Mobile Post Office: ಬೆಂಗಳೂರಿನಲ್ಲಿ ಮೊಬೈಲ್ ಪೋಸ್ಟ್ ಆಫೀಸ್ ಸೇವೆ: ಉಚಿತ ಪಾರ್ಸೆಲ್ ಪಿಕಪ್
ಬೆಂಗಳೂರಿನಲ್ಲಿ ಇನ್ನು ಮೊಬೈಲ್ ಪೋಸ್ಟ್ ಆಫೀಸ್ ಸೇವೆ ಸಿಗಲಿದೆ. ನಿಮ್ಮ ಪಾರ್ಸಲ್‌ಗಳನ್ನು ನೀವಿರುವಲ್ಲಿಯೇ ಬಂದು ಪಿಕಪ್ ಮಾಡಲಿದೆ. ಪೋಸ್ಟ್ ಮಾಸ್ಟರ್ ಮುಖ್ಯ ಜನರಲ್ ರಾಜೇಂದ್ರ ಎಸ್ ಕುಮಾರ್ ಇಂದು ಮೊಬೈಲ್ ಪೋಸ್ಟಲ್ ಸೇವೆಗೆ ಚಾಲನೆ ನೀಡಿದರು.
ಅಬ್ಬಿಗೆರೆ ಕೈಗಾರಿಕಾ ಪ್ರದೇಶದಲ್ಲಿ ಅವರು ಈ ಮೊಬೈಲ್ ಪೋಸ್ಟಲ್ ಸೇವೆಗೆ ಚಾಲನೆ ನೀಡಿದರು. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೂಡ ಈ ಸೇವೆ ಸಿಗಲಿದೆ. ಪಾರ್ಸಲ್‌ಗಳನ್ನು ಪಿಕಪ್ ಮಾಡಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಅಂಚೆ ಇಲಾಖೆ ತಿಳಿಸಿದೆ.

ಈ ಅಂಚೆ ವಾಹನ ಪ್ರತಿದಿನ ಬೆಳಗ್ಗೆ 11.30 ಕ್ಕೆ ಅಬ್ಬಿಗೆರೆ ಪ್ರದೇಶದಕ್ಕೆ ಬರಲಿದೆ, ಮಧ್ಯಾಹ್ನ 2.30ರವರೆಗೆ ಇದೇ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲಿದೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಬಳಿಕ ಅಂಚೆ ವಾಹನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪಾರ್ಸೆಲ್‌ಗಳನ್ನು ಪಿಕ್ ಮಾಡಲಿದೆ. ಎರಡೂ ಪ್ರದೇಶಗಳ ನಡುವಿನ ಮಾರ್ಗದಲ್ಲಿ ಕೂಡ ನೀವು ಪಾರ್ಸೆಲ್‌ಗಳನ್ನು ಕಳುಹಿಸಲು ಬುಕ್ ಮಾಡಬಹುದಾಗಿದೆ. 9480884078 ಈ ನಂಬರ್ ಗೆ ಕರೆ ಮಾಡುವ ಮೂಲಕ ನೀವು ಪಾರ್ಸೆಲ್‌ಗಳನ್ನು ಕಳುಹಿಸಲು ಬುಕ್ ಮಾಡಬಹುದು.
CPMG,Karnataka Circle flagged-off the ‘Parcel booking on wheels’ service on 6.6.23 at Abbigere Indl Area in the presence of PMG-Bengaluru ; President, V.P, Secty of Peenya Industrial Association; Senior Officers of DOP and local traders from Peenya Indl Area#MobilePostOffice pic.twitter.com/DEzqHp9glY
— Karnataka Postal Circle (@CPMGKARNATAKA) June 7, 2023
ಮುಂದಿನ ದಿನಗಳಲ್ಲಿ ಮಣಿಪಾಲ್ ಸೆಂಟ್, ಬಿಕಾಸಿಪುರ ಕೈಗಾರಿಕಾ ಪ್ರದೇಶ, ಮಹದೇವಪುರ ಕೈಗಾರಿಕಾ ಪ್ರದೇಶದಲ್ಲಿ ಕೂಡ ಈ ಸೇವೆಯನ್ನು ವಿಸ್ತರಿಸುವ ಯೋಜನೆ ಮಾಡಲಾಗಿದೆ. ಯಾರಿಗೆ ತಮ್ಮ ವ್ಯಾಪ್ತಿಯಲ್ಲಿ ಈ ಸೇವೆ ಬೇಕಾಗಿದೆಯೋ ಅವರು [email protected] ಈ ವಿಳಾಸಕ್ಕೆ ಮೇಲ್ ಮಾಡಬಹುದಾಗಿದೆ. ಆದರೆ, ಸೇವೆ ಇಲ್ಲದ ಪ್ರದೇಶಗಳಲ್ಲಿ ಪಾರ್ಸೆಲ್ ಪಿಕಪ್ ಮಾಡಲು ಶುಲ್ಕ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
What new in this? They had doorstep parcel pickup service long ago. Our company was using it back in 2015 at JP Nagar office location.
— Sandeep Hegde (@SandeepHegde) June 7, 2023
ಮೊದಲಿನಿಂದಲೂ ಈ ಸೇವೆ ಇತ್ತು ಎಂದ ಟ್ವಿಟರ್ ಬಳಕೆದಾರರು
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥೆಯ ಉದ್ಯೋಗಿ ಎಸ್. ಲಲಿತ ಈ ಪೋಸ್ಟಲ್ ಸೇವೆ ಉದ್ಘಾಟನೆಯ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಟ್ವಿಟರ್ ಬಳಕೆದಾರರಾದ ಸಂದೀಪ್ ಹೆಗಡೆ ಪ್ರತಿಕ್ರಿಯೆ ನೀಡಿದ್ದು, ಇದರಲ್ಲಿ ಹೊಸದೇನಿದೆ? ಪೋಸ್ಟ್ ಆಫೀಸ್‌ನವರು ಬಹಳ ಹಿಂದೆಯೇ ಈ ರೀತಿ ಮನೆಯಿಂದ ಪಾರ್ಸಲ್‌ಗಳನ್ನು ಪಿಕಪ್ ಮಾಡುತ್ತಿದ್ದರು, ನಮ್ಮ ಕಂಪನಿ 2015ರಲ್ಲೇ ಈ ಸೇವೆಯನ್ನು ಬಳಸಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.
ನೀವೇನಾದರೂ ಅಬ್ಬಿಗೆರೆ ಅಥವಾ ಪೀಣ್ಯ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರೆ, ನೀವು ಈ ಮೊಬೈಲ್ ಪೋಸ್ಟಲ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications