ಕರ್ನಾಟಕದಲ್ಲಿ 1 ಲಕ್ಷ ಡೋಸ್ ಕೊರೊನಾವೈರಸ್ ಲಸಿಕೆ ಪೋಲು!

ಬೆಂಗಳೂರು, ಮೇ 29: ಕರ್ನಾಟಕದಲ್ಲಿ ಒಂದು ಕಡೆ ಕೊರೊನಾವೈರಸ್ ಲಸಿಕೆ ವಿತರಣೆ ಎಷ್ಟು ವೇಗವಾಗಿ ನಡೆಯುತ್ತಿದೆ. ಇನ್ನೊಂದು ಕಡೆಯಲ್ಲಿ ದಾಖಲೆ ಪ್ರಮಾಣದ ಕೊವಿಡ್-19 ಲಸಿಕೆಯು ಪೋಲಾಗಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ರಾಜ್ಯದಲ್ಲಿ ಈವರೆಗೂ ಒಂದು ಲಕ್ಷಕ್ಕಿಂತ ಅಧಿಕ ಡೋಸ್ ಕೊವಿಡ್-19 ಲಸಿಕೆಯು ವ್ಯರ್ಥವಾಗಿದೆ. ಅತಿಹೆಚ್ಚು ಲಸಿಕೆಯನ್ನು ಪೋಲು ಮಾಡಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬಾಗಲಕೋಟೆ ಅಗ್ರಸ್ಥಾನದಲ್ಲಿ ಇದ್ದರೆ ಹಾಸನ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಕರ್ನಾಟಕದಲ್ಲಿ ಜನವರಿ 16ರಿಂದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಶುರುವಾಗಿದೆ. ಜೂನ್ 25ರ ಅಂಕಿ-ಅಂಶಗಳ ಪ್ರಕಾರ, ಬಾಗಲಕೋಟೆ - 22,196 ಡೋಸ್, ಹಾಸನ - 17,028 ಡೋಸ್ ಲಸಿಕೆ ವ್ಯರ್ಥವಾಗಿದೆ.

ರಾಜ್ಯದ 20 ಜಿಲ್ಲೆಗಳಲ್ಲಿ ಕೊರೊನಾವೈರಸ್ ಲಸಿಕೆ ಪೋಲು

ರಾಜ್ಯದ 20 ಜಿಲ್ಲೆಗಳಲ್ಲಿ ಕೊರೊನಾವೈರಸ್ ಲಸಿಕೆ ಪೋಲು

ರಾಜ್ಯದ 20 ಜಿಲ್ಲೆಗಳಲ್ಲಿ 2.29ರಷ್ಟು ಕೊರೊನಾವೈರಸ್ ಲಸಿಕೆಯು ಪೋಲಾಗಿದ್ದು, ಉಳಿದ 10 ಜಿಲ್ಲೆಗಳಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಲಸಿಕೆಯನ್ನು ವಿತರಿಸಲಾಗಿದೆ. ಶಿವಮೊಗ್ಗ ಶೇ. -6, ಉಡುಪಿ ಶೇ. -5.57, ದಕ್ಷಿಣ ಕನ್ನಡ ಶೇ. - 4.71, ಧಾರವಾಡ ಶೇ. -4.25, ಹಾವೇರಿ ಶೇ. 4.16, ಉತ್ತರ ಕನ್ನಡ ಶೇ. - 3.65, ಚಿಕ್ಕಮಗಳೂರು ಶೇ. - 2.25, ಬೆಳಗಾವಿ ಶೇ. -1.72, ಕೊಡಗು ಶೇ. - 1.36, ಬೆಂಗಳೂರು ಶೇ. -1.29, ಮೈಸೂರು ಶೇ. -0.13ರಷ್ಟು ಲಸಿಕೆಯುನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ನೀಡಲಾಗಿದೆ.

ಕೊವಿಡ್-19 ಲಸಿಕೆ ವ್ಯರ್ಥವಾಗುವುದು ಯಾವಾಗ?

ಕೊವಿಡ್-19 ಲಸಿಕೆ ವ್ಯರ್ಥವಾಗುವುದು ಯಾವಾಗ?

11 ಎಂಎಲ್ ಲಸಿಕೆಯನ್ನು ಹೊಂದಿರುವ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಬಾಟಲಿಯನ್ನು 4 ಗಂಟೆಗಳವರೆಗೆ ತೆರೆದಿಡಬೇಕು. ಅಷ್ಟರೊಳಗೆ ಲಸಿಕೆಯನ್ನು ವಿತರಿಸದಿದ್ದರೆ ಅದು ವ್ಯರ್ಥವಾಗುತ್ತದೆ. ಒಂದು ಲಸಿಕೆಯ ಬಾಟಲಿಯಿಂದ ಕನಿಷ್ಠ 10 ಮಂದಿಗೆ ಲಸಿಕೆ ವಿತರಿಸಬಹುದಿತ್ತು. ಆರಂಭಿಕ ಹಂತದಲ್ಲಿ 10ಕ್ಕಿಂತಲೂ ಕಡಿಮೆ ಜನರಿಗೆ ಲಸಿಕೆ ನೀಡಿರುವುದು ವ್ಯರ್ಥವಾಗುವುದಕ್ಕೆ ಕಾರಣವಾಗಿದೆ. ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಗದಿಗಿಂತಗೂ ಹೆಚ್ಚು ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ.

"ಬಾಗಲಕೋಟೆ ಲಸಿಕೆ ವಿತರಣೆ ಬಗ್ಗೆ ತಪ್ಪು ತಪ್ಪು ಲೆಕ್ಕ"

ಬಾಗಲಕೋಟೆ ಜಿಲ್ಲೆಯಲ್ಲಿ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಎರಡೂ ಸೇರಿ ಗುಳೇದಗುಡ್ಡ ತಾಲೂಕಿಗೆ 54,800 ಡೋಸ್ ಲಸಿಕೆ ಪೂರೈಸಲಾಗಿದ್ದು, ಅಷ್ಟೂ ಲಸಿಕೆಯನ್ನು ಬಳಕೆ ಮಾಡಲಾಗಿದೆ. ಆದರೆ ಇಲಾಖೆ ಪೋರ್ಟಲ್ ನಲ್ಲಿ 34,300 ಡೋಸ್ ಲಸಿಕೆಯನ್ನು ಮಾತ್ರ ವಿತರಿಸುವ ಬಗ್ಗೆ ತಪ್ಪಾಗಿ ಮಾಹಿತಿ ನೀಡಲಾಗಿದೆ. ಆ ಲೆಕ್ಕದ ಪ್ರಕಾರ, 20 ಸಾವಿರಕ್ಕೂ ಹೆಚ್ಚು ಡೋಸ್ ಲಸಿಕೆಯು ವ್ಯರ್ಥವಾಗುತ್ತದೆ. ಈ ಬಗ್ಗೆ ತಪ್ಪು ಮಾಹಿತಿ ನೀಡಿದವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಂತ ದೇಸಾಯಿ ಹೇಳಿದ್ದಾರೆ.

ಯಾವ ಹಂತದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ?

ಯಾವ ಹಂತದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ?

ರಾಜ್ಯದಲ್ಲಿ ಜೂನ್ 28ರ ಅಂಕಿ-ಅಂಶಗಳ ಪ್ರಕಾರ, 58,26,150 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ಮೊದಲ ಡೋಸ್ ನೀಡಲಾಗಿದ್ದು, 74,625 ಜನರಿಗೆ 2ನೇ ಡೋಸ್ ಲಸಿಕೆ ವಿತರಿಸಲಾಗಿದೆ. ರಾಜ್ಯದಲ್ಲಿ ಈವರೆಗೂ 7,49,217 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 4,98,336 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 8,19,659 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 2,48,130 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,07,79,466 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 27,30,180 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+