ಮೋದಿ ಪ್ರಮಾಣವಚನ: ಬೆಂಗಳೂರಿನಲ್ಲಿ ಹೈ ಅಲರ್ಟ್

ಬೆಂಗಳೂರು, ಮೇ.26:ನರೇಂದ್ರ ಮೋದಿ ಪ್ರತಿಜ್ಞಾವಿಧಿ ಸಮಾರಂಭದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ನಗರದಲ್ಲಿ ಇಂದು ಮತ್ತು ನಾಳೆ ಹೈ ಅಲರ್ಟ್‌ ಘೋಷಿಸಲಾಗಿದ್ದು, ಬಿಜೆಪಿ ಕಚೇರಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.

ಮೇ.26 ಸೋಮವಾರ ಮತ್ತು ಮಂಗಳವಾರ ನಗರದ ವಿವಿಧ ಕಡೆಗಳಲ್ಲಿ ಬಿಜೆಪಿ ವಿಜಯೋತ್ಸವನ್ನು ಆಚರಿಸಲಿರುವ ಹಿನ್ನಲೆಯಲ್ಲಿ ಕಾರ್ಯ‌ಕ್ರಮಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

high alert in Bangalore
ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಇಂಡಿಯಾನ್ ಮುಜಾಹಿದ್ದೀನ್, ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್-ಇ-ತೊಯ್ಬಾ ಸೇರಿದಂತೆ ವಿವಿಧ ಸಂಘಟನೆಗಳ ಬೆದರಿಕೆ ಹಿನ್ನೆಲೆಯಲ್ಲಿ ಹಿಂದೆಂದೂ ಕಾಣದಷ್ಟು ಭದ್ರತೆಯನ್ನು ದೆಹಲಿ ಸೇರಿದಂತೆ ರಾಷ್ಟ್ರದ ಇತರ ಸ್ಥಳಗಳಲ್ಲಿ ನೀಡಲಾಗುತ್ತಿದೆ.[ಮೋದಿ ಪದಗ್ರಹಣ ಅಭೂತಪೂರ್ವ ಸಿದ್ಧತೆ ಹೇಗಿದೆ?]

ಜಮ್ಮು ಕಾಶ್ಮೀರದಲ್ಲೂ ಹೈ ಅಲರ್ಟ್‌ ಘೋಷಿಸಲಾಗಿದ್ದು, ಭಾರತ ಪಾಕಿಸ್ತಾನ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಲಾಗಿದೆ. ಅಷ್ಟೇ ಅಲ್ಲದೇ ಬಿಜೆಪಿಗೆ ಹೆಚ್ಚು ಮತ ಬಿದ್ದ ಜಮ್ಮು, ಸಾಂಬಾ ಮತ್ತು ಕತುವಾ ಜಿಲ್ಲೆಗಳಲ್ಲಿ ಸೂಸೈಡ್‌ ಬಾಂಬರ್‌‌ಗಳಿಂದ‌ ದಾಳಿಯಾಗುವ ಸಾಧ್ಯತೆ ಇದ್ದು ಜಮ್ಮು ಸರ್ಕಾರಕ್ಕೆ ಗೃಹ ಇಲಾಖೆ ಈಗಾಗಲೇ ಎಚ್ಚರದಲ್ಲಿರುವಂತೆ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+