ಬೆಂಗಳೂರಿನಲ್ಲಿ ಯಾವ ಸಮಯದಲ್ಲಿ ರಸ್ತೆ ಅಪಘಾತಗಳು ಹೆಚ್ಚು?
ಬೆಂಗಳೂರು, ಡಿಸೆಂಬರ್ 25: ಬೆಂಗಳೂರಿನಲ್ಲಿ ಸಂಜೆಯ ಸಮಯದಲ್ಲಿ ರಸ್ತೆ ಅಪಘಾತಗಳು ಸಂಭವಿಸುವುದು ಹೆಚ್ಚು ಎನ್ನುವ ವರದಿ ಬಂದಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಕುರಿತು ಹೆಚ್ಚೇನೂ ಹೇಳುವ ಅಗತ್ಯವೇ ಇಲ್ಲ. ನಗರದಲ್ಲಿ ಸಂಜೆಯ ವೇಳೆ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ.
ರಸ್ತೆ ಅಪಘಾತಕ್ಕೆ ಒಳಗಾಗುತ್ತಿರುವವರಲ್ಲಿ 21- 29 ವಯೋಮಾನದವರು ಹಾಗೂ 40ಕ್ಕೂ ಮೇಲ್ಪಟ್ಟ ಸವಾರರು ಜಾಸ್ತಿ ಎಂಬುದು ತಿಳಿದುಬಂದಿದೆ. ಅಪಘಾತಕ್ಕೆ ತುತ್ತಾಗುತ್ತಿರುವವರಲ್ಲಿ 40- 59ರ ವಯೋಮಾನದ ಮಹಿಳೆಯರು ಹೆಚ್ಚಿದ್ದಾರೆ.
ಕಳೆದ 7 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತ ಸಂಬಂಧ ದಾಖಲಾದ ಎಫ್ ಐ ಆರ್ ಗಳನ್ನು ಅಧ್ಯಯನಕೊಳಪಡಿಸಿದಾಗ ಈ ಮಾಹಿತಿ ಲಭ್ಯವಾಗಿದೆ.

ಶೇ.80ರಷ್ಟು ಮಂದಿ ಬೈಕ್‌ಗಳನ್ನು ಬಿಟ್ಟು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆ ಇದರಿಂದಾಗಿ ಅಪಘಾತ ಪ್ರಕರಣಗಳು ಸ್ವಲ್ಪ ಕಡಿಮೆಯಾಗಿದೆ.
ದೇಶದಲ್ಲಿ 2020ರಲ್ಲಿ ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಮರಣ ಹೊಂದಿದವರ ಸಂಖ್ಯೆ 1.20 ಲಕ್ಷ ಆಗಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಕೊರೊನಾ ಲಾಕ್‌ಡೌನ್ ಹೊರತಾಗಿಯೂ ಪ್ರತಿದಿನ ಸರಾಸರಿ 328 ಜನರು ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.
ರಸ್ತೆ ಅಪಘಾತಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಸುಮಾರು 3.92 ಮಂದಿ ಸಾವನ್ನಪ್ಪಿದ್ದಾರೆ ಎಂಬ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2020ರ ತನ್ನ ವಾರ್ಷಿಕ 'ಕ್ರೈಂ ಇಂಡಿಯಾ' ವರದಿಯಲ್ಲಿ ಬಹಿರಂಗಪಡಿಸಿದೆ.
2020ರಲ್ಲಿ ಅಪಘಾತದಲ್ಲಿ 1.20 ಲಕ್ಷ ಸಾವುಗಳು ಸಂಭವಿಸಿವೆ. 2019ರಲ್ಲಿ 1.39 ಲಕ್ಷ ಹಾಗೂ 2018ರಲ್ಲಿ 1.35 ಲಕ್ಷ ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂಬುದನ್ನು ವರದಿ ಹೇಳಿದೆ. 2018ರ ವರ್ಷ ದೇಶದಲ್ಲಿ 1.35 ಲಕ್ಷ ಹಿಟ್ ಅಂಡ್ ರನ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಸಿಆರ್‌ಬಿ ವರದಿ ನೀಡಿದೆ.
2020ರಲ್ಲಿ 41,196 ಹಿಟ್ ಅಂಡ್ ರನ್ ಪ್ರಕರಣಗಳಿದ್ದರೆ, 2019ರಲ್ಲಿ 47,504, 2018ರಲ್ಲಿ 47,504 ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿಸಿದೆ. ರಸ್ತೆ ಅಪಘಾತ: ಗಾಯಾಳುವಿಗೆ 1.25 ಲಕ್ಷ ರೂ. ಹಣ ಹಿಂದಿರುಗಿಸಿದ ಅಗ್ನಿಶಾಮಕ ಸಿಬ್ಬಂದಿರಸ್ತೆ ಅಪಘಾತ: ಗಾಯಾಳುವಿಗೆ 1.25 ಲಕ್ಷ ರೂ. ಹಣ ಹಿಂದಿರುಗಿಸಿದ ಅಗ್ನಿಶಾಮಕ ಸಿಬ್ಬಂದಿ
ಸರಾಸರಿ 112 ಹಿಟ್ ಅಂಡ್ ರನ್ ಪ್ರಕರಣಗಳು ದೇಶಾದ್ಯಂತ ದಾಖಲಾಗುತ್ತಿವೆ ಎಂದು ವರದಿ ತಿಳಿಸಿದೆ. ಸಾರ್ವಜನಿಕವಾಗಿ ನಿರ್ಲಕ್ಷ್ಯದ ಚಾಲನೆಯಿಂದ ಹಾನಿ ಮಾಡಿದ ಪ್ರಕರಣಗಳು 2020ರಲ್ಲಿ 1.30 ಲಕ್ಷ ಇವೆ. 2019ರಲ್ಲಿ 1.60 ಲಕ್ಷ, 2018ರಲ್ಲಿ 1.66 ಲಕ್ಷ ಇದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಕರಣಗಳು ಕ್ರಮವಾರ 85,920, 1.12 ಲಕ್ಷ ಹಾಗೂ 1.08 ಲಕ್ಷ ಇದೆ ಎಂದು ಮಾಹಿತಿ ನೀಡಿದೆ.
ಈ ಮಧ್ಯೆ ರೈಲು ಅಪಘಾತಗಳಿಗೆ ಸಂಬಂಧಿಸಿದಂತೆ, ನಿರ್ಲಕ್ಷ್ಯದಿಂದ ಸಂಭವಿಸಿದ ಅವಘಡಗಳ ಸಂಖ್ಯೆ 52 ಆಗಿದೆ. 2019ರಲ್ಲಿ ಈ ಸಂಖ್ಯೆ 55 ಹಾಗೂ 2018ರಲ್ಲಿ ಈ ಸಂಖ್ಯೆ 35 ಇದ್ದವು. 2020ರಲ್ಲಿ ಭಾರತದಲ್ಲಿ 133 ಮಂದಿ ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವ ವರದಿಯಾಗಿದೆ. ಈ ಸಂಖ್ಯೆ 2019ರಲ್ಲಿ 201, 2018ರಲ್ಲಿ 218 ಆಗಿತ್ತು ಎಂದು NCRB ಮಾಹಿತಿ ತೋರಿದೆ.
Recommended Video
ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವಿನ ಪ್ರಕರಣಗಳು 51 ಆಗಿದೆ. 2019ರಲ್ಲಿ 147, 2018ರಲ್ಲಿ 40 ಪ್ರಕರಣಗಳು ವರದಿಯಾಗಿವೆ. ಇತರೆ ನಿರ್ಲಕ್ಷ್ಯಗಳಿಗೆ ಸಂಬಂಧಿಸಿದ ಮರಣ ಪ್ರಕರಣಗಳಲ್ಲಿ 6367 ಪ್ರಕರಣಗಳು 2020ರಲ್ಲಿ ದಾಖಲಾಗಿವೆ. 2019ರಲ್ಲಿ 7912, 2018ರಲ್ಲಿ 8687 ಪ್ರಕರಣಗಳು ವರದಿಯಾಗಿದ್ದವು.












Click it and Unblock the Notifications