ಬೆಂಗಳೂರಲ್ಲಿ ಪೊಲೀಸರ ಪತ್ನಿಗೆ ಹಾಡುಹಗಲೇ ಗನ್ ತೋರಿಸಿದ ಭೂಪ!

ಬೆಂಗಳೂರು, ಡಿಸೆಂಬರ್ 8: ನಾಗರಿಕರು ಹಾಗಿರಲಿ ಪೊಲೀಸರ ಪತ್ನಿಯರು ಬೆಂಗಳೂರಲ್ಲಿ ಸೇಫ್‌ ಆಗಿಲ್ಲ ಎಂದು ಕೆಲವು ಘಟನೆಗಳನ್ನು ನೋಡಿದ ಬಳಿಕ ತಿಳಿಯುತ್ತದೆ.

ಚಾಮರಾಜಪೇಟೆ 3 ನೇ ಮುಖ್ಯರಸ್ತೆಯಲ್ಇ ಸ್ನೇಹಿತೆಯರ ಜೊತೆ ನಿಂತಿದ್ದ ಪೊಲೀಸ್ ಪೇದೆಯೊಬ್ಬರ ಪತ್ನಿಗೆ ಅಪರಿಚಿತ ವ್ಯಕ್ತಿಯೊಬ್ಬ ಗನ್ ತೋರಿಸಿ ಬೆದರಿಸಿದ್ದಾನೆ.ಉಪ್ಪಾರಪೇಟೆ ಪೊಲೀಸ್ವ ಠಾಣೆ ಪೇದೆ ಸಚಿನ್ ಎಂಬುವವರ ಪತ್ನಿ ಸುಶೀಲಾ ಈ ಕುರಿತು ವಿವಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಚಾಮರಾಜಪೇಟೆಯ ಬೋಸ್ಕೋ ಸಂಸ್ಥೆ ನಡೆಸುತ್ತಿರುವ ಬ್ಯೂಟಿಷಿಯನ್ ತರಬೇತಿಗೆ ಶುಕ್ರವಾರ ಮಧ್ಯಾಹ್ನ ಸುಶೀಲಾ ಅವರ ಜೊತೆ ಹೋಗಿದ್ದೆ, ಕ್ಲಾಸ್ ಮುಗಿಸಿ ಮನೆಗೆ ಬರುವ ವೇಳೆ ಆಟೋ ಹಿಡಿಯಲೆಂದು ಅಲ್ಲೇ ಇರುವ ವೃತ್ತದ ಬಳಿ ನಿಂತಿದ್ದೆವು. ಆ ಸಮಯದಲ್ಲಿ ಪ್ಯಾಂಟ್ ನಲ್ಲಿ ಹಿಂದೆ ಬಚ್ಚಿಟ್ಟುಕೊಂಡಿದ್ದ ಗನ್ ತೆಗೆದು, ಸುಶೀಲಾ ಅವರನ್ನು ಬೆದರಿಸಿ, ಭೀತಿಗೊಂಡ ಅವರು ಅಲ್ಲಿಂದ ಹೊರಟು ಹೋದರು.

Miscreants threats police wife in Chamarajpet

ಬಳಿಕ ಆ ವ್ಯಕ್ತಿ, ಸಂಸ್ಕೃತ ವಿವಿ ಕಡೆಗೆ ವಾಹನವೊಂದರಲ್ಲಿ ಹೋದ ಎಂದು ಸುಶೀಲಾ ಅವರ ಜೊತೆ ಇದ್ದವರು ತಿಳಿಸಿದ್ದಾರೆ. ಅಲ್ಲಿ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ನೋಡಿ ತನಿಖೆ ನಡೆಸುತ್ತಿದ್ದಾರೆ. ಆದರೂ ಹಾಡುಹಗಲೇ ಮಹಿಳೆಯೊಬ್ಬರಿಗೆ ವ್ಯಕ್ತಿ ಗನ್ ತೋರಿಸುತ್ತಾನೆ ಎಂದರೆ ನಮ್ಮ ಸಮಾಜ ಎಲ್ಲಿಯವರೆಗೆ ಮುಂದುವರೆದಿದೆ ಎಂದು ತಿಳಿದುಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+