ಮಿರಾಜ್ ಯದ್ಧ ವಿಮಾನ ಪತನಕ್ಕೆ ಪೈಲೆಟ್ ಕಾರಣರಲ್ಲ
ಬೆಂಗಳೂರು, ಮಾರ್ಚ್ 20 : ಬೆಂಗಳೂರಿನ ಎಚ್‌ಎಎಲ್ ಸಮೀಪ ಮಿರಾಜ್ ಯುದ್ಧ ವಿಮಾನ ಸ್ಫೋಟಗೊಂಡಿದ್ದು ಪೈಲೆಟ್‌ಗಳ ತಪ್ಪಿನಿಂದ ಅಲ್ಲ ಎಂದು ತಿಳಿದುಬಂದಿದೆ. ವಿಮಾನದ ಬ್ಲಾಕ್ ಬಾಕ್ಸ್ ಪರಿಶೀಲನೆ ಬಳಿಕ ಈ ಮಾಹಿತಿ ತಿಳಿದುಬಂದಿದೆ.
ಫೆಬ್ರವರಿ 1ರಂದು ಎಚ್‌ಎಎಲ್ ಸಮೀಪ ಮಿರಾಜ್ ಯುದ್ಧ ವಿಮಾನ ಪತನಗೊಂಡಿತ್ತು. ಇಬ್ಬರು ಪೈಲೆಟ್‌ಗಳು ಈ ಅಪಘಾತದಲ್ಲಿ ಮೃತಪಟ್ಟಿದ್ದರು. ಬ್ಲಾಕ್ ಬಾಕ್ಸ್ ಪ್ರಾಥಮಿಕ ಪರಿಶೀಲನೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪತನಗೊಂಡ ವಿಮಾನದ ಬ್ಲಾಕ್ ಬಾಕ್ಸ್ ಅನ್ನು ಫ್ರಾನ್ಸ್‌ಗೆ ರವಾನೆ ಮಾಡಲಾಗಿತ್ತು. ಅದನ್ನು ಪರಿಶೀಲನೆ ನಡೆಸಿದ ಬಳಿಕ ತಾಂತ್ರಿಕ ಕಾರಣದಿಂದ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ವರ್ಷಗಳಲ್ಲಿ 30 ಭಾರತೀಯ ವಾಯುಪಡೆ ವಿಮಾನಗಳು ಪತನಗೊಂಡಿದ್ದು 41 ಪೈಲೆಟ್‌ಗಳು ಮೃತಪಟ್ಟಿದ್ದಾರೆ. 2019ರಲ್ಲಿ ಮೂರು ತಿಂಗಳಿನಲ್ಲಿಯೇ ಮೂರು ವಿಮಾನಗಳು ಪತನಗೊಂಡಿವೆ.
ಫೆ.1ರಂದು ಎಚ್‌ಎಎಲ್ ಸಮೀಪ ಮಿರಾಜ್ ಯುದ್ಧ ವಿಮಾನ ಪತನಗೊಂಡಿತ್ತು. ಫೆ.20ರಂದು ಯಲಹಂಕದಲ್ಲಿ ಏರ್ ಶೋಗೆ ತಾಲೀಮು ನಡೆಸುವ ವೇಳೆ ಎರಡು ಸೂರ್ಯ ಕಿರಣ್ ವಿಮಾನಗಳು ಡಿಕ್ಕಿಯಾಗಿದ್ದವು. ಒಬ್ಬ ಪೈಲೆಟ್ ಮೃತಪಟ್ಟಿದ್ದ.












Click it and Unblock the Notifications