ಬೆಂಗಳೂರಿನ ನವಜಾತ ಶಿಶುಗಳಲ್ಲಿ MIS-C ಸಮಸ್ಯೆಯ ಮೊದಲ ಪ್ರಕರಣ ಪತ್ತೆ

ಬೆಂಗಳೂರು, ಜೂನ್ 01: ಕೊರೊನಾ ಸೋಂಕಿನ ಆತಂಕದ ನಡುವೆ ಬೆಂಗಳೂರಿನ ಎರಡು ನವಜಾತ ಶಿಶುಗಳಲ್ಲಿ ಬಹುಅಂಗಾಂಗ ಉರಿಯೂತ ಸಮಸ್ಯೆ (ಮಲ್ಟಿಸಿಸ್ಟಮ್ ಇನ್‌ಫ್ಲೇಮೇಟರಿ ಸಿಂಡ್ರೋಮ್ - Multisystem Inflammatory Syndrome) ಸಮಸ್ಯೆ ಕಂಡುಬಂದಿದೆ.

ಬೌರಿಂಗ್ ಹಾಗೂ ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಮಕ್ಕಳ ತಜ್ಞ, ಪ್ರೊ. ಚಿಕ್ಕನರಸ ರೆಡ್ಡಿ ಅವರು ಈ ಮಾಹಿತಿ ನೀಡಿದ್ದು, ಈ ಎರಡು ಶಿಶುಗಳಲ್ಲಿ ಮಲ್ಟಿಸಿಸ್ಟಮ್ ಇನ್‌ಫ್ಲೇಮೇಟರಿ ಸಿಂಡ್ರೋಮ್ ಕಂಡುಬಂದಿದ್ದು, ಇದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಶಿಶುಗಳು ಸ್ಪಂದಿಸುತ್ತಿವೆ ಎಂದು ತಿಳಿಸಿದ್ದಾರೆ.

ಕಳೆದ ಶನಿವಾರ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಇಬ್ಬರು ಕೊರೊನಾ ಸೋಂಕಿತ ಮಹಿಳೆಯರು ಈ ಮಕ್ಕಳಿಗೆ ಜನ್ಮ ನೀಡಿದ್ದರು. ಮಕ್ಕಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ವರದಿ ಬಂದಿದೆ.

Multi Inflammatory Syndrome In Two Newborns

ವೈದ್ಯಕೀಯ ಭಾಷೆಯಲ್ಲಿ ಈ ಮಲ್ಟಿಸಿಸ್ಟಮ್ ಇನ್ ಫ್ಲೆಮೇಟರಿ ಸಿಂಡ್ರೋಮ್ ಅನ್ನು MIS-C ಎಂದು ಕರೆಯಲಾಗುತ್ತದೆ. ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಂತೆ ಈ ಸಮಸ್ಯೆಯ ಬಹುಪಾಲು ಲಕ್ಷಣಗಳು ಇರುತ್ತವೆ. ಆದರೆ ಮಕ್ಕಳ ಪಾಲಿಗೆ ಈ ರೋಗ ಅತಿ ಅಪಾಯಕಾರಿ ಎನಿಸಿದೆ. MIS-C ಅಪಾಯ ಎದುರಿಸುತ್ತಿರುವ ಮಕ್ಕಳ ನರಕೋಶ ಮತ್ತು ಅಂಗಾಂಗಗಳಾದ ಹೃದಯ, ಶ್ವಾಸಕೋಶ, ರಕ್ತನಾಡಿ, ಕಿಡ್ನಿ, ಮೆದುಳು, ಚರ್ಮ ಹಾಗೂ ಕಣ್ಣುಗಳು ಊದುಕೊಳ್ಳುತ್ತವೆ.

MIS-C ಅನ್ನು ಇಂಥದ್ದೇ ರೋಗ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕೊರೊನಾ ಸೋಂಕಿಗೆ ಹೊಂದಿಕೊಳ್ಳುವಂತಹ ಲಕ್ಷಣಗಳಲ್ಲೇ MIS-C ಒಳಗೊಂಡಿರುತ್ತದೆ. ಸದ್ಯಕ್ಕೆ MIS-C ಸಮಸ್ಯೆ ಕುರಿತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಸಿಡಿಸಿ ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ.

Recommended Video

      Online Class ಬಗ್ಗೆ Modiಗೆ ನೇರ ದೂರು ನೀಡಿದ ಹುಡುಗಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+