ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆತ್ ನೋಟ್- ಸತ್ತರೂ ನಿನ್ನ ಜೊತೆಗೇ ಇರ್ತೇನೆ ಅಮ್ಮ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 3: ಯಲಹಂಕ ಸಮೀಪದ ನ್ಯೂ ಟೌನ್ ಪ್ರದೇಶದಲ್ಲಿ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಮೋನಿಷಾ ಸಾವಿಗೆ ಮೊದಲು ಡೆತ್ ನೋಟ್ ಬರೆದಿಟ್ಟಿದ್ದಳು. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ತಾಯಿಯಲ್ಲಿ ಕ್ಷಮೆ ಕೇಳಿದ್ದಾಳೆ.

ಚಿಕ್ಕ ಮಗು ಬರೆದ ಡೆತ್ ನೋಟ್ ಅಸ್ಪಷ್ಟವಾಗಿದೆ. "ನನ್ನ ಕ್ಷಮಿಸು, ನಿನ್ನನ್ನು ಬಿಟ್ಟು ಹೋಗುತ್ತಿದ್ದೇನೆ. ನಾನು ಸತ್ತು ಹೋದರೂ ನಿನ್ನ ಜೊತೆಗೇ ಇರುತ್ತೇನೆ. ಐ ಲವ್ ಯೂ ಅಮ್ಮ, ಟೂ ಮಚ್" ಇವಿಷ್ಟು ವಿಷಯ ಆಕೆಯ ಪತ್ರದಿಂದ ತಿಳಿದುಬರುತ್ತಿರುವ ವಿಷಯ. [ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು]

hang

ಆ ಮನೆಯಲ್ಲಿದ್ದದ್ದು ತಾಯಿ ಹಾಗೂ ಮಗಳು ಇಬ್ಬರೇ. ಆಂದ್ರ ಪ್ರದೇಶ ಮೂಲದ ಇವರು ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಆದರೆ, ತಂದೆ 5 ವರ್ಷಗಳ ಹಿಂದೆ ಅಕಾಲಿಕ ಮರಣ ಹೊಂದಿದ್ದರು. ಚಿಕ್ಕ ಮಗಳನ್ನು ಸಾಕುವ ಜವಾಬ್ದಾರಿ ತಾಯಿ ಮೇಲೇ ಬಿದ್ದಿತ್ತು. [ನಂದಿತಾ ಸಾವಿನ ಪ್ರಕರಣ ಸಿಐಡಿ ತನಿಖೆಗೆ]

ಒಂಟಿಯಾಗಿದ್ದ ಬಾಲಕಿ: ತಾಯಿ ಸಂಪೂರ್ಣಮ್ಮ ಗಾರ್ಮೆಂಟ್‌ನಲ್ಲಿ ಕೆಲಸಕ್ಕೆಂದು ಹೊರಹೋಗಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಒಂಟಿಯಾಗಿಯೇ ಇದ್ದ ಬಾಲಕಿ ಮೋನಿಷಾ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. [ಅಮ್ಮಾ ನಿನ್ನನ್ನು ಒಂದು ಸಾರಿ ತಬ್ಬಿಕೊಳ್ಳಲಾ]

ಹಿಂದಿನ ವರದಿ...

ಯಲಹಂಕ ಸಮೀಪದ ನ್ಯೂ ಟೌನ್ ಪ್ರದೇಶದ ಮನೆಯೊಂದರಲ್ಲಿ ಬಾಲಕಿಯೋರ್ವಳು ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ರಾಜ್ಯಾದ್ಯಂತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ನಗರದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಸನ್‌ಶೈನ್ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿನಿ. ಬಾಲಕಿ ಮೋನಿಶಾ ಶಾಲೆಗೆ ರಜೆ ಹಾಕಿದ್ದಕ್ಕೆ ಪಾಲಕರು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.

ಆತ್ಮಹತ್ಯೆಗೆ ಮೊದಲು ಮೊನಿಷಾ ಪತ್ರ ಬರೆದಿದ್ದು, ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ತಿಳಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ: ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್, ಬಾಲಕಿ ಬರೆದಿರುವ ಪತ್ರದಲ್ಲಿ ಯಾರನ್ನೂ ದೂಷಿಸಿಲ್ಲ. ಆಕೆಯ ಪಾಲಕರು ಆಘಾತಕ್ಕೊಳಗಾಗಿದ್ದಾರೆ. ಶಾಲೆಯ ಕುರಿತು ಪತ್ರದಲ್ಲಿ ಬರೆದಿಲ್ಲ. ಆದರೂ, ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

English summary
Monisha who committed suicide on Tuesday has written a letter to her mother asking pardon. She has written "I love you too much" at last in the letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X