MTR 100-year celebrations: ಎಂಟಿಆರ್ ಮುಡಿಗೆ ವಿಶ್ವ ದಾಖಲೆಯ ಕಿರೀಟ

ಬೆಂಗಳೂರು, ಮಾರ್ಚ್ 17: ತನ್ನ 100 ವರ್ಷಗಳ ಪ್ರಯಾಣದ ಸಂಭ್ರಮದಲ್ಲಿರುವ ಖ್ಯಾತ ಎಂಟಿಆರ್ (MTR) ಫುಡ್ಸ್ ಈಗ ಲೋರ್ಮನ್ ಕಿಚನ್ ಎಕ್ವಿಪ್‌ಮೆಂಟ್ಸ್ ಸಹಭಾಗಿತ್ವದಲ್ಲಿ ವಿಶೇಷವಾಗಿ ಗಿನ್ನಿಸ್ ದಾಖಲೆ ಬರೆದಿದೆ. ಹೌದು.. ಎಂಟಿಆರ್ ಒಂದಲ್ಲ ಎರಡಲ್ಲ ಬರೋಬ್ಬರಿ 123 ಅಡಿ ಉದ್ದದ ದೋಸೆ ತಯಾರಿಸಿದೆ.

ಬೊಮ್ಮಸಂದ್ರ ಫ್ಯಾಕ್ಟರಿಯಲ್ಲಿ ಈ ವಿಶ್ವ ದಾಖಲೆ ಬರೆದ ದೋಸೆಯನ್ನು ತಯಾರಿಸಲಾಗಿದ್ದು, ಎಂಟಿಆರ್ ಫುಡ್ಸ್‌ನ ಬ್ರ್ಯಾಂಡ್‌ ಆಗಿರುವ ಸಿಗ್ನೇಚರ್ ರೆಡ್ ರೈಸ್ ಬ್ಯಾಟರ್ ಅನ್ನು ಈ ವಿಶೇಷ ದೋಸೆಗೆ ಬಳಸಲಾಗಿದೆ. 75 ಬಾಣಸಿಗರ ತಂಡ ಈ 123 ಅಡಿಗಳ ಉದ್ದದ ದೋಸೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು.

MTR celebrates 100 years with a new Guinness World Records title

ಎಂಟಿಆರ್ ಪತ್ರಿಕಾ ಪ್ರಕಟಣೆ ಪ್ರಕಾರ, ಎಂಟಿಆರ್‌ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ಮಾರ್ಗದರ್ಶನದಲ್ಲಿ ಬೊಮ್ಮಸಂದ್ರದ ಎಂಟಿಆರ್ ಕಾರ್ಖಾನೆಯಲ್ಲಿ ಅನುಭವಿ ತಜ್ಞರು ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಒಳಗೊಂಡಿರುವ 75 ಬಾಣಸಿಗರ ತಂಡವು ಈ ದಾಖಲೆಯನ್ನು ಬರೆದಿದೆ. ಈ ಹಿಂದೆ ಲೋರ್ಮನ್ ಕಿಚನ್ ಎಕ್ಯೂಪ್ಮೆಂಟ್ಸ್ ಮತ್ತು ಎಂಟಿಆರ್ 54 ಅಡಿ ಅಳತೆಯ ಉದ್ದನೆಯ ದೋಸೆ ತಯಾರಿಸಿ ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

"ದೋಸೆ ಪ್ರಾರಂಭದಿಂದಲೂ ಎಂಟಿಆರ್ ಪರಂಪರೆಯ ಅವಿಭಾಜ್ಯ ಅಂಗ. ನಾವು ಅಗತ್ಯವಾಗಿ ಪಾಲಿಸಬೇಕಾದ ಉತ್ಪನ್ನಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತೀಯ ಮೂಲದಿಂದ ದೋಸೆ ಪ್ರಪಂಚದಾದ್ಯಂತ ಪ್ರೀತಿಯ ಖಾದ್ಯವಾಗಿದ್ದು, ಗಡಿಗಳನ್ನು ಮೀರಿದೆ. ದೋಸೆಯಿಂದ ವಿಶ್ವ ದಾಖಲೆಯನ್ನು ಬರೆಯುವ ನಮ್ಮ ಪ್ರಯತ್ನವು ಅದರ ಸಾರ್ವತ್ರಿಕತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಎಂಟಿಆರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಯ್ ಭಾಸಿನ್ ಹೇಳಿದ್ದಾರೆ.

MTR celebrates 100 years with a new Guinness World Records title

ಲೋರ್ಮನ್ ಕಿಚನ್ ಎಕ್ವಿಪ್‌ಮೆಂಟ್ಸ್ ವ್ಯವಸ್ಥಾಪಕ ನಿರ್ದೇಶಕ ಚಂದ್ರ ಮೌಳಿ ಮಾತನಾಡಿ, "ವಿಶ್ವದ ಅತಿ ಉದ್ದದ ಇಂಡಕ್ಷನ್ ಹಾಟ್ -ಪ್ಲೇಟ್ (ತವಾ) ತಯಾರಿಸುವ ಮೂಲಕ, ಸುಸ್ಥಿರ ಅಡುಗೆಯು ದೊಡ್ಡ ಅಡುಗೆ ಸಮುದಾಯಗಳಿಗೆ ವಿಸ್ತರಿಸಬಹುದು ಎಂಬುದನ್ನು ನಾವು ಕಂಡಿದ್ದೇವೆ.

ಈ ಸಾಧನೆಯು ಇಂಡಕ್ಷನ್-ಆಧಾರಿತ ಅಡುಗೆ ಸಲಕರಣೆಗಳ ದಕ್ಷತೆ, ಸಮರ್ಥನೀಯತೆ ಮತ್ತು ಪರಿಸರ ಸ್ನೇಹಪರತೆಯನ್ನು ಒತ್ತಿಹೇಳುತ್ತದೆ. ಅದೇ ಸಮಯದಲ್ಲಿ ಬಾಣಸಿಗರಿಗೆ ಸುರಕ್ಷಿತ ಪರಿಸರ ವ್ಯವಸ್ಥೆ ನೀಡುತ್ತದೆ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+