ಬೆಂಗಳೂರಲ್ಲಿ ಮಳೆಗೆ ಉರುಳಿದ್ದು 300 ಮರಗಳು: ಡಿಸಿಎಂ ಮಾಹಿತಿ

Recommended Video

      ಬೆಂಗಳೂರಿನಲ್ಲಿ ಧರೆಗುರುಳಿವೆ 300 ಮರಗಳು | ಜಿ ಪರಮೇಶ್ವರ್ ಹೇಳೋದೇನು? | Oneindia Kannada

      ಬೆಂಗಳೂರು, ಸೆ.25: ಬೆಂಗಳೂರಲ್ಲಿ ಎರಡೇ ದಿನಗಳಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗಿದೆ. ಈಗಾಗಲೇ ಸುಮಾರು ಈಗಾಗಲೇ ಸುಮಾರು 300 ಮರಗಳು ಧರೆಗುರುಳಿದ್ದು, ಶೀಘ್ರವೇ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.

      ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಮಾಹಿತಿ ನೀಡಲು ಪ್ರತ್ಯೇಕ ತಂಡ ರಚಿಸಲಾಗಿದೆ. ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ವಲಯವಾರು ತಂಡಗಳು‌ ಕೆಲಸ‌ ಮಾಡುತ್ತಿವೆ ಎಂದರು.

      More than 300 trees fell down in Bengaluru

      ರಸ್ತೆ ಗುಂಡಿ ಮುಚ್ಚಲು ಹೈಕೋರ್ಟ್ ಆದೇಶ‌ನೀಡಿದ್ದು, ಈ ಕೆಲಸವೂ ತ್ವರಿತವಾಗಿ ನಡೆಯುತ್ತಿದೆ. ಆದರೆ ಮಳೆಯಿಂದ ತೊಂದರೆಯಾಗುತ್ತಿದೆ. ರಾಜಕಾಲುವೆ ಒತ್ತುವರಿಗೆ ಕಠಿಣ ಕ್ರಮ‌ಕೈಗೊಂಡಿದ್ದು, ಸರ್ವೆ ಮಾಡಲು ಸೂಚನೆ ನೀಡಲಾಗಿದೆ. ಸರ್ವೆ ಮಾಡುವವರ ಕೊರತೆಯಿಂದ ಕಂದಾಯ ಇಲಾಖೆಯಿಂದ ತಾತ್ಕಾಲಿಕವಾಗಿ ಸರ್ವೆ ಮಾಡುವವರನ್ನು ನೇಮಕ‌ ಮಾಡಲಾಗಿದೆ ಎಂದರು.

      ಸೆಪ್ಟೆಂಬರ್ ನಲ್ಲಿ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ಕೂಡ ರೋಗ ಬಂದಿರುವ ಅಥವಾ ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಎಲ್ಲರ ಅಸಮಾಧಾನವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+