ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3.52 ಲಕ್ಷ ಬೋರ್‌ವೆಲ್ ಆರ್ಭಟ: ಕುಸಿಯುತ್ತಿದೆ ಅಂತರ್ಜಲದ ಮಟ್ಟ

|
Google Oneindia Kannada News

ಬೆಂಗಳೂರು, ಮಾರ್ಚ್ 24: ನಗರದಲ್ಲಿ ಎಲ್ಲೆಡೆ ನೋಡಿದರು ಬೋರ್‌ವೆಲ್ ನದ್ದೇ ಕಾರುಬಾರು, ಪ್ರತಿಯೊಂದು ಮನೆ, ಪ್ರತಿಯೊಂದು ಗಲ್ಲಿಯಲ್ಲೂ ಬೋರ್‌ವೆಲ್ ಅಗೆಯಲಾಗುತ್ತಿದ್ದು, ಅಂತರ್ಜಲ ಬತ್ತುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಖಾಸಗಿ ಬೋರ್‌ವೆಲ್ ಗಳ ಸಂಖ್ಯೆ ಇದೀಗ 3.61ಲಕ್ಷಕ್ಕೆ ಏರಿಕೆಯಾಗಿದೆ ಅದರಂತೆಯೇ ಕೆಲ ಪ್ರದೇಶದಲ್ಲಿ ಅಂತರ್ಜಲದ ಮಟ್ಟ 1119 ಅಡಿಗೆ ಕುಸಿದಿದೆ. ಕಳೆದ ಬಾರಿ ವಾಡಿಕೆಗಿಂತ 26 ಸೆ.ಮೀ ಹೆಚ್ಚುವರಿ ಮಳೆಯಾಗಿರುವ ಹೊರತಾಗಿಯೂ ನೀರಿನ ಮಟ್ಟ ಏರಿಕೆ ಆಗದಿರುವುದು ಆತಂಕದ ಸಂಗತಿಯಾಗಿದೆ.

ನೀರಿನ ಅಭಾವ: ಬೆಂಗಳೂರಿಗರು ಎಚ್ಚೆತ್ತುಕೊಳ್ಳುವುದು ಯಾವಾಗ?ನೀರಿನ ಅಭಾವ: ಬೆಂಗಳೂರಿಗರು ಎಚ್ಚೆತ್ತುಕೊಳ್ಳುವುದು ಯಾವಾಗ?

ನಗರಕ್ಕೆ ಪ್ರತಿದಿನ 1350 ಎಂಎಲ್ ಡಿ ಕಾವೇರಿ ನೀರು ಪೂರೈಕೆಯಾಗುತ್ತಿದ್ದರೆ, ಬೋರ್‌ ವೆಲ್ ಆಶ್ರಿತ ಪ್ರದೇಶಗಳಲ್ಲಿ ಅಂತರ್ಜಲದಿಂದ ಪ್ರತಿದಿನ 400 ದಶಲಕ್ಷ ಲೀಟರ್ ನೀರು ಹೊರ ತೆಗೆಯಲಾಗುತ್ತದೆ. ಭೂ ಒಡಲು ಬಗೆಯುತ್ತಿರುವ ವಿಚಾರದಲ್ಲಿ ಈಗಾಗಲೇ ಕೇಂದ್ರ ಅಂತರ್ಜಲ ಮಂಡಳಿ ಎಚ್ಚರಿಕೆ ನೀಡಿದ್ದರೂ ಸ್ಥಳೀಯ ಪ್ರಾಧಿಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ.

More than 3 lakh borewell haunting Bengaluru water table

ನಗರದಲ್ಲಿ ಬೋರ್‌ವೆಲ್ ಕೊರೆಸಲು ಜಲಮಮಡಳಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ವಿವಿ ಟವರ್‌ ನಲ್ಲಿರುವ ಜಿಲ್ಲಾ ಅಂತರ್ಜಲ ಕಚೇರಿಯಿಂದ ಅನುಮತಿ ನೀಡಲಾಗುತ್ತದೆ. ವಿಜ್ಞಾನಿಗಳು ಸ್ವತಃ ಪರಿಶೀಲಿಸಿ ಬೋರ್‌ ವೆಲ್ ಕೊರೆಯುವುದಕ್ಕೆ ಅನುಮತಿ ನೀಡುತ್ತರಾದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. 2016ರಲ್ಲಿ 3 ಲಕ್ಷವಿದ್ದ ಬೋರ್‌ವೆಲ್ ಗಳ ಸಂಖ್ಯೆ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ 3.61 ಲಕ್ಷಕ್ಕೆ ಹೆಚ್ಚಳಗೊಂಡಿದೆ.

ಅಂತರ್ಜಲ ಎಲ್ಲಿ ಎಷ್ಟು?: ಆನೇಕಲ್ ತಾಲೂಕು: ಆನೇಕಲ್-1,000, ಜಿಗಣಿ-918,ಬನ್ನೇರುಘಟ್ಟ-804, ಅತ್ತಿಬೆಲೆ-853, ಸರ್ಜಾಪುರ-1,197, ಚಂದಾಪುರ-902 ಅಡಿಗಳಷ್ಟಿದೆ. ಬೆಂಗಳೂರು ಉತ್ತರ: ಅಡಕೆಮಾರನಹಳ್ಳಿ-853, ಬ್ಯಾಡರಹಳ್ಳಿ-653, ತಿಮ್ಮೇನಹಳ್ಳಿ-705, ಹೈಕೋರ್ಟ್-492, ರಾಜಾನುಕುಂಟೆ-1,099, ಚಿಕ್ಕಬಾಣಾವರ-902, ಸೊಂಡೆಕೊಪ್ಪ-589, ತೋಟಗೆರೆ, ಯಲಹಂಕ-689ಅಡಿಯಷ್ಟು ಅಂತರ್ಜಲವಿದೆ.

ಬೆಂಗಳೂರು ದಕ್ಷಿಣ : ಬೇಗೂರು-705, ಮಾರೇನಹಳ್ಳಿ-804, ತಲಘಟ್ಟಪುರ-1,000, ಕೇತೋಹಳ್ಳಿ-853, ತಾವರೆಕೆರೆ-787 ಅಡಿ ಇದೆ ಇನ್ನು ಬೆಂಗಳೂರು ಪೂರ್ವದಲ್ಲಿ ಅವಲಹಳ್ಳಿ-787, ಮಂಡೂರು-804, ದೇವಬೀಸನಹಳ್ಳಿ-754, ಕೆ.ನಾರಾಯಣಪುರ -656 ಅಡಿಗಳಷ್ಟು ಅಂತರ್ಜಲದ ಪ್ರಮಾಣವಿದೆ.

English summary
Even though Bengaluru city engulfing 14 TMC feet of Cauvery water every year.More than 3.86 lakh borewells are absorbing underground water and water level dipped into more than 1199 feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X