ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಬೆಂಗಳೂರು, ಜು.6: ಆಹಾರ ಡೆಲಿವರಿಗೆ ಸ್ವಿಗ್ಗಿ ಉತ್ತಮ ಅಪ್ಲಿಕೇಷನ್ ಆಗಿದೆ, ಯಾವ ತಿಂಡಿ ತಿನಿಸುಗಳನ್ನು ಆರ್ಡರ್ ಮಾಡಿದರೂ ಆರ್ಡರ್ ಸ್ವಲ್ಪ ಹೊತ್ತಿನಲ್ಲೇ ಬಂದು ಕೈಸೇರುತ್ತದೆ ಇದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ ಫೇಕ್ ಫುಡ್ ಆರ್ಡರ್‌ಗಳನ್ನು ಮಾಡಿ, ನಂತರ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ. ಫುಡ್ ಡೆಲಿವರಿಗೆ ಹೋಗಿದ್ದ ಸ್ವಿಗ್ಗಿ ಡೆಲಿವರಿ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗುರುವಾರ ತಡರಾತ್ರಿ ಮೆಜೆಸ್ಟಿಕ್ ಬಳಿಯ ಶೇಷಾದ್ರಿಪುರಂನಲ್ಲಿ ಘಟನೆ ನಡೆದಿದೆ. ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಲ ಮಾಡುತ್ತಿದ್ದ ಮುಬಾರಕ್ ಮತ್ತು ಆತನ ಸ್ನೇಹಿತನ ಮೇಲೆ ಆರ್ಡರ್ ಮಾಡಿದ್ದ ತಿನಿಸು ಡೆಲಿವರಿ ಮಾಡುವ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ.

ಮುಬಾರಕ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಹಲ್ಲೆಯಲ್ಲಿ ಮುಬಾರಕ್ ಅವರಿಗೆ ಗಂಭೀರ ಗಾಯಗಳಾಗಿವೆ. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications