬೆಂಗಳೂರು-ಮೈಸೂರು ಜೋಡಿಮಾರ್ಗ ಕಾಮಗಾರಿ2015ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದೆ ಎಂದು ತಿಳಿಸಿದರು.

Rail Line Doubling

ಬೆಂಗಳೂರು-ರಾಮನಗರ ವಿಭಾಗವನ್ನು ಮುಕ್ತಾಯಗೊಳಿಸಿ ಸಂಚಾರ ಆರಂಭಿಸಲಾಗಿದೆ. ರಾಮನಗರ-ಮೈಸೂರು ವಿಭಾಗದ ಒಟ್ಟು 93 ಕಿ.ಮೀ.ಗಳಲ್ಲಿ ಕಳೆದ ಮಾರ್ಚ್ ವೇಳೆಗೆ 46 ಕಿ.ಮೀ. ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉಳಿದ ಕಾಮಗಾರಿಯನ್ನು ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳಿಸುವುದಾಗಿ ಇಲಾಖೆ ಮಾಹಿತಿ ನೀಡಿದೆ ಎಂದು ಸಚಿವರು ಹೇಳಿದರು. [ಬುಧವಾರದ ಕಲಾಪದ ಮುಖ್ಯಾಂಶಗಳು]

ಇತರ ಮಾರ್ಗಗಳು : ಕೆಂಗೇರಿ-ಕನಕಪುರ-ಮಳವಳ್ಳಿ-ಚಾಮರಾಜನಗರ ಮಾರ್ಗದ ಸರ್ವೆ ಕಾರ್ಯ ನಡೆಯುತ್ತಿದೆ. ಈ ಮಾರ್ಗ 162 ಕಿ.ಮೀ.ಗಳಾಗಿದ್ದು 1254.71 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರ ಶೇ 50ರಷ್ಟು ಅನುದಾನ ನೀಡಲಿದ್ದು, ವೆಚ್ಚ ಹಂಚಿಕೆ ಮತ್ತು ಅಗತ್ಯ ಭೂಮಿಯನ್ನು ಉಚಿತವಾಗಿ ಒದಗಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದರು. [ಬೆಂಗಳೂರು-ಮೈಸೂರು ನಡುವೆ ಬುಲೆಟ್‌ ರೈಲು]

ಒಟ್ಟು 106 ಕಿ.ಮೀ.ನ ಶ್ರವಣಬೆಳಗೊಳ ಮಾರ್ಗದ ಬ್ರಾಡ್‌ ಗೇಜ್ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದ್ದು, ಸಂಚಾರಕ್ಕೆ ತೆರವುಗೊಳಿಸಲಾಗಿದೆ. ಉಳಿದ 60 ಕಿ.ಮೀ. ಮಾರ್ಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇದನ್ನು 2015-16ನೇ ಸಾಲಿನಲ್ಲಿ ಪೂರ್ಣಗೊಳಿಸುವ ಗುರಿ ಇದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+