ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನಕ್ಕೆ ಮುಲಕನಾಡು ಸಂಘದಿಂದ ಅರ್ಜಿ ಆಹ್ವಾನ
ಬೆಂಗಳೂರು ಮೇ 9 2019: ಮುಲಕನಾಡು ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಿ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ಬೆಂಗಳೂರಿನ ಮುಲಕನಾಡು ಸಂಘ ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಜೂನ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.
ಈ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನವನ್ನು ಪಡೆಯಲು ಇಚ್ಛಿಸುವ ಸಮುದಾಯದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಗುರುತಿನ ಚೀಟಿ ಮತ್ತು ಸ್ವವಿವರದೊಂದಿಗೆ ಸಂಘದ ಕಚೇರಿಗೆ ಅರ್ಜಿಯನ್ನು ಸಲ್ಲಿಸುವಂತೆ ಸಂಘದ ಕಾರ್ಯದರ್ಶಿ ಪ್ರಕಾಶ್ ಅವರು ಮನವಿ ಮಾಡಿದ್ದಾರೆ.

ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ: ಇದಲ್ಲದೇ ಪಿಯುಸಿ ನಂತರದ ಉನ್ನತ ವ್ಯಾಸಂಗಕ್ಕಾಗಿ ಸೇರ ಬಯಸಿರುವ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ನಿಲಯದ ಸೌಲಭ್ಯ ಒದಗಿಸಲಾಗುವುದು. ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಸಂಘದ ಕಚೇರಿಯನ್ನು ಸಂಪರ್ಕ ಮಾಡುವಂತೆ ಸಿ ಪ್ರಕಾಶ್ ಅವರು ಕೋರಿದ್ದಾರೆ.
ಕಚೇರಿ ವಿಳಾಸ
ಮುಲಕನಾಡು ಮಹಾಸಂಘ (ರಿ)
ನಂ 36, ಬಿ.ಎಚ್.ಸಿ.ಎಸ್ ಬಡಾವಣೆ
ಪಾದುಕಾ ಮಂದಿರ ರಸ್ತೆ, ಉತ್ತರಹಳ್ಳಿ - ಕೆಂಗೇರಿ ಮುಖ್ಯರಸ್ತೆ
ಬೆಂಗಳೂರು - 560061












Click it and Unblock the Notifications