ವೃತ್ತಿಪರ ಛಾಯಾಗ್ರಾಹಕರಾಗಬೇಕೆ? ತರಬೇತಿ ಪಡ್ಕೊಳ್ಳಿ
ಬೆಂಗಳೂರು, ಆಗಸ್ಟ್, 17 : ನಿಮಗೆ ಛಾಯಾಚಿತ್ರ ಸೆರೆ ಹಿಡಿಯುವಲ್ಲಿ ಆಸಕ್ತಿ ಇದೆಯಾ? ನೀವು ವೃತ್ತಿ ನಿರತ ಅಥವಾ ಹವ್ಯಾಸಿ ಛಾಯಾಗ್ರಾಹಕರಾಗಬೇಕಾ? ತರಬೇತಿಗಾಗಿ ಪರಿತಪಿಸುತ್ತಿದ್ದೀರಾ..ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ.
ವಿಶ್ವ ಛಾಯಾಗ್ರಹಣದ 176ನೇ ದಿನಾಚರಣೆ ಅಂಗವಾಗಿ ಮಲ್ಟಿ ಮೀಡಿಯಾ ಅಕಾಡೆಮಿ ಟ್ರಸ್ಟ್ ಮತ್ತು ವಿಜಯ ಫಿಲ್ಮಿ ಇನ್ಸ್ ಟಿಟ್ಯೂಟ್ ಸಹಯೋಗದಲ್ಲಿ ಉಚಿತ ಸ್ಟಿಲ್ ಕ್ಯಾಮರಾ ತಪಾಸಣೆ ಮತ್ತು ಅಂತರಜಾಲ ಪ್ರಸಾರ ಮಾಧ್ಯಮದ ಒಂದು ದಿನದ ಉಚಿತ ತರಬೇತಿ ಹಾಗೂ ಉದ್ಯೋಗ ಮೇಳವನ್ನು ಬಸವೇಶ್ವರ ನಗರದ ಗಂಗಮ್ಮ ಕಲ್ಯಾಣ ಮಂಟಪ ಹತ್ತಿರವಿರುವ ಕೆನರಾ ಬ್ಯಾಂಕ್ ಮಹಡಿಯಲ್ಲಿ ನೀಡಲು ತೀರ್ಮಾನಿಸಲಾಗಿದೆ.[ಛಾಯಾಚಿತ್ರ ಸಂಪಾದನೆಯಿಂದ ವೃತ್ತಿ ಜೀವನ ರೂಪಣೆ]

ಈ ಕಾರ್ಯಗಾರವು 19 ರ ಬುಧವಾರ ಮಧ್ಯಾಹ್ನ1ರಿಂದ ಸಂಜೆ 6 ರವರೆಗೆ ನಡೆಯಲಿದ್ದು, ಸ್ಟಿಲ್ ಕ್ಯಾಮರ ಬಳಕೆ ಹಾಗೂ ಅಂತರಜಾಲ ಪ್ರಸಾರ ಮಾಧ್ಯಮದ ಬಳಕೆ ಕುರಿತಾಗಿ ನುರಿತ ತಜ್ಞರಾದ ರಿಜ್ವಾನ್ ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ಛಾಯಾಗ್ರಾಹಕರು ತಮ್ಮ ದಿನನಿತ್ಯ ಬಳಸುತ್ತಿರುವ ಕ್ಯಾಮರಾಗಳು ಮತ್ತು ಅವುಗಳ ಬಿಡಿ ಭಾಗಗಳ ಬಳಕೆ ಕುರಿತಾದ ಸಮಸ್ಯೆಗಳು ಹಾಗೂ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ.
ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಫೋಟೋ ಸ್ಟುಡಿಯೋಗೆ ಸಂಬಂಧಪಟ್ಟ 3 ವರ್ಷದ ತರಬೇತಿ ನೀಡಲಾಗುವುದು.ಇದರೊಂದಿಗೆ ವಿಡಿಯೋ ಚಿತ್ರೀಕರಣ, ಡಿಜಿಟಲ್ ಛಾಯಾಗ್ರಹಣ, ಚಲನಚಿತ್ರ ಸ್ಥಿರ ಚಿತ್ರಣ, ಮಾಡೆಲಿಂಗ್ ಫೋಟೋಗ್ರಫಿ, ಎಲೆಕ್ಟ್ರಾನಿಕ್ಸ್ ಮೀಡಿಯಾ ಕಂಪ್ಯೂಟರ್ ಫೋಟೋಶಾಪ್, ವಿಡಿಯೋ ಮಿಕ್ಸಿಂಗ್ ಗೆ ಸಂಬಂಧಿಸಿದಂತೆ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ ನೀಡಲಾಗುವುದು. ಅವಿದ್ಯಾವಂತರಿಗೆ ಫೋಟೋಆಲ್ಬಂಬೈಂಡಿಂಗ್ ನಲ್ಲಿ ತರಬೇತಿ ನೀಡಲಾಗುವುದು.
3 ವರ್ಷ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ 1ನೇ ವರ್ಷ 3,000 ರೂ, 2ನೇ ವರ್ಷ 4,500 ಮತ್ತು 3ನೇ ವರ್ಷ 6,000ರೂಗಳನ್ನು ಶಿಷ್ಯವೇತನವಾಗಿ ನೀಡಲಾಗುತ್ತದೆ. ಪರಸ್ಥಳದ ಪುರುಷ ಅಭ್ಯರ್ಥಿಗಳು ಸಂದರ್ಶನದಲ್ಲಿ ಆಯ್ಕೆಯಾದಲ್ಲಿ ಉಚಿತ ವಸತಿ ಸೌಕರ್ಯ ನೀಡಲಾಗುತ್ತದೆ.
ಸ್ವಯಂ ಉದ್ಯೋಗ ಮಾಡಲು ಶಕ್ತರಲ್ಲದವರಿಗೆ ತರಬೇತಿ ಬಳಿಕ ಕೆಲಸ ನೀಡಲಾಗುವುದು, ಸ್ವಯಂ ಉದ್ಯೋಗ ಮಾಡುವವರಿಗೆ ಮಾರ್ಗದರ್ಶನ ಮಾಡಲಾಗುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ನವವಿನ್ಯಾಸದ ಕ್ಯಾಮರಗಳ ಕುರಿತಾಗಿಯೂ ಮಾಹಿತಿ ಮತ್ತು ಸಲಹೆಗಳನ್ನು ನೀಡಲಿದ್ದು, ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಸಂಪರ್ಕಿಸಬಹುದು. ಮೊ.ಸಂಖ್ಯೆ-09845212903-7829222023












Click it and Unblock the Notifications